IPL ಹರಾಜಿಗೆ ಪೌರತ್ವ ಪ್ರತಿಭಟನೆಯ ಬಿಸಿ..!

By Suvarna News  |  First Published Dec 17, 2019, 11:23 AM IST

ಐಪಿಎಲ್ ಆಟಗಾರರ ಹರಾಜಿಗೆ ಇನ್ನೇರಡು ದಿನಗಳು ಬಾಕಿ ಇರುವಾಗಲೇ ಆತಂಕವೊಂದು ಎದುರಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಇದೀಗ ಹರಾಜಿಗೆ ಬಿಸಿ ಮುಟ್ಟಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ನವದೆಹಲಿ[ಡಿ.17]: ಪಶ್ಚಿಮ ಬಂಗಾಳದಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಜಾರಿ ವಿಷಯವಾಗಿ ಪ್ರತಿಭಟನೆ ನಡೆಯುತ್ತಿದ್ದು, ಇದರ ನಡುವೆಯೇ ಡಿ.19ರಂದು ಐಪಿಎಲ್‌ ಆಟಗಾರರ ಹರಾಜು ನಡೆಯಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

IPL 2020: RCB ಮಾಜಿ ವೇಗಿಗೆ ಗಾಳ ಹಾಕಿದ ಡೇವಿಡ್ ವಾರ್ನರ್..!

Tap to resize

Latest Videos

undefined

ಬಂಗಾಳದಲ್ಲಿ ಪ್ರತಿಭಟನೆ ಜೋರಾಗಿದ್ದರೂ, ಕೋಲ್ಕತಾದಲ್ಲಿ ಹೆಚ್ಚೇನೂ ಸಮಸ್ಯೆ ಇಲ್ಲ ಎಂದು ಗಮನಿಸಿರುವುದಾಗಿ ಬಿಸಿಸಿಐ ಮೂಲಗಳು ತಿಳಿಸಿವೆ. ‘ಮಂಗಳವಾರ ಸಂಜೆ ಹಾಗೂ ಬುಧವಾರ ಬೆಳಗ್ಗೆ ಫ್ರಾಂಚೈಸಿಗಳು ಆಗಮಿಸಲಿದ್ದಾರೆ. ಪೂರ್ವ ನಿಗದಿಯಂತೆ ಡಿ.19ರಂದು ಹರಾಜು ಪ್ರಕ್ರಿಯೆ ನಡೆಯಲಿದೆ’ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಪೌರತ್ವ ತಿದ್ದುಪಡಿ ಮಸೂದೆ: ಅಸ್ಸಾಂ ಏಕೆ ಕೊತ ಕೊತ ಕುದಿಯುತ್ತಿದೆ?

ಕಳೆದ 12 ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿಗೆ ಬೆಂಗಳೂರು ಆತಿಥ್ಯ ವಹಿಸಿತ್ತು. ಇದೇ ಮೊದಲ ಬಾರಿಗೆ ಕೋಲ್ಕತಾ ಆಟಗಾರರ ಹರಾಜಿಗೆ ವೇದಿಕೆ ಒದಗಿಸಿದೆ. ಒಟ್ಟು 332 ಆಟಗಾರರ ಹರಾಜಿಗೆ ಲಭ್ಯವಿದ್ದು, ಗ್ಲೆನ್ ಮ್ಯಾಕ್’ವೆಲ್, ಡೇಲ್ ಸ್ಟೇನ್ ಅವರಂತಹ ಆಟಗಾರರು 2 ಕೋಟಿ ರುಪಾಯಿ ಮೂಲಬೆಲೆ ಹೊಂದಿದ್ದಾರೆ. 332 ಆಟಗಾರರ ಪೈಕಿ 8 ಫ್ರಾಂಚೈಸಿಗಳು ಒಟ್ಟು 73 ಆಟಗಾರರನ್ನು ಮಾತ್ರ ಖರೀದಿಸಬಹುದಾಗಿದೆ. ಇನ್ನು 73 ಆಟಗಾರರಲ್ಲಿ 8 ತಂಡಗಳು ಸೇರಿ ಕೇವಲ 29 ವಿದೇಶಿ ಆಟಗಾರರನ್ನು ಖರೀಸದಿಸಲು ಅವಕಾಶವಿದೆ.  

ಡಿಸೆಂಬರ್ 17ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!