
Toxic Work Environment: ಕಂಪೆನಿಗಳಲ್ಲಿ ಮ್ಯಾನೇಜರ್, ಸಹದ್ಯೋಗಿಗಳ ಕಿರುಕುಳ, ಗಾಸಿಪ್, ಪಾಲಿಟಿಕ್ಸ್, ತಾರತಮ್ಯ ಎಲ್ಲ ಇರುವುದು. ಇಲ್ಲೋರ್ವ ಉದ್ಯೋಗಿಗೆ ಮ್ಯಾನೇಜರ್ ಬೆದರಿಕೆ ಹಾಕಿದ್ದಾರಂತೆ. ಪರ್ಸನಲ್ ನೋಟ್ ಮಾಡಲು ಸಹಾಯ ಮಾಡಿದ್ದೀಯಾ, ನಿನ್ನ ಕರಿಯರ್ ಹಾಳು ಮಾಡ್ತೀನಿ ಎಂದು ಮ್ಯಾನೇಜರ್ ಬೆದರಿಕೆ ಹಾಕಿದ್ದಾರೆ.
ಪರ್ಸನಲ್ ನೋಟ್ ಮಾಡಲು ನಾನು ಯಾವುದೇ ಸಹಾಯ ಮಾಡಿಲ್ಲ. ಆ ಉದ್ಯೋಗಿ ಪಕ್ಕದಲ್ಲಿ ಕೂರುತ್ತಿದ್ದ ಕಾರಣ, ನಮ್ಮನ್ನು ಬಲಿಪಶು ಮಾಡ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
“ಸಹೋದ್ಯೋಗಿಯ ಪರ್ಸನಲ್ ನೋಟ್ ಮಾಡಿದ್ದಾರೆ. ಹೀಗಾಗಿ ಕರಿಯರ್ ಹಾಳು ಮಾಡ್ತೀನಿ ಎಂದು ಮ್ಯಾನೇಜರ್ ಬೆದರಿಕೆ ಹಾಕಿದ್ದಾನೆ, ಏನು ಮಾಡಲಿ? ನಮ್ಮ ಟೀಂನಲ್ಲಿದ್ದ ಮಹಿಳೆಗೆ ಬೇರೆ ಉದ್ಯೋಗಿಗಳ ಜೊತೆ ಸಮಸ್ಯೆ ಇತ್ತು, ನನ್ನ ಬಗ್ಗೆ ಗಾಸಿಪ್ ಮಾಡ್ತಾರೆ, ಕೆಟ್ಟದಾಗಿ ಬಿಹೇವ್ ಮಾಡ್ತಾರೆ ಎಂದು ಅವರು ಅಂದುಕೊಂಡಿದ್ದರು” ಎಂದು ಅವರು ಹೇಳಿದ್ದಾರೆ.
ಆ ಸಹೋದ್ಯೋಗಿ ಒಂದು ಎಕ್ಸೆಲ್ ಶೀಟ್ ರೆಡಿ ಮಾಡಿದ್ದಾರೆ. ಅದರಲ್ಲಿ ಹಲವು ಸಹೋದ್ಯೋಗಿಗಳ ಹೆಸರುಗಳನ್ನು ಬರೆದಿದ್ದಾರೆ. ಆಯಾ ಹೆಸರಿನ ಮುಂದೆ ನನ್ನನ್ನು ಕೆಟ್ಟದಾಗಿ ನೋಡುತ್ತಾರೆ, ನನ್ನ ಬೆನ್ನ ಹಿಂದೆ ಮಾತನಾಡುತ್ತಾರೆ, ಕೆಟ್ಟ ಸನ್ನೆ ಮಾಡ್ತಾರೆ ಎಂದೆಲ್ಲ ಕಾಮೆಂಟ್ ಮಾಡಿದ್ದರು. ಆ ಸಹದ್ಯೋಗಿ ಮನೆಗೆ ಹೋದ್ಮೇಲೆ ಮ್ಯಾನೇಜರ್ ಆ ಎಕ್ಸೆಲ್ ಶೀಟ್ ಹುಡುಕಿದ್ದಾರೆ. ಆಮೇಲೆ ನನ್ನ ಬಳಿ ಬಂದು ಕೂಗಾಡಿದ್ದಾರೆ. ನಾನು ಆ ಸಹದ್ಯೋಗಿ ಪಕ್ಕದಲ್ಲಿ ಕೂರ್ತೀನಿ, ಅವರಿಗೆ ಕ್ಲೋಸ್ ಎಂಬ ಕಾರಣಕ್ಕೆ ಬೈಯ್ದರು.
