IPL ಹರಾಜಿನ ಬೆನ್ನಲ್ಲೇ ಉಳಿದ ತಂಡಗಳಿಗೆ ಎಚ್ಚರಿಕೆ ಕೊಟ್ಟ ಕೊಹ್ಲಿ!

By Suvarna News  |  First Published Dec 21, 2019, 4:05 PM IST

2020ನೇ ಐಪಿಎಲ್ ಟೂರ್ನಿಗೆ ಕೋಲ್ಕತಾದಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಖರೀದಿ ಬಗ್ಗೆ ನಾಯಕ ತುಟಿ ಬಿಚ್ಚಿದ್ದಾರೆ. ಕೊಹ್ಲಿ ಏನಂದ್ರು, ನೀವೇ ನೋಡಿ...


ಕಟಕ್[ಡಿ.21]: ಬಹುನಿರೀಕ್ಷಿತ 13ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿಗೆ ತೆರೆಬಿದ್ದಿದೆ. ಕೋಲ್ಕತಾದಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ 8 ತಂಡಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸಿವೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಹ ಕ್ರಿಸ್ ಮೋರಿಸ್, ಆ್ಯರೋನ್ ಫಿಂಚ್ ಸೇರಿದಂತೆ 8 ಆಟಗಾರರನ್ನು ಖರೀದಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಯ್ಕೆ ಬಗ್ಗೆ ನಾಯಕ ವಿರಾಟ್ ಕೊಹ್ಲಿ ತುಟಿ ಬಿಚ್ಚಿದ್ದಾರೆ.

IPL 2020: ಹರಾಜಿನ ಬಳಿಕ RCB ತಂಡದ ಫುಲ್ ಲಿಸ್ಟ್!

Tap to resize

Latest Videos

ಹೌದು, ಕಳೆದ 12 ಆವೃತ್ತಿಗಳಿಂದಲೂ ಕಪ್ ಗೆಲ್ಲಲು ವಿಫಲವಾಗಿರುವ RCB ಈ ಬಾರಿ ಶತಾಯಗತಾಯ ಕಪ್ ಗೆಲ್ಲಲೇಬೇಕು ಎಂದು ಪಣ ತೊಟ್ಟಿದೆ. ಹೀಗಾಗಿ ಆಸೀಸ್ ಸ್ಫೋಟಕ ಬ್ಯಾಟ್ಸ್’ಮನ್ ಆ್ಯರೋನ್ ಫಿಂಚ್, ಆಲ್ರೌಂಡರ್ ಕ್ರಿಸ್ ಮೋರಿಸ್ ಹಾಗೆಯೇ ಡೇಲ್ ಸ್ಟೇನ್ ಅವರನ್ನು ಖರೀದಿಸಿದೆ. ತಂಡದ ಆಯ್ಕೆಯ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಸಂತೋಷ ವ್ಯಕ್ತಪಡಿಸಿದ್ದು, ಎದುರಾಳಿ ತಂಡಕ್ಕೆ ಎಚ್ಚರಿಕೆಯನ್ನು ರವಾನಿಸಿದ್ದಾರೆ. 

RCB ಸೇರಿದ ಕನ್ನಡಿಗ ಪವನ್ ದೇಶಪಾಂಡೆ ಜೊತೆ ಸುವರ್ಣನ್ಯೂಸ್.ಕಾಂ Exclusive ಮಾತು!

ತಂಡದ ಆಯ್ಕೆಯ ಬಗ್ಗೆ ನನಗೆ ಸಂತಸವಿದೆ. ಈ ತಂಡದೊಂದಿಗೆ ಹೊಸ ಆವೃತ್ತಿಯಲ್ಲಿ ಆಡಲು ಎದುರು ನೋಡುತ್ತಿದ್ದೇನೆ. ನಮ್ಮ ತಂಡದ ಎಲ್ಲಾ ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡುವ ವಿಶ್ವಾಸವಿದೆ. ದಿಟ್ಟವಾಗಿ ಆಡುವ ಮೂಲಕ ಒಳ್ಳೆಯ ಪ್ರದರ್ಶನ ನೀಡಲಿದ್ದೇವೆ ಎನ್ನುವುದರ ಮೂಲಕ ಎದುರಾಳಿ ತಂಡಕ್ಕೆ ಪರೋಕ್ಷವಾಗಿ ಎಚ್ಚರಿಕೆ ರವಾನಿಸಿದ್ದಾರೆ.

ಇನ್ನು RCB ನಿರ್ದೇಶಕ ಮೈಕ್ ಹಸನ್, ನಾವು ಸಮತೋಲಿತ ತಂಡ ಕಟ್ಟಲು ಮೊದಲೇ ತೀರ್ಮಾನಿಸಿದ್ದೆವು. ನಮ್ಮ ತಂಡವು ತವರಿನಲ್ಲೇ ಹಾಗೆಯೇ ತವರಿನಾಚೆ ಹೊಂದಿಕೊಳ್ಳುವಂತಹ ಆಟಗಾರರನ್ನು ನಾವು ಖರೀದಿಸಿದ್ದೇವೆ. ತಮ್ಮ ಖರೀದಿ ಸಮಾದಾನ ತಂದಿದೆ ಎಂದರು. ಇನ್ನು ಕರ್ನಾಟಕದ ಪ್ರತಿಭೆ ಪವನ್ ದೇಶ್’ಪಾಂಡೆ ಖರೀದಿ ಬಗ್ಗೆ ಮಾತನಾಡಿರುವ ಹಸನ್, ಪವನ್ ಓರ್ವ ಪ್ರತಿಭಾನ್ವಿಯ ಆಲ್ರೌಂಡರ್ ಆಗಿದ್ದು, ಸ್ಫೋಟಕ ಬ್ಯಾಟಿಂಗ್ ತಂಡಕ್ಕೆ ನೆರವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

IPL 2020: ಹರಾಜಿನ ಬಳಿಕ KKR ತಂಡದ ಸಂಪೂರ್ಣ ವಿವರ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಳೆದ 12 ಆವೃತ್ತಿಯಲ್ಲಿ ಮೂರು ಬಾರಿ ಫೈನಲ್ ಪ್ರವೇಶಿದೆ. ಆದರೆ ಒಮ್ಮೆಯೂ ಕಪ್ ಗೆದ್ದಿಲ್ಲ. 2009, 2011 ಹಾಗೂ 2016ರಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸಿತ್ತಾದರೂ ಕಪ್ ಗೆಲ್ಲಲು ಯಶಸ್ವಿಯಾಗಿರಲಿಲ್ಲ. ಈ ಬಾರಿಯಾದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ಗೆಲ್ಲುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ. 
 

click me!