IPL 2020: ಅಚ್ಚರಿ ಬೆಲೆಗೆ ಹರಾಜಾದ ಟಾಪ್ 5 ಕ್ರಿಕೆಟಿಗರಿವರು

By Suvarna NewsFirst Published Dec 19, 2019, 9:23 PM IST
Highlights

2020ರ ಐಪಿಎಲ್ ಟೂರ್ನಿಗೆ ಅಚ್ಚರಿಯ ಬೆಲೆಗೆ ಹರಾಜಾದ ಟಾಪ್ 5 ಆಟಗಾರರ ಪಟ್ಟಿಯನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

ಕೋಲ್ಕತಾ[ಡಿ.19]: 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಆಟಗಾರರ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಕೆಲ ಆಟಗಾರರು ಗರಿಷ್ಠ ಮೊತ್ತಕ್ಕೆ ಹರಾಜಾದರೆ, ಮತ್ತೆ ಕೆಲವು ಆಟಗಾರರನ್ನು ಖರೀದಿಸಲು ಯಾವ ಫ್ರಾಂಚೈಸಿಯೂ ಮುಂದಾಗಲಿಲ್ಲ. ಇನ್ನು ಕೆಲ ಆಟಗಾರರು ಅಚ್ಚರಿ ಬೆಲೆಗೆ ಹರಾಜಾಗುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

IPL ಹರಾಜು: ಕೊನೆಗೂ RCB ಸೇರಿದ ಲಕ್ಕಿ ಪ್ಲೇಯರ್!

ಹೌದು, ಕೆಲ ಆಟಗಾರರನ್ನು ಖರೀದಿಸಲು 8 ಫ್ರಾಂಚೈಸಿಗಳು ಜಿದ್ದಾಜಿದ್ದಿನ ಹೋರಾಟ ನಡೆಸಿದರು. ಅದರಲ್ಲೂ ಕೆಲವು ಆಟಗಾರರು ನಿರೀಕ್ಷೆಗೂ ಮೀರಿದ ಮೊತ್ತಕ್ಕೆ ಕೆಲ ತಂಡಗಳನ್ನು ಸೇರಿಕೊಂಡಿದ್ದಾರೆ. ಲೆಗ್ ಸ್ಪಿನ್ನರ್ ಪೀಯೂಷ್ ಚಾವ್ಲಾ

ಅಚ್ಚರಿ ಬೆಲೆಗೆ ಹರಾಜಾದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್.ಕಾಂ ಅಚ್ಚರಿ ಬೆಲೆಗೆ ಹರಾಜಾದ ಟಾಪ್ 5 ಆಟಗಾರರನ್ನು ನಿಮ್ಮ ಮುಂದಿಡುತ್ತಿದೆ.

1. ಪೀಯೂಷ್ ಚಾವ್ಲಾ- 6.75 ಕೋಟಿ ರುಪಾಯಿ- ಚೆನ್ನೈ ಸೂಪರ್’ಕಿಂಗ್ಸ್

2. ಶೆಲ್ಡಾನ್ ಕಾಟ್ರೆಲ್- 8.50 ಕೋಟಿ- ಕಿಂಗ್ಸ್ ಇಲೆವನ್ ಪಂಜಾಬ್

3. ನಾಥನ್ ಕೌಲ್ಟರ್-ನೈಲ್- 8 ಕೋಟಿ- ಮುಂಬೈ ಇಂಡಿಯನ್ಸ್

4. ವರುಣ್ ಚಕ್ರವರ್ತಿ- 4 ಕೋಟಿ- ಕೋಲ್ಕತಾ ನೈಟ್ ರೈಡರ್ಸ್

5. ಮಾರ್ಕಸ್ ಸ್ಟೋನಿಸ್- 4.80 ಕೋಟಿ- ಡೆಲ್ಲಿ ಕ್ಯಾಪಿಟಲ್ಸ್
 

click me!