
ಮುಂಬೈ(ನ.12): ಐಪಿಎಲ್ 2020 ಟೂರ್ನಿ ಅಂತ್ಯಗೊಂಡಿದೆ. ಮುಂಬೈ ಇಂಡಿಯನ್ಸ್ ಟ್ರೋಫಿ ಗೆಲ್ಲೋ ಮೂಲಕ ಇತಿಹಾಸ ರಚಿಸಿದೆ. ಮುಂಬೈ ಇಂಡಿಯನ್ಸ್ ತಂಡದ ಟ್ರೋಫಿ ಗೆಲುವಿನಲ್ಲಿ ಕ್ರುನಾಲ್ ಪಾಂಡ್ಯ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಟ್ರೋಫಿ ಗೆದ್ದ ಬಳಿಕ ಕ್ರುನಾಲ್ ಪಾಂಡ್ಯ ದುಬೈನಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ್ದಾರೆ. ಆದರೆ ವಿಮಾನ ನಿಲ್ದಾಣದಲ್ಲಿ ಕ್ರುನಾಲ್ ಪಾಂಡ್ಯ ಸಂಕಷ್ಟಕ್ಕೆ ಸಿಲುಕಿ್ದದಾರೆ.
5ನೇ ಬಾರಿ IPL ಚಾಂಪಿಯನ್ ಪಟ್ಟ ಅಲಂಕರಿಸಿದ ಮುಂಬೈ ಇಂಡಿಯನ್ಸ್!.
ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕ್ರುನಾಲ್ ಪಾಂಡ್ಯ ಹಾಗೂ ಪತ್ನಿ ಬಳಿ ಹೆಚ್ಚುವರಿ ಚಿನ್ನ ಹಾಗೂ ಇತರ ಬೆಲೆ ಬಾಳುವ ವಸ್ತು ಪತ್ತೆಯಾಗಿದೆ. ಕ್ರುನಾಲ್ ಪಾಂಡ್ಯ ದಂಪತಿಗಳನ್ನು ಮುಂಬೈ ವಿಮಾನ ನಿಲ್ದಾಣದ ಡೈರೆಕ್ಟೊರೇಟ್ ರೆವೆನ್ಯೂ ಇಂಟಿಲೆಜೆನ್ಸಿ(DRI) ತಡೆದು ಪರಿಶೀಲನೆ ನಡೆಸಿದ್ದಾರೆ.
IPL 2020: ಪಡಿಕ್ಕಲ್ ಉದಯೋನ್ಮುಖ ಆಟಗಾರ, ಮತ್ಯಾರಿಗೆ ಸಿಕ್ತು ಯಾವೆಲ್ಲಾ ಅವಾರ್ಡ್..?..
ನಿಯಮದ ಪ್ರಕಾರ ದುಬೈನಿಂದ ಭಾರತಕ್ಕೆ ಬರುವ ಪುರುಷ ಪ್ರಯಾಣಿಕರು 20 ಗ್ರಾಂ ಚಿನ್ನಕ್ಕಿಂತ ಹೆಚ್ಚಿನ ಚಿನ್ನ ಅಂದರೆ 50,000 ರೂಪಾಯಿ ಒಳಗಿನ ಚಿನ್ನವನ್ನು ಸುಂಕವಿಲ್ಲದೆ ತರಲು ಅನುಮತಿ ಇದೆ. ಭಾರತಕ್ಕೆ ಆಗಮಿಸುವವರು ಎಷ್ಟು ಬೇಕಾದರೂ ಚಿನ್ನ ತರುವ ಅವಕಾಶವಿದೆ. ಆದರೆ ಕಸ್ಟಮ್ ಡ್ಯೂಟಿ ನೀಡಬೇಕು. ಆಮದು ಸುಂಕವನ್ನು 12.5% ಕಟ್ಟಿ ಚಿನ್ನ ತರುವ ಅವಕಾಶವಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.