Salary Trap: ಹೆಚ್ಚು, ಕಡಿಮೆ ವಿಷಯವಲ್ಲ!‌ 2026ರಲ್ಲಿ ತಿಂಗಳಿಗೆ ನೀವು ಇಷ್ಟು ಸಂಬಳ ತಗೊಂಡ್ರೆ ಸಿಕ್ಕಾಪಟ್ಟೆ ಡೇಂಜರ್

Published : Jul 13, 2026, 02:39 PM IST
Most Dangerous Salary in 2026

ಸಾರಾಂಶ

Most Dangerous Salary in 2026: ತಿಂಗಳಿಗೆ ಒಂದು ಲಕ್ಷ ರೂಪಾಯಿ ಸಂಬಳ ತಗೊಂಡರೆ ಆರಾಮಾಗಿ ಇರಬಹುದು ಎಂದು ಕೆಲವರು ಲೆಕ್ಕ ಹಾಕ್ತಾರೆ. ಆದರೆ ಇದು ಒಳ್ಳೆಯದಲ್ಲ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ. ಈ ಮಾತು ಈಗ ದೊಡ್ಡ ಚರ್ಚೆ ಉಂಟು ಮಾಡಿದೆ.

Most Dangerous Salary in 2026: ಕೆಲವರು ತಿಂಗಳಿಗೆ ಹತ್ತು- ಹದಿನೈದು ಸಾವಿರ ತಗೊಳ್ತಾರೆ, ಇನ್ನೂ ಕೆಲವರು ಒಂದು ಲಕ್ಷ ರೂಪಾಯಿ ತಗೊಂಡರೂ ಕೂಡ ಸಾಕಾಗಲ್ಲ ಎಂದು ಹೇಳೊದುಂಟು. ಒಂದು ಲಕ್ಷ ರೂಪಾಯಿಯಲ್ಲಿ ಐಷಾರಾಮಿ ಜೀವನವನ್ನೇ ನಡೆಸಬಹುದು ಬಿಡಿ. 2026 ರಲ್ಲಿ ಪಡೆಯಬಹುದಾದ ಅತ್ಯಂತ ಅಪಾಯಕಾರಿ ಸಂಬಳ ಎಂದು ಮಹಿಳೆ ಹೇಳಿದ್ದಾರೆ.

ಬೌಂಡರಿ ಹಾಕುತ್ತದೆ

ಈ ಸಂಬಳವು ಕೆಲವರಿಗೆ ಸಾಕಾಗುವುದಿಲ್ಲ ಎನ್ನುವ ಕಾರಣಕ್ಕೆ ಅಪಾಯಕಾರಿಯಲ್ಲ, ಬದಲಿಗೆ ದೊಡ್ಡ ಗುರಿಗಳ ಕಡೆಗೆ ಗಮನ ಕೊಡದೆ ಆರಾಮಾಗಿ ಇರುತ್ತಾರೆ ಎಂದು ಅವರು ಹೇಳಿದ್ದಾರೆ. ಕಂಟೆಂಟ್ ಕ್ರಿಯೇಟರ್ ನಿಧಿ ಕುಶ್ವಾಹಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಒಂದು ವಿಡಿಯೋ ಶೇರ್‌ ಮಾಡಿದ್ದಾರೆ. ತಿಂಗಳಿಗೆ ₹1 ಲಕ್ಷ ರೂಪಾಯಿ ಗಳಿಸುವುದು ಕರಿಯರ್‌, ಪರ್ಸನಲ್ ಲೈಫ್‌ಗೆ ಹೇಗೆ ಬೌಂಡರಿ ಮಾಡುತ್ತದೆ ಎಂದು ವಿವರಣೆ ನೀಡಿದ್ದಾರೆ.

ಆರಾಮಾಗಿರ್ತೀರಿ

"2026 ರಲ್ಲಿ ತಿಂಗಳಿಗೆ 1 ಲಕ್ಷ ರೂಪಾಯಿ ಗಳಿಸುವುದು ಅತ್ಯಂತ ಡೇಂಜರ್. ಈ ಸಂಬಳ ಸಾಕು ಎಂದು ನೀವು ಸುಮ್ಮನಾಗ್ತೀರಿ, ಹೊಸದಾಗಿ ಏನಾದರೂ ಮಾಡಬೇಕು ಎಂದು ನೀವು ಯೋಚನೆ ಮಾಡೋದಿಲ್ಲ. ಅಷ್ಟು ಕಂಫರ್ಟ್‌ ನೀಡುತ್ತದೆ. ಮನೆ ಬಾಡಿಗೆ, ಹೋಟೆಲ್‌ ಊಟ, ವರ್ಷಕ್ಕೆ ಒಂದೆರಡು ಪ್ರವಾಸ, ಮೂಲಭೂತ ಅಗತ್ಯಗಳಿಗೋಸ್ಕರ ಈ ಹಣ ಸಾಕು. ಹೀಗಾಗಿ ಅವರು ಬೇರೆ ಯೋಚನೆ ಮಾಡೋದಿಲ್ಲ, ರಿಸ್ಕ್‌ ತಗೊಳ್ಳೋದಿಲ್ಲ ಎಂದು ಕಾಶ್ವಾಹಾ ಹೇಳಿದ್ದಾರೆ.

