2020ರ IPL ಆಡಲು ಸಜ್ಜಾದ ಕೈ ಪೋ ಚೆ ಚಿತ್ರದ ಬಾಲ ನಟ!

By Suvarna News  |  First Published Dec 20, 2019, 6:28 PM IST

 ಬಾಲಿವುಡ್ ನಟ ಸುಶಾಂತ್ ಸಿಂಗ್ ಅಭಿನಯದ ಕೈ ಪೋ ಚೆ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಬಾಲ ನಟ ಇದೀಗ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೇರಿಕೊಂಡಿದ್ದಾರೆ. 2020ರ ಐಪಿಎಲ್ ಟೂರ್ನಿ ಆಡಲು ಸಜ್ಜಾಗಿರುವ ಈ ಯುವ ಕ್ರಿಕೆಟಿಗನ ಹೆಚ್ಚಿನ ವಿವರ ಇಲ್ಲಿದೆ.


ಮುಂಬೈ(ಡಿ.20): ಪ್ರತಿಭಾನ್ವಿತ ಕ್ರಿಕೆಟಿಗರನ್ನು ಹುಡುಕಿ ಆರಿಸುವುದರಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಇತರ ತಂಡಗಳಿಗಿಂತ ಮುಂದಿದೆ. ಈ ಬಾರಿಯ ಹರಾಜಿನಲ್ಲೂ ಸಾಬೀತಾಗಿದೆ. ಕೋಲ್ಕತಾದಲ್ಲಿ ನಡೆದ 13ನೇ ಆವೃತ್ತಿ ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್, 21 ವರ್ಷದ ಯುವ ಕ್ರಿಕೆಟಿಗ ದಿಗ್ವಿಜಯ್ ದೇಶಮುಖ್ ಆಯ್ಕೆ ಮಾಡಿದೆ.

ಇದನ್ನೂ ಓದಿ: IPL 2020: ಹರಾಜಿನ ಬಳಿಕ ಮುಂಬೈ ಇಂಡಿಯನ್ಸ್ ಫುಲ್ ಲಿಸ್ಟ್!

Tap to resize

Latest Videos

ದಿಗ್ವಿಜಯ್ ದೇಶಮುಖ್‌ಗೆ ಮೂಲ ಬೆಲೆ 20 ಲಕ್ಷ ರೂಪಾಯಿ ನೀಡಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರಿಸಿಕೊಂಡಿದೆ. ಈ ಯುವ ಆಲ್ರೌಂಡರ್ ಕ್ರಿಕೆಟ್‌ನಲ್ಲಿ ಮಾತ್ರವಲ್ಲ, ಬಾಲಿವುಡ್‌ನಲ್ಲೂ ಸೈ ಎನಿಸಿಕೊಂದ್ದಾನೆ. 7 ವರ್ಷದ ಹಿಂದೆ ದಿಗ್ವಿಜಯ್ ದೇಶಮುಖ್ ಬಾಲಿವುಡ್‍ನ ಕೈ ಪೋ ಚೆ ಚಿತ್ರದಲ್ಲಿ ಆಲಿ ಪಾತ್ರ ನಿಭಾಯಿಸಿ ಎಲ್ಲರಿಂದ ಮೆಚ್ಚುಗೆಗೆ ಗಳಿಸಿದ ಕ್ರಿಕೆಟಿಗ.

ಇದನ್ನೂ ಓದಿ: ಗರಿಷ್ಠ ಮೊತ್ತಕ್ಕೆ ಹರಾಜಾದ ಟಾಪ್ 5 ಕ್ರಿಕೆಟಿಗರಿವರು

14 ವರ್ಷವಿದ್ದಾಗ  ದಿಗ್ವಿಜಯ್ ದೇಶಮುಖ್, ಬಾಲಿವುಡ್ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾನೆ. ಸುಶಾಂತ್ ಸಿಂಗ್ ರಜಪೂತ್, ರಾಜಕುಮಾರ್ ರಾವ್, ಅಮಿತ್ ಸಾದ್, ಮಾನವ್ ಕೌಲ್ ಸೇರಿದಂತೆ ಹಲವು ಸ್ಟಾರ್ ನಟರ ಜೊತೆ ದಿಗ್ವಿಜಯ್ ದೇಶಮುಖ್ ನಟಿಸಿದ್ದಾನೆ. 2013ರಲ್ಲಿ ಬಾಲಿವುಡ್‌ನಲ್ಲಿ ಮಿಂಚಿದ ದೇಶಮುಖ್ ಇದೀಗ 2020ರ ಐಪಿಎಲ್ ಟೂರ್ನಿಯಲ್ಲಿ ಮಿಂಚಲು ರೆಡಿಯಾಗಿದ್ದಾರೆ.

IPL ಹರಾಜು: ಅನ್‌ಸೋಲ್ಡ್ ಆದ ಮುಶ್ಫೀಕರ್ ರಹೀಮ್ ಫುಲ್ ಟ್ರೋಲ್!

2019-20ರ ಸಾಲಿನಲ್ಲಿ ಮಹಾರಾಷ್ಟ್ರದ ರಣಜಿ ತಂಡಕ್ಕೆ ಪದರ್ಪಾಣೆ ಮಾಡಿರುವ ದೇಶಮುಖ್, ಇತ್ತೀಚೆಗೆ ಮುಕ್ತಾಯಗೊಂಡ ಸಯ್ಯದ್ ಮುಷ್ಕಾಕ್ ಆಲಿ ಟೂರ್ನಿಯಲ್ಲಿ ಟಿ20 ಕ್ರಿಕೆಟ್‌ಗೆ ಡೆಬ್ಯೂ ಮಾಡಿದ್ದಾರೆ. 

 

click me!