IPL ಆರಂಭಕ್ಕೂ KKR ತಂಡಕ್ಕೆ ಆಘಾತ, ಆಲ್ರೌಂಡರ್ 3 ತಿಂಗಳು ಬ್ಯಾನ್..!

By Suvarna NewsFirst Published Jan 9, 2020, 11:53 AM IST
Highlights

2020ರ ಐಪಿಎಲ್ ಟೂರ್ನಿಗೆ ಕೋಲ್ಕತಾ ನೈಟ್‌ರೈಡರ್ಸ್ ತಂಡ ಕೂಡಿಕೊಂಡಿದ್ದ ಪ್ರಮುಖ ಆಲ್ರೌಂಡರ್ ಮೂರು ತಿಂಗಳು ನಿಷೇಧಕ್ಕೆ ಗುರಿಯಾಗಿದ್ದಾರೆ. ಯಾರು ಆ ಆಟಗಾರ? ಯಾಕೆ ನಿಷೇಧ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್..

ಸಿಡ್ನಿ[ಜ.09]: ಅಕ್ರಮ ಬೌಲಿಂಗ್‌ ಶೈಲಿ ಹಿನ್ನೆಲೆಯಲ್ಲಿ ಆಸ್ಪ್ರೇಲಿಯಾದ ಆಲ್ರೌಂಡರ್‌ ಕ್ರಿಸ್‌ ಗ್ರೀನ್‌ರನ್ನು 3 ತಿಂಗಳ ಕಾಲ ನಿಷೇಧಗೊಳಿಸಲಾಗಿದೆ.  ಈ ತೀರ್ಮಾನ ಕೆಕೆಆರ್ ಪಾಲಿಗೆ ಅಲ್ಪ ಹಿನ್ನಡೆಯಾಗುವ ಸಾಧ್ಯತೆಯಿದೆ. 

ಬಿಗ್ ಬ್ಯಾಶ್ ಲೀಗ್‌ನಲ್ಲಿ ಸತತ 5 ಸಿಕ್ಸರ್ ಚಚ್ಚಿ ಘರ್ಜಿಸಿದ KKR ಬ್ಯಾಟ್ಸ್‌ಮನ್‌..!

ಬಿಗ್‌ಬ್ಯಾಶ್‌ ಲೀಗ್‌ನಲ್ಲಿ ಆಡುತ್ತಿರುವ ಅವರ ಬೌಲಿಂಗ್‌ ಶೈಲಿಯ ಬಗ್ಗೆ ಅನುಮಾನ ಮೂಡಿದ ಕಾರಣ, ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷೆಯಲ್ಲಿ ಅವರ ಬೌಲಿಂಗ್‌ ಶೈಲಿ ನಿಯಮಕ್ಕೆ ಅನುಗುಣವಾಗಿಲ್ಲ ಎನ್ನುವುದು ದೃಢಪಟ್ಟ ಕಾರಣ ಕ್ರಿಕೆಟ್‌ ಆಸ್ಪ್ರೇಲಿಯಾ ಈ ಕಠಿಣ ನಿರ್ಧಾರ ಕೈಗೊಂಡಿದೆ. 

IPL 2020: ಹರಾಜಿನ ಬಳಿಕ KKR ತಂಡದ ಸಂಪೂರ್ಣ ವಿವರ!

ಕಳೆದ ತಿಂಗಳು ನಡೆದಿದ್ದ ಐಪಿಎಲ್‌ ಆಟಗಾರರ ಹರಾಜಿನಲ್ಲಿ ಗ್ರೀನ್‌ರನ್ನು 20 ಲಕ್ಷಕ್ಕೆ ಕೋಲ್ಕತಾ ನೈಟ್‌ ರೈಡ​ರ್ಸ್ ತಂಡ ಖರೀದಿಸಿತ್ತು. ನಿಷೇಧಕ್ಕೊಳಗಾಗಿರುವ ಗ್ರೀನ್‌ ಐಪಿಎಲ್‌ನಲ್ಲಿ ಪಾಲ್ಗೊಳ್ಳುವುದು ಬಹುತೇಕ ಅನುಮಾನವೆನಿಸಿದೆ. ಕ್ರಿಸ್‌ ಗ್ರೀನ್‌ ನಿಷೇಧದ ಅವಧಿ ಮಾರ್ಚ್ 29ರವರೆಗೆ ಇರಲಿದ್ದು, ಐಪಿಎಲ್ ಟೂರ್ನಿಯು ಮಾರ್ಚ್ ಕೊನೆಯ ವಾರ  ಆರಂಭವಾಗುವ ಸಾಧ್ಯತೆಯಿದೆ.  

2019ರ ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಗಯಾನಾ ಅಮೇಜಾನ್ ವಾರಿಯರ್ಸ್ ತಂಡವನ್ನು ಪ್ರತಿನಿಧಿಸಿದ್ದ ಕ್ರಿಸ್‌ ಗ್ರೀನ್‌ 13 ವಿಕೆಟ್ ಕಬಳಿಸುವ ಮೂಲಕ ತಂಡವನ್ನು ಫೈನಲ್’ಗೇರುವಂತೆ ಮಾಡಿದ್ದರು. 
 

click me!