ಕೊರೋನಾ ವೈರಸ್ ಆತಂಕದ ನಡುವೆ ಐಪಿಎಲ್ ಟೂರ್ನಿ!

By Suvarna NewsFirst Published Mar 7, 2020, 9:39 AM IST
Highlights

ಕೊರೋನಾ ವೈರಸ್‌ನಿಂದ ಭಾರತದಲ್ಲಿ ನಡೆಯಬೇಕಿದ್ದ ವಿಶ್ವಕಪ್ ಶೂಟಿಂಗ್ ಸೇರಿದಂತೆ ಹಲವು ಕ್ರೀಡೆಗಳನ್ನು ಮುಂದೂಡಲಾಗಿದೆ. ಇದೀಗ ವೈರಸ್ ಆತಂಕ ಐಪಿಎಲ್‌ಗೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕರೋನಾ ವೈರಸ್ ಆತಂಕದ ನಡುವೆ ಐಪಿಎಲ್ ಟೂರ್ನಿ ನಡೆಯುವುದು ಸ್ಪಷ್ಟವಾಗಿದೆ. 

ಕೋಲ್ಕತಾ(ಮಾ.07): ವಿಶ್ವದ ಬಹುತೇಕ ರಾಷ್ಟ್ರಗಳು ಕೊರೋನಾ ವೈರಸ್‌ನಿಂದ ಸಮಸ್ಯೆ ಎದುರಿಸುತ್ತಿದ್ದು, ಹತ್ತಾರು ಕ್ರೀಡಾಕೂಟಗಳು, ಟೂರ್ನಿಗಳು ರದ್ದಾಗಿವೆ ಇಲ್ಲವೇ ಮುಂದೂಡಲ್ಪಟ್ಟಿವೆ. ಆದರೆ ಮಾರಕ ವೈರಸ್‌ನ ಭೀತಿಯ ನಡುವೆಯೇ 13ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ನಡೆಸುವ ದುಸ್ಸಾಹಸಕ್ಕೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಕೈಹಾಕಿದೆ. ಶುಕ್ರವಾರ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಪೂರ್ವನಿಗದಿಯಂತೆ ಐಪಿಎಲ್‌ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ರವೀಂದ್ರ ಜಡೇಜಾಗೆ ಅನುಮತಿ ನಿರಾಕರಿಸಿದ ಬಿಸಿಸಿಐ ಅಧ್ಯಕ್ಷ ಗಂಗೂಲಿ!.

ಭಾರತ ಹಾಗೂ ಅಂತಾರಾಷ್ಟ್ರೀಯ ತಾರಾ ಕ್ರಿಕೆಟಿಗರು ಪಾಲ್ಗೊಳ್ಳುವ ಐಪಿಎಲ್‌, ಮಾ.29ರಿಂದ ಆರಂಭಗೊಳ್ಳಲಿದ್ದು ಮೊದಲ ಪಂದ್ಯ ಮುಂಬೈನಲ್ಲಿ ನಡೆಯಲಿದೆ. ಭಾರತದಲ್ಲಿ ಕೊರೋನಾ ಸೋಂಕಿಗೆ ತುತ್ತಾಗಿರುವವರ ಸಂಖ್ಯೆ 31ಕ್ಕೇರಿದ್ದು, 85 ದೇಶಗಳಲ್ಲಿ 3300 ಮಂದಿ ಸಾವನ್ನಪ್ಪದ್ದು, ಒಟ್ಟಾರೆ 1 ಲಕ್ಷಕ್ಕೂ ಹೆಚ್ಚು ಮಂದಿ ಬಾಧಿತರಾಗಿದ್ದಾರೆ.

‘ಐಪಿಎಲ್‌ ಖಂಡಿತ ನಡೆಯಲಿದೆ. ಎಲ್ಲೆಡೆ ಟೂರ್ನಿಗಳು ನಡೆಯುತ್ತಿವೆ. ಇಂಗ್ಲೆಂಡ್‌ ತಂಡ ಶ್ರೀಲಂಕಾದಲ್ಲಿ ಸರಣಿ ಆಡುತ್ತಿದೆ. ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಆಗಮಿಸಲಿದೆ. ಇನ್ನಿತರ ತಂಡಗಳು ಯುಎಇ, ಅಬು ಧಾಬಿಗೆ ಪ್ರಯಾಣಿಸುತ್ತಿವೆ. ದೇಸಿ ಟಿ20 ಟೂರ್ನಿಗಳು ಚಾಲ್ತಿಯಲ್ಲಿವೆ. ಹೀಗಾಗಿ ಯಾವುದೇ ಸಮಸ್ಯೆ ಇಲ್ಲ’ ಎಂದು ಗಂಗೂಲಿ ಹೇಳಿದರು.

