ಗರಿಷ್ಠ ಟಿ20 ಲೀಗ್ ಟ್ರೋಫಿ ಗೆದ್ದ ತಂಡಗಳ ಪೈಕಿ ಮುಂಬೈ ಇಂಡಿಯನ್ಸ್‌ಗೆ 3ನೇ ಸ್ಥಾನ!

By Suvarna NewsFirst Published Nov 14, 2020, 3:36 PM IST
Highlights

IPL ಟೂರ್ನಿಯಲ್ಲಿ ಬೆಸ್ಟ್ ತಂಡ ಯಾವುದು ಎಂದರೆ ಮುಂಬೈ ಇಂಡಿಯನ್ಸ್ ಅನ್ನೋ ಉತ್ತರ ಸ್ಪಷ್ಟ. ಕಾರಣ 2020ರ ಐಪಿಎಲ್ ಟ್ರೋಫಿ ಗೆಲ್ಲೋ ಮೂಲಕ 5 ಬಾರಿ ಟ್ರೋಫಿ ಗೆದ್ದುಕೊಂಡಿದೆ. ಐಪಿಎಲ್, ಬಿಗ್ ಬ್ಯಾಶ್ ಲೀಗ್, ಕೆರಿಬಿಯನ್ ಪ್ರಿಮೀಯರ್ ಲೀಗ್ ಸೇರಿದಂತೆ  ಆಯಾ ದೇಶದ ಟಿ20 ಲೀಗ್ ಟೂರ್ನಿಗಳಲ್ಲಿ ಗರಿಷ್ಠ ಟ್ರೋಫಿ ಗೆದ್ದ ತಂಡಗಳ ವಿವರ ಇಲ್ಲಿವೆ.
 

ಬೆಂಗಳೂರು(ನ.14): IPL 2020 ಟೂರ್ನಿ ಕೊರೋನಾ ಕಾರಣ ಹಲವು ವಿಶೇಷತೆಗಳಿಂದ ಕೂಡಿತ್ತು. ರೋಚಕ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ ಮುಂಬೈ 5 ಬಾರಿ ಟ್ರೋಫಿ ಗೆದ್ದ ಸಾಧನೆ ಮಾಡಿದೆ. ಇನ್ನು 2ನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ 3 ಬಾರಿ ಟ್ರೋಫಿ ಗೆದ್ದುಕೊಂಡಿದೆ. ಆಯಾ ದೇಶ ಟಿ20 ಲೀಗ್ ಟೂರ್ನಿಗಳಿಗೆ ಹೋಲಿಸಿದರೆ ಗರಿಷ್ಠ ಟ್ರೋಫಿ ಗೆದ್ದ ತಂಡಗಳ ಪೈಕಿ ಮುಂಬೈ ಇಂಡಿಯನ್ಸ್‌ಗೆ 3ನೇ ಸ್ಥಾನ.

5ನೇ ಬಾರಿ IPL ಚಾಂಪಿಯನ್ ಪಟ್ಟ ಅಲಂಕರಿಸಿದ ಮುಂಬೈ ಇಂಡಿಯನ್ಸ್!.

ಆಸ್ಟ್ರೇಲಿಯಾ, ಸೌತ್ ಆಫ್ರಿಕಾ, ಪಾಕಿಸ್ತಾನ ಸೇರಿದಂತೆ ಆಯಾ ದೇಶಗಳಲ್ಲಿ ಟಿ20 ಲೀಗ್ ಟೂರ್ನಿಗಳಿವೆ. ಇತ್ತೀಚೆಗೆ ಐಪಿಎಲ್ ರೀತಿಯಲ್ಲಿ ಪ್ರಿಮಿಯರ್ ಲೀಗ್ ಟೂರ್ನಿಗಳನ್ನು ಆಯೋಜಿಸುತ್ತಿದೆ. ಇದರಲ್ಲಿ ಗರಿಷ್ಠ ಟ್ರೋಫಿ ಗೆದ್ದ ಸಾಧನೆ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ 3ನೇ ಸ್ಥಾನ ಪಡೆದುದುಕೊಂಡಿದೆ. ಮುಂಬೈ ಇಂಡಿಯನ್ಸ್ 5 ಬಾರಿ ಟ್ರೋಫಿ ಗೆದ್ದ ಸಾಧನೆ ಮಾಡಿದೆ. 

ಈ ಸಲ ಅತ್ಯಂತ ಸ್ಪರ್ಧಾತ್ಮಕ ಐಪಿಎಲ್ ಆವೃತ್ತಿ..!..

2013, 2015, 2017, 2019 ಹಾಗೂ 2020 ರಲ್ಲಿ ಮುಂಬೈ ಇಂಡಿಯನ್ಸ್ ಐಪಿಎಲ್ ಟ್ರೋಫಿ ಗೆದ್ದಿದೆ. 2019 ಹಾಗೂ 2020ರಲ್ಲಿ ಟ್ರೋಫಿ ಗೆಲ್ಲೋ ಮೂಲಕ ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಂಡ 2ನೇ ಐಪಿಎಲ್ ತಂಡ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದಕ್ಕೂ ಮೊದಲು 2010 ಹಾಗೂ 2011ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಸಾಧನೆ ಮಾಡಿದೆ.

ಗರಿಷ್ಠ ಟ್ರೋಫಿ ಗೆದ್ದ ಸಾಧನೆಯಲ್ಲಿ ಸೌತ್ ಆಫ್ರಿಕಾ ಡೋಮೆಸ್ಟ್ ಲೀಗ್ ಟೂರ್ನಿಯಲ್ಲಿ ಟೈಟಾನ್ಸ್ ತಂಡ 6 ಬಾರಿ ಟ್ರೋಫಿ ಗೆದ್ದಿದೆ.  2004–05, 2007–08, 2011–12, 2015–16, 2016–17 ಮತ್ತು 2017–18ರಲ್ಲಿ ಟೈಟಾನ್ಸ್ ತಂಡ ಟ್ರೋಫಿ ಗೆದ್ದುಕೊಂಡಿದೆ.

ಪಾಕಿಸ್ತಾನ ನ್ಯಾಷನಲ್ ಟಿ20 ಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ಸೈಲ್‌ಕೋಟ್ ತಂಡ 6 ಬಾರಿ ಟ್ರೋಫಿ ಗೆದ್ದಿದೆ. ವಿಶೇಷ ಅಂದರೆ 2005/2006 ರಿಂದ 2009/10 ರ ವರೆಗೆ ಸತತ 5 ಟ್ರೋಫಿ ಗೆದ್ದ ಸೈಲ್‌ಕೋಟ್ 2016ರಲ್ಲಿ 6ನೇ ಟ್ರೋಫಿ ಗೆದ್ದುಕೊಂಡಿದೆ.

click me!