ಐಪಿಎಲ್ ಹರಾಜಿನಲ್ಲಿ ವಿದೇಶಿಗರತ್ತ ಗಮನ ಕೇಂದ್ರೀಕರಿಸಿದ್ದ RCB ಕೊನೆಗೂ ಕನ್ನಡಿಗನಿಗೆ ಮಣೆ ಹಾಕಿದೆ. ಈ ಮೂಲಕ RCB ತಂಡದಲ್ಲಿ ಇಬ್ಬರು ಕರ್ನಾಟಕದ ಆಟಗಾರರು ಸ್ಥಾನ ಪಡೆದಿದ್ದಾರೆ.
ಕೋಲ್ಕತಾ(ಡಿ.19): ಐಪಿಎಲ್ ಹರಾಜಿ ಆರಂಭದಿಂದ ಅಂತ್ಯದ ವರೆಗೆ ವಿದೇಶಿ ಆಟಗಾರರ ಖರೀದಿಗೆ ಮುಗಿ ಬಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭಾರತೀಯ ಆಟಗಾರರನ್ನು ನಿರ್ಲಕ್ಷಿಸಿತ್ತು. ಆದರೆ ಅಂತಿಮ ಹಂತದಲ್ಲಿ ಕನ್ನಡಿಗನಿಗೆ ಮಣೆ ಹಾಕಿತು. ಅನ್‌ಸೋಲ್ಡ್ ಆಟಗಾರರ ಪಟ್ಟಿಯಿಂದ RCB ಆಲ್ರೌಂಡರ್ ಪವನ್ ದೇಶಪಾಂಡೆ ಖರೀದಿಸಿತು.
undefined
Live| IPL 2020: 8 ಫ್ರಾಂಚೈಸಿ, 73 ಆಟಗಾರರು, ಯಾರು ಯಾವ ತಂಡಕ್ಕೆ?
ಪವನ್ ದೇಶಪಾಂಡೆ ಖರೀದಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಇಬ್ಬರು ಕರ್ನಾಟಕದ ಆಟಗಾರರು ಸ್ಥಾನ ಪಡೆದಿದ್ದಾರೆ. RCB ಈಗಾಗಲೇ ಕರ್ನಾಟಕ ಆಟಗಾರ ದೇವದತ್ ಪಡಿಕ್ಕಲ್ ಉಳಿಸಿಕೊಂಡಿದೆ. ಇದೀಗ ಪವನ್ ದೇಶಪಾಂಡೆ ಖರೀದಿಸಿದೆ.
IPL ಹರಾಜು: RCB ತಂಡಕ್ಕೆ ಮತ್ತಿಬ್ಬರು ಕ್ರಿಕೆಟಿಗರು ಎಂಟ್ರಿ!.
ಹರಾಜಿನಲ್ಲಿ RCB ಖರೀದಿ
ಕ್ರಿಸ್ ಮೊರಿಸ್ = 10 ಕೋಟಿ
ಆರೋನ್ ಫಿಂಚ್ = 4.4 ಕೋಟಿ
ಕೇನ್ ರಿಚರ್ಡ್ಸನ್ = 3 ಕೋಟಿ
ಜೋಶುವಾ ಫಿಲಿಪ್ = 20 ಲಕ್ಷ
ಪವನ್ ದೇಶಪಾಂಡೆ = 20 ಲಕ್ಷ