ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಶಸ್ತ್ರ ಹಾಗೂ ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಣೆ ಹೊರಡಿಸಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.
ಬೆಂಗಳೂರು, (ಸೆ.23): ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 3026 ಪುರುಷ ಮತ್ತು ಮಹಿಳಾ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
1013 ಸಶಸ್ತ್ರ ಪೊಲೀಸ್ (ಪುರುಷ ಅಭ್ಯರ್ಥಿಗಳಿಗೆ ಮಾತ್ರ) ಮತ್ತು 2013 ನಾಗರಿಕ ಪೊಲೀಸ್ (ಮಹಿಳಾ&ಪುರುಷ) ಹುದ್ದೆಗಳಿಗೆ ನೇಮಕಾತಿ ನಡೆಯಲಿಯದೆ.
undefined
16000 ಪೊಲೀಸ್ ಪೇದೆ, 630 PSI ನೇಮಕಾತಿ: ಗೃಹ ಸಚಿವರ ಮಹತ್ವದ ಘೋಷಣೆ
ಇಂದಿನಿಂದ ಆನ್ ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಶುರುವಾಗಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಂಕ 17/10/2019ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.
1. ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್:
ವಿದ್ಯಾರ್ಹತೆ: SSLC ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ 17-10-2019 ರೊಳಗೆ ಉತ್ತೀರ್ಣರಾಗಿರಬೇಕು.
ಜಾಬ್ಸ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಯೋಮಿತಿ: ಕನಿಷ್ಟ 18 ವರ್ಷ, ಗರಿಷ್ಟ 25 ವರ್ಷ ಮತ್ತು SC /ST/ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 27 ವರ್ಷ ಹಾಗೂ ಬುಡಕಟ್ಟು ಜನಾಂಗ ಅಭ್ಯರ್ಥಿಗಳಿಗೆ 30 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
2. ಪೊಲೀಸ್ ಕಾನ್ಸ್‌ಟೇಬಲ್ (ನಾಗರಿಕ):
ವಿದ್ಯಾರ್ಹತೆ: ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪಡೆದುಕೊಂಡಿರಬೇಕು.
ವಯೋಮಿತಿ: ಕನಿಷ್ಟ 19 ಗರಿಷ್ಟ 25 ವರ್ಷ, SC /ST/ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 27 ವರ್ಷ ಮತ್ತು ಬುಡಕಟ್ಟು ಜನಾಂಗ ಅಭ್ಯರ್ಥಿಗಳಿಗೆ 30 ವರ್ಷ ವಯೋಮಿತಿ.
ಅರ್ಜಿ ಶುಲ್ಕ: ಮೇಲ್ಕಂಡ ಎರಡು ಹುದ್ದೆಗಳಿಗೆ ಸಾಮಾನ್ಯ ವರ್ಗ, ಪ್ರವರ್ಗ2(ಎ), 2(ಬಿ), 3(ಎ), 3(ಬಿ), ಸೇರಿದ ಅಭ್ಯರ್ಥಿಗಳಿಗೆ 250 ರು. SC/ST, ಪ್ರವರ್ಗ-1 ಅಭ್ಯರ್ಥಿಗಳಿಗೆ 100 ರು. ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಸೆಪ್ಟೆಂಬರ್ 23, 2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 17, 2019
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: ಅಕ್ಟೋಬರ್ 19, 2019
ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ಅಥವಾ ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್ www.ksp.gov.in ಸಂಪರ್ಕಿಸಿ.