’ಈ ಸಲ ಕಪ್ ನಮ್ದೇ‘: ವೈರಲ್ ಆಯ್ತು ಡೇಲ್ ಸ್ಟೇನ್ ಕನ್ನಡ ನುಡಿ..!

Suvarna News   | Asianet News
Published : Jan 05, 2020, 02:40 PM IST
’ಈ ಸಲ ಕಪ್ ನಮ್ದೇ‘: ವೈರಲ್ ಆಯ್ತು ಡೇಲ್ ಸ್ಟೇನ್ ಕನ್ನಡ ನುಡಿ..!

ಸಾರಾಂಶ

’ಈ ಸಲ ಕಪ್ ನಮ್ದೇ’- ಅಪ್ಪಟ RCB ಅಭಿಮಾನಿಗಳ ಪಾಲಿಗೆ ಇದು ಎವರ್‌ಗ್ರೀನ್ ಸ್ಲೋಗನ್. ಕಪ್ ನಮ್ದೇ ಘೋಷಣೆ ಮೂಲಕ ಅಭಿಮಾನಿಗಳು ತಂಡಕ್ಕೆ ಹುರುಪು ತುಂಬುತ್ತಲೇ ಬಂದಿದ್ದಾರೆ. ಆದರೆ ಕಪ್ ಮಾತ್ರ ನಮ್ಮದಾಗಿಲ್ಲ. 2020ರ ಐಪಿಎಲ್ ಆರಂಭಕ್ಕೂ ಮುನ್ನ ಡೇಲ್ ಸ್ಟೇನ್ ಇದೇ ಸ್ಲೋಗನ್ ಹೇಳುವ RCB ಅಭಿಮಾನಿಗಳನ್ನು ಪುಳಕಿತರನ್ನಾಗಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಸಿಡ್ನಿ[ಡಿ.05]: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಐಪಿಎಲ್ ಕಪ್ ಗೆಲ್ಲುತ್ತೆ, ಮುಂದಿನ ಬಾರಿ ಕಪ್ ಗೆಲ್ಲುತ್ತೆ ಅಂತ ಅಂದುಕೊಂಡಿದ್ದೇ ಬಂತು. ಆದರೆ 12 ಆವೃತ್ತಿ ಕಳೆದರು ಐಪಿಎಲ್ ಟ್ರೋಫಿ ಎನ್ನುವುದು RCB ಪಾಲಿಗೆ ಗಗನ ಕುಸಮವಾಗಿಯೇ ಉಳಿದಿದೆ.

ಈತನನ್ನು ಖರೀದಿಸಲು 9 ಕೋಟಿ ನೀಡಲು ರೆಡಿಯಾಗಿದ್ದ RCB, ಕೊನೆಗೆ ಹರಾಜಾಗಿದ್ದು 50 ಲಕ್ಷಕ್ಕೆ..!

ಹೀಗಿರುವಾಗಲೇ ಕಳೆದ ಮೂರ್ನಾಲ್ಕು ಆವೃತ್ತಿಗಳಿಂದಲೂ ’ಈ ಸಲ ಕಪ್ ನಮ್ದೇ’ ಎನ್ನುವ ಘೋಷಣೆ RCB  ಅಭಿಮಾನಿಗಳ ಪಾಲಿಗೆ ಹೊಸ ಹುರುಪನ್ನು ನೀಡಿತ್ತು. ತಂಡಕ್ಕೆ ಅಭಿಮಾನಿಗಳು ಇನ್ನಿಲ್ಲದಂತೆ ಸಫೋರ್ಟ್ ಮಾಡಿದರು RCB ಮಾತ್ರ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಸ್ವತಃ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಸಹಾ ಈ ಸಲ ಕಪ್ ನಮ್ದೇ ಅಂದಿದ್ದರು. ಆದರೆ ಕಪ್ ಮಾತ್ರ ನಮ್ಮದಾಗಿರಲಿಲ್ಲ.

ಈ ಸಲ ಕಪ್ ನಮ್ದೇ ಎಂದವರೆಲ್ಲ ಹಿಡಿದದ್ದು ಚಿಪ್ಪೇ...!

ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡಿಕೊಂಡಿರುವ ದಕ್ಷಿಣ ಆಫ್ರಿಕಾ ಅನುಭವಿ ವೇಗಿ ಡೇಲ್ ಸ್ಟೇನ್, ಬಿಗ್ ಬ್ಯಾಶ್ ಲೀಗ್ ಟೂರ್ನಿಯಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡದ ಪರ ಆಡುತ್ತಿದ್ದು RCB ತಂಡಕ್ಕೆ ಜೈ ಅಂದಿದ್ದಾರೆ. ಸ್ಟೇನ್ ಕನ್ನಡದಲ್ಲೇ ’ಈ ಸಲ ಕಪ್ ನಮ್ದೇ’, ಗೋ RCB ಎಂದಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೂರು ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದೆಯಾದರೂ ಒಮ್ಮೆಯೂ ಕಪ್ ಗೆಲ್ಲಲು ಸಫಲವಾಗಿಲ್ಲ. ಇನ್ನು 2016ರ ಬಳಿಕ ಒಮ್ಮೆಯೂ ಪ್ಲೇ ಆಫ್ ಹಂತ ಪ್ರವೇಶಿಸಲು ಕೂಡಾ RCB ಪಡೆಗೆ ಸಾಧ್ಯವಾಗಿಲ್ಲ. ಈ ಬಾರಿ ಹೊಸ ಜೋಶ್’ನಲ್ಲಿ ಕಪ್ ಗೆಲ್ಲಲು ಬೆಂಗಳೂರು ಮೂಲದ ಫ್ರಾಂಚೈಸಿ ರಣತಂತ್ರ ರೂಪಿಸಿದೆ.

RCB ಸೇರಿದ ಕನ್ನಡಿಗ ಪವನ್ ದೇಶಪಾಂಡೆ ಜೊತೆ ಸುವರ್ಣನ್ಯೂಸ್.ಕಾಂ Exclusive ಮಾತು!

2019ರ ಡಿಸೆಂಬರ್ 19ರಂದು ಕೋಲ್ಕತಾದಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ಆಟಗಾರರನ್ನು ಖರೀದಿಸಿದೆ. ಡೇಲ್ ಸ್ಟೇನ್ ಅವರನ್ನು ಮೂಲ ಬೆಲೆ 2 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ RCB ಫ್ರಾಂಚೈಸಿ ಯಶಸ್ವಿಯಾಗಿತ್ತು. 

ಈ ಸಲ ಕಪ್ ನಮ್ದೆ ಎಂದ ಎಬಿಡಿ ಪುತ್ರ; ಎಬಿಡಿ ಆಟೋ ಪ್ರಯಾಣ ಹೇಗಿತ್ತು ನೋಡಿ

ಈ ಸಲನಾದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆದ್ದು, ಈ ಘೋಷಣೆಗೆ ಅರ್ಥ ಬರುವಂತೆ ಮಾಡಲಿ ಎನ್ನುವುದು ಅಸಂಖ್ಯಾತ ಅಭಿಮಾನಿಗಳ ಬಯಕೆಯಾಗಿದೆ. ಈ ಬಾರಿ ಕಪ್ ನಮ್ಮದಾಗುತ್ತೋ, ಚಿಪ್ ನಮ್ಮದಾಗುತ್ತೋ ಎನ್ನುವುದನ್ನು ಕಾಲವೇ ಉತ್ತರಿಸಬೇಕಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಧೋನಿ ಸಸ್ಯಹಾರಿಯೋ, ಮಾಂಸಹಾರಿಯೋ? ಮಹಿ ಇಷ್ಟದ ಆಹಾರ ಬಗ್ಗೆ ಗುಟ್ಟು ಬಿಚ್ಚಿಟ್ಟ ಮಾಜಿ ರೂಮ್‌ಮೇಟ್!
ಐಪಿಎಲ್ ಮಿನಿ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆಗೋದು ಯಾರು? ಅಚ್ಚರಿ ಭವಿಷ್ಯ ನುಡಿದ AI