"ಈ ಸಮಸ್ಯೆಯಲ್ಲಿ ನನ್ನ ಹೆಸರು ಏನಾದರೂ ಬಂದರೆ, ನನ್ನ ಕರಿಯರ್ ಹಾಳುಮಾಡ್ತೀನಿ” ಎಂದು ಹೇಳಿದ್ದಾರೆ. ಆ ಎಕ್ಸೆಲ್ ಶೀಟ್ ರೆಡಿ ಆದ ಬಗ್ಗೆ ಕೂಡ ನನಗೆ ಯಾವುದೇ ಮಾಹಿತಿ ಇರಲಿಲ್ಲ, ಅದನ್ನು ರೆಡಿ ಮಾಡೋಕೆ ಸಹಾಯ ಮಾಡಿಲ್ಲ, ಆ ನಡವಳಿಕೆಯನ್ನು ಕೂಡ ನಾನು ಎಂದಿಗೂ ಸಪೋರ್ಟ್ ಮಾಡಿಲ್ಲ. ಇದನ್ನು ನಾನು ರೆಕಾರ್ಡ್ ಮಾಡಬೇಕಾ? HR ಕಾಂಟ್ಯಾಕ್ಟ್ ಮಾಡಬೇಕಾ? ಇದರಿಂದ ದೂರ ಇರಲಾ? ಎಂದು ಅವರು ಹೇಳಿದ್ದಾರೆ.
ಈ ಘಟನೆ ಬಗ್ಗೆ ಕೇಳಿದವರು ಸೋಶಿಯಲ್ ಮೀಡಿಯಾದಲ್ಲಿ, “ಇದಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಇಟ್ಟುಕೊಳ್ಳಿ. ಇದರಿಂದ ದೂರ ಇರಿ, ಈ ಬಗ್ಗೆ ಚರ್ಚೆ ಮಾಡದಂತೆ ಮ್ಯಾನೇಜರ್‌ಗೆ ಹೇಳಿ” ಎಂದು ಸಲಹೆ ನೀಡಿದ್ದಾರೆ.
ಮತ್ತೊಬ್ಬರು HR ಕಾಂಟ್ಯಾಕ್ಟ್ ಮಾಡಿ, ಇದರಲ್ಲಿ HR ಸೇರಿಸಿಕೊಳ್ಳಿ. ಏನು ನಡೆದಿದೆ, ನಿಮ್ಮ ಮ್ಯಾನೇಜರ್ ನಿಮಗೆ ಹೇಗೆ ಬೆದರಿಕೆ ಹಾಕಿದ್ದಾರೆ ಎಂಬುದನ್ನು ವಿವರಿಸಿ ಎಚ್‌ಆರ್‌ಗೆ ಮೇಲ್ ಕಳುಹಿಸಿ. ಉದ್ಯೋಗಿಗಳು ಎಲ್ಲವನ್ನೂ ದಾಖಲಿಸಿಡಬೇಕು, ತಮ್ಮ ಪರವಾಗಿ ಧ್ವನಿ ಎತ್ತಬೇಕು ಎಂದು ಹೇಳಿದ್ದಾರೆ.
ಮ್ಯಾನೇಜರ್ ಮೊದಲಿಗೆ ಆ ದಾಖಲೆಯನ್ನು ಹೇಗೆ ಪತ್ತೆಹಚ್ಚಿದರು ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ. ಎಚ್‌ಆರ್ ಸಂಪರ್ಕಿಸುವುದು ಉತ್ತಮ, ಆದರೆ ಅಧಿಕೃತ ಸಂವಹನ ಮಾಧ್ಯಮಗಳನ್ನು ಮಾತ್ರ ಬಳಸಿ. ಮ್ಯಾನೇಜರ್ ಜೊತೆ ಚರ್ಚೆ ಮಾಡುವಾಗ HR ಉಪಸ್ಥಿತಿ ಇರುವಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.