ಬೆಳವಣಿಗೆ ನಿಲ್ಲುತ್ತದೆ

"ನೀವು ಮನೆ ಬಾಡಿಗೆ ಕಟ್ಟಬಹುದು, ವೀಕೆಂಡ್‌ನಲ್ಲಿ ಡಿನ್ನರ್ ಮಾಡಬಹುದು, ವರ್ಷಕ್ಕೆ ಒಂದೆರಡು ಬಾರಿ ಟೂರ್‌ ಮಾಡಬಹುದು, ಸೌಕರ್ಯಗಳು ಸಿಗುತ್ತವೆ. ಇದೇ ಅತಿ ದೊಡ್ಡ ಬಲೆಯಾಗಿದೆ. ನಿಮ್ಮ ಬಳಿ ಎಲ್ಲವೂ ಇದ್ದಾಗ, ಇನ್ನೂ ಹೆಚ್ಚಿನದ್ದು ಏಕೆ ಬೇಕು? ಎಂದು ಯೋಚಿಸೋದಿಲ್ಲ. ಲೈಫ್‌ ಸೆಟ್ ಆಗಿದೆ ಎಂದು ಅಂದುಕೊಂಡ್ರೆ ನಿಮ್ಮ ಬೆಳವಣಿಗೆ ನಿಲ್ಲುತ್ತದೆ. ತಿಂಗಳಿಗೆ ಒಂದು ಲಕ್ಷ ರೂಪಾಯಿ ಸಂಬಳ ಸೇಫ್‌ ಎಂದೆನಿಸುತ್ತದೆ. ಇದೇ ನಿಜವಾದ ಸಮಸ್ಯೆ. ಸಾಮರ್ಥ್ಯದ ಕೊರತೆಯಿಂದಲ್ಲ, ಬದಲಿಗೆ ಕಂಫರ್ಟ್‌ ಜಾಗ ಎಂದು ಒಂದೇ ಕಡೆ ಇರುತ್ತಾರೆ” ಎಂದಿದ್ದಾರೆ.

ಈ ಮಾತನ್ನು ಕೆಲವರು ಒಪ್ಪಿದರೆ, ಇನ್ನೂ ಕೆಲವರು ವಿರೋಧ ಮಾಡಿದ್ದಾರೆ. ಜೀವನದಲ್ಲಿ ಬೆಳೆಯುವುದು ಅಥವಾ ಸುಧಾರಣೆ ಎಂದರೆ ಯಾವಾಗಲೂ ಹಣದ ಹಿಂದೆ ಓಡುವುದಲ್ಲ ಎಂದಿದ್ದಾರೆ. ತಿಂಗಳಿಗೆ ₹10 ಲಕ್ಷ ಸಂಬಳ ಗಳಿಸುವುದರ ಬಗ್ಗೆ ಏನು ಹೇಳ್ತೀರಿ ಎಂದು ಕೂಡ ಕೆಲವರು ಪ್ರಶ್ನೆ ಮಾಡಿದ್ದಾರೆ. "ಪ್ರಾಮಾಣಿಕವಾಗಿ ಹೇಳಬೇಕು ಅಂದ್ರೆ, ಇಲ್ಲಿ ಸಂಖ್ಯೆಗಿಂತ ನಮ್ಮ ಮನಸ್ಥಿತಿ ಮುಖ್ಯ” ಎಂದು ಹೇಳಿದ್ದಾರೆ.

PREV
Read more Articles on
click me!

Recommended Stories

ಸಂಬಳ ₹23 ಸಾವಿರ, ಸಾಲ ಮಾತ್ರ ಲಕ್ಷಗಳಲ್ಲಿ! ರೆಡ್ಡಿಟ್‌ನಲ್ಲಿ ವೈರಲ್ ಆದ ಯುವಕನ ಕಥೆ
ಪಕ್ಕದಲ್ಲಿ ಕೂರುತ್ತಿದ್ದ ಮಹಿಳೆ ಮಾಡಿದ ಕೆಲಸಕ್ಕೆ ಸಹದ್ಯೋಗಿ ಕರಿಯರ್‌ಗೆ ಕುತ್ತು ತಂದ ಮ್ಯಾನೇಜರ್!