IPL ಆಟಗಾರರ ಹರಾಜು: ಈ ಇಬ್ಬರತ್ತ ಎಲ್ಲರ ಚಿತ್ತ..!

By Suvarna News  |  First Published Dec 16, 2019, 12:25 PM IST

ಇದೇ ಡಿಸೆಂಬರ್ 19ರಂದು ನಡೆಯಲಿರುವ ಐಪಿಎಲ್ ಆಟಗಾರರ ಹರಾಜಿನಲ್ಲಿ ಈ ಇಬ್ಬರು ಆಟಗಾರರು ಯಾವ ತಂಡ ಸೇರಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ. ಅಷ್ಟಕ್ಕೂ ಯಾರು ಆ ಕ್ರಿಕೆಟಿಗರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...


ನವದೆಹಲಿ[ಡಿ.16]: 2020ರ ಆವೃತ್ತಿಯ ಐಪಿಎಲ್‌ ಆಟಗಾರರ ಹರಾಜಿಗೆ ಕೇವಲ 3 ದಿನ ಬಾಕಿ ಇದ್ದು, 332 ಆಟಗಾರರು ಅದೃಷ್ಟ ಪರೀಕ್ಷೆಗೆ ಒಳಗಾಗಲಿದ್ದಾರೆ. ಈ ಪೈಕಿ ಇಬ್ಬರು ಆಟಗಾರರ ಮೇಲೆ ಎಲ್ಲರ ಕಣ್ಣಿದೆ. 

ಐವರು ವಿದೇಶಿ ಆಟಗಾರರನ್ನು ಖರೀದಿಸಲು ಮುಂದಾದ RCB, ಇಲ್ಲಿದೆ ವಿವರ!

Tap to resize

Latest Videos

undefined

ಹೌದು, 48 ವರ್ಷದ ಪ್ರವೀಣ್‌ ತಾಂಬೆ ಹಾಗೂ 14 ವರ್ಷದ ಆಫ್ಘಾನಿಸ್ತಾನದ ಬೌಲರ್‌ ನೂರ್‌ ಅಹ್ಮದ್‌ ಬಿಕರಿಯಾದರೆ, ಐಪಿಎಲ್‌ನಲ್ಲಿ ಆಡಲಿರುವ ಅತಿ ಹಿರಿಯ ಹಾಗೂ ಅತಿ ಕಿರಿಯ ಆಟಗಾರ ಎನಿಸಿಕೊಳ್ಳಲಿದ್ದಾರೆ. ತಾಂಬೆ 2016ರ ಬಳಿಕ ಐಪಿಎಲ್‌ ಪಂದ್ಯ ಆಡಿಲ್ಲ. 2017ರಲ್ಲಿ ಸನ್‌ರೈಸ​ರ್ಸ್ ತಂಡದಲ್ಲಿದ್ದರೂ, ಆಡುವ ಅವಕಾಶ ಪಡೆದಿರಲಿಲ್ಲ. ಆದರೂ ಮುಂಬೈ ಮೂಲದ ಬೌಲರ್‌ ದೇಸಿ ಟೂರ್ನಿಗಳಲ್ಲಿ ಉತ್ತಮ ಲಯ ಪ್ರದರ್ಶಿಸಿದ್ದಾರೆ. ತಾಂಬೆ ಇದುವರೆಗೂ 61 ಟಿ20 ಪಂದ್ಯಗಳನ್ನಾಡಿದ್ದು, 67 ವಿಕೆಟ್ ಪಡೆದಿದ್ದಾರೆ. ಇನ್ನು 33 ಐಪಿಎಲ್ ಪಂದ್ಯಗಳನ್ನಾಡಿರುವ ತಾಂಬೆ 28 ವಿಕೆಟ್ ಪಡೆದಿದ್ದಾರೆ.

IPL ಹರಾಜಿನಲ್ಲಿರುವ ಆಟಗಾರರ ಅಂತಿಮ ಪಟ್ಟಿ; ಉದಯೋನ್ಮುಖ ಕ್ರಿಕೆಟಿಗರ ಪೈಪೋಟಿ!

ಇದೇ ಡಿಸೆಂಬರ್ 19ರಂದು ಕೋಲ್ಕತಾದಲ್ಲಿ ನಡೆಯಲಿರುವ ಆಟಗಾರರ ಹರಾಜಿಗೆ ಬಿಸಿಸಿಐ ಒಟ್ಟು 332 ಆಟಗಾರರ ಹೆಸರನ್ನು ಅಂತಿಮಗೊಳಿಸಿದ್ದು, ಇದರಲ್ಲಿ 186 ಭಾರತೀಯ ಆಟಗಾರರು ಹಾಗೆಯೇ 143 ವಿದೇಶಿ ಆಟಗಾರರು ಸ್ಥಾನ ಪಡೆದಿದ್ದಾರೆ. ಇನ್ನು 14 ವರ್ಷದ ಚೈನಾಮನ್ ಸ್ಪಿನ್ನರ್ ಖ್ಯಾತಿಯ ನೂರ್ ಅಹಮ್ಮದ್ ಇದುವರೆಗೂ 7 ಟಿ20 ಪಂದ್ಯಗಳನ್ನಾಗಿ 8 ವಿಕೆಟ್ ಪಡೆದಿದ್ದಾರೆ. 
 

click me!