6,6,6,6,6 ಧೋನಿ ಸುನಾಮಿ, CSK ಅಭ್ಯಾಸದ MSD ಸಿಕ್ಸರ್ ಸುರಿಮಳೆ!

ಐಪಿಎಲ್‌ನಲ್ಲಿ ಆಸ್ಪ್ರೇಲಿಯಾ, ನ್ಯೂಜಿಲೆಂಡ್‌, ದ.ಆಫ್ರಿಕಾ, ಕೆರಿಬಿಯನ್‌ ದ್ವೀಪ ರಾಷ್ಟ್ರಗಳ ಆಟಗಾರರು ಪಾಲ್ಗೊಳ್ಳಲಿದ್ದು, ಆ ದೇಶಗಳಲ್ಲಿ ಕೊರೋನಾ ಸೋಂಕಿನ ಸಮಸ್ಯೆ ಹೆಚ್ಚೇನಿಲ್ಲ. ಹೀಗಾಗಿ ಟೂರ್ನಿ ಆಯೋಜಿಸಲು ತೊಂದರೆ ಇಲ್ಲ ಎನ್ನುವುದು ಬಿಸಿಸಿಐ ಅಭಿಪ್ರಾಯವಾಗಿದೆ.

ವೈದ್ಯಕೀಯ ತಂಡದಿಂದ ಮುನ್ನೆಚ್ಚರಿಕೆ: ಐಪಿಎಲ್‌ ವೇಳೆ ಯಾವುದೇ ತೊಂದರೆಯಾಗದಂತೆ ಬಿಸಿಸಿಐ ವೈದ್ಯಕೀಯ ತಂಡ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಗಂಗೂಲಿ ಹೇಳಿದರು. ‘ವೈದ್ಯಕೀಯ ತಂಡ ಪಂದ್ಯಗಳು ನಡೆಯುವ ಪ್ರತಿ ನಗರಗಳಲ್ಲೂ ಆಸ್ಪತ್ರೆಗಳನ್ನು ಸಂಪರ್ಕಿಸಿ, ಅಗತ್ಯ ಸೌಲಭ್ಯಗಳ ಬಗ್ಗೆ ಮಾಹಿತಿ ಕಲೆಹಾಕಿದೆ. ವೈದ್ಯರು ಹೇಗೆ ಹೇಳುತ್ತಾರೋ ಹಾಗೆ ಮಾಡಲಿದ್ದೇವೆ. ಐಪಿಎಲ್‌ ಮಾತ್ರವಲ್ಲ, ಬಿಸಿಸಿಐ ಆಯೋಜಿಸುವ ಪ್ರತಿ ಟೂರ್ನಿ ನಿಗದಿಯಾಗಿರುವ ವೇಳಾಪಟ್ಟಿಯಂತೆಯೇ ನಡೆಯಲಿದೆ’ ಎಂದರು ಗಂಗೂಲಿ ತಿಳಿಸಿದರು.

ಹರ್ಭಜನ್ ಸಿಂಗ್ To ರವೀಂದ್ರ ಜಡೇಜಾ; IPLನಿಂದ ಬ್ಯಾನ್ ಆಗಿದ್ದ ಐವರು ಕ್ರಿಕೆಟರ್ಸ್!...

ಚಿವಾಲಯದಿಂದ ಸಹಾಯ: ಶುಕ್ರವಾರ ಬಿಸಿಸಿಐನ ಹಿರಿಯ ಅಧಿಕಾರಿಗಳು ಕ್ರೀಡಾ ಸಚಿವಾಲಯದ ಅಧಿಕಾರಿಗಳನ್ನು ಸಂಪರ್ಕಿಸಿ, ದೇಶದಲ್ಲಿ ಕೊರೋನಾ ವೈರಸ್‌ನಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಕೋರಿದರು. ಐಪಿಎಲ್‌ ಆಯೋಜನೆಗೆ ಎದುರಾಗಬಹುದಾದ ತೊಂದರೆಗಳ ಬಗ್ಗೆಯೂ ತಿಳಿದುಕೊಂಡರು. ಕ್ರೀಡಾ ಸಚಿವಾಲಯದ ಅಧಿಕಾರಿಗಳು, ಹೆಚ್ಚಿನ ಮಾಹಿತಿಗಾಗಿ ಆರೋಗ್ಯ ಸಚಿವಾಲಯವನ್ನು ಸಂಪರ್ಕಿಸುವಂತೆ ಸೂಚಿಸಿದರು ಎಂದು ತಿಳಿದುಬಂದಿದೆ.

