
ಕೋಲ್ಕತಾ(ಡಿ.19): ಕಳೆದ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲಿನ ಸುಳಿಗೆ ಸಿಲುಕಿದ್ದಾಗ ಮಿಂಚಿನಂತೆ ಬಂದ ಸೌತ್ ಆಫ್ರಿಕಾ ವೇಗಿ ಡೇಲ್ ಸ್ಟೇನ್ ತಂಡದ ಲಕ್ ಬದಲಿಸಿದ್ದರು. ಸ್ಟೇನ್ 3 ಪಂದ್ಯ ಆಡಿ 3ರಲ್ಲೂ RCBಗೆ ಗೆಲುವು ತಂದುಕೊಟ್ಟಿದ್ದರು. ಇದೀಗ ಹರಾಜಿನ ಆರಂಭದಲ್ಲಿ ಅನ್‌ಸೋಲ್ಡ್ ಆಗಿದ್ದ ಡೇಲ್ ಸ್ಟೇನ್ ಅಂತಿಮ ಹಂತದಲ್ಲಿ RCB ಖರೀದಿಸಿದೆ.
IPL ಹರಾಜು: ಕೊನೆಗೂ ಕನ್ನಡಿಗನನ್ನು ಖರೀದಿಸಿದ RCB
ಡೇಲ್ ಸ್ಟೇನ್‌ಗೆ 2 ಕೋಟಿ ರೂಪಾಯಿ ನೀಡಿ RCB ಖರೀದಿಸಿತು. ಈ ಮೂಲಕ ಕಳೆಗುಂದಿದ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಿದೆ. ಕಳೆದ ಆವೃತ್ತಿಯಲ್ಲಿ ಆರಂಭಿಕ 6 ಪಂದ್ಯದಲ್ಲಿ ಸತತ ಸೋಲು ಕಂಡಿದ್ದ RCB, ಡೇಲ್ ಸ್ಟೇನ್ ಆಗಮನದ ಬಳಿಕ ಸತತ 3 ಪಂದ್ಯ ಗೆದ್ದಿತ್ತು.
Live| IPL 2020: 8 ಫ್ರಾಂಚೈಸಿ, 73 ಆಟಗಾರರು, ಯಾರು ಯಾವ ತಂಡಕ್ಕೆ?
ಭುಜದ ನೋವಿಗೆ ತುತ್ತಾದ ಡೇಲ್ ಸ್ಟೇನ್ RCB ತಂಡದಿಂದ ಹೊರಬಿದ್ದರು. ಬಳಿಕ ಇಂಜುರಿ ಗಂಭೀರವಾದ ಕಾರಣ 2019ರ ವಿಶ್ವಕಪ್ ಟೂರ್ನಿಯಿಂದಲೂ ಹೊರಬಿದ್ದಿದ್ದರು. ಇದೀಗ ಸ್ಟೇನ್ ಖರೀದಿಸೋ ಮೂಲಕ ಮತ್ತೆ ಚಾಂಪಿಯನ್ ಬೌಲರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಈ ಬಾರಿಯ ಹರಾಜಿನಲ್ಲಿ RCB ಒಟ್ಟು 8 ಆಟಗಾರರನ್ನು ಖರೀದಿಸಿತು
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.