ಒಂದೆಡೆ ಐಪಿಎಲ್‌ ಆಯೋಜನೆಗೆ ಯಾವುದೇ ಆತಂಕವಿಲ್ಲ ಎಂದು ಹೇಳುತ್ತಿದ್ದರೂ, ಪರಿಸ್ಥಿತಿ ಬಗ್ಗೆ ಬಿಸಿಸಿಐ ಅಧಿಕಾರಿಗಳಲ್ಲಿ ಆತಂಕ ಶುರುವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಆತಂಕ ಏಕೆ? 
ಐಪಿಎಲ್‌ ಪಂದ್ಯಗಳನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ 30000-40000 ಪ್ರೇಕ್ಷಕರು ಆಗಮಿಸುತ್ತಾರೆ. ಬೆವರುವುದು, ಆಟಗಾರರನ್ನು ಹುರಿದುಂಬಿಸಲು ಕೂಗುವುದರಿಂದ ರೋಗ ಹರಡುವ ಸಾಧ್ಯತೆ ಹೆಚ್ಚಿರಲಿದೆ. ಬಿಸಿಸಿಐ ಅನಗತ್ಯವಾಗಿ ಎಲ್ಲರನ್ನೂ ಅಪಾಯಕ್ಕೆ ಸಿಲುಕಿಸಲಿದೆ ಎಂದು ಹೈದರಾಬಾದ್‌ನಲ್ಲಿರುವ ಭಾರತೀಯ ವೈದ್ಯಕೀಯ ಸಂಸ್ಥೆಯ ಅಧ್ಯಕ್ಷ ಸಂಜೀವ್‌ ಸಿಂಗ್‌ ಯಾದವ್‌ ಹೇಳಿದ್ದಾರೆ. ಕ್ರೀಡಾಂಗಣಕ್ಕೆ ಆಗಮಿಸುವ ಪ್ರತಿಯೊಬ್ಬರನ್ನೂ ಪರೀಕ್ಷೆಗೆ ಒಳಪಡಿಸಿ ನಂತರ ಒಳಕ್ಕೆ ಬಿಡಬೇಕು. ಆದರೆ ಅಷ್ಟೊಂದು ಸಮಯ ಇರುವುದಿಲ್ಲ. ಸೂಕ್ತ ಕ್ರಮಗಳನ್ನು ಕೈಗೊಳ್ಳದೆ ಹೋದರೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಕೇರಳದ ವೈದ್ಯರೊಬ್ಬರು ಅಭಿಪ್ರಾಯಿಸಿದ್ದಾರೆ.

IPL 2020: ಆರ್‌ಸಿಬಿ ತಂಡದ ಸಹಾಯಕ ಸಿಬ್ಬಂದಿಯ ಸಂಪೂರ್ಣ ಲಿಸ್ಟ್!

ಐಪಿಎಲ್‌ ಟೂರ್ನಿ ರದ್ದಾದರೆ, ಮುಂದೂಡಿದರೆ ಏನಾಗುತ್ತದೆ?
ಸ್ಟಾರ್‌ ಸ್ಪೋಟ್ಸ್‌ರ್‍ ವಾಹಿನಿ ಐಪಿಎಲ್‌ ಪ್ರಸಾರ ಹಕ್ಕು 5 ವರ್ಷಗಳಿಗೆ .16500 ಕೋಟಿ ಕೊಟ್ಟು ಖರೀದಿಸಿದೆ. ಐಪಿಎಲ್‌ 13ನೇ ಆವೃತ್ತಿ ರದ್ದಾದರೆ ಪ್ರಸಾರ ಹಕ್ಕು ಹೊಂದಿರುವ ಸಂಸ್ಥೆಗೆ ಕೋಟ್ಯಂತರ ರುಪಾಯಿ ನಷ್ಟವಾಗಲಿದೆ. ಪ್ರತಿ ಪಂದ್ಯಕ್ಕೂ ವಿಮೆ ಮಾಡಿಸಲಾಗಿರುತ್ತದೆಯಾದರೂ, ಜಾಹೀರಾತು ಮೊತ್ತವನ್ನು ಸ್ಟಾರ್‌ ಸಂಸ್ಥೆ ಕಳೆದುಕೊಳ್ಳಲಿದೆ. ಪ್ರಾಯೋಜಕರಿಂದ ಬಿಸಿಸಿಐಗೂ ಕೋಟ್ಯಂತರ ರುಪಾಯಿ ಹಣ ಹರಿದು ಬರಲಿದ್ದು, ಈ ಆವೃತ್ತಿ ರದ್ದಾದರೆ ಭಾರೀ ನಷ್ಟವಾಗಲಿದೆ.

ಬಿಸಿಸಿಐ ಟೂರ್ನಿಯನ್ನು ಮುಂದೂಡಲು ನಿರ್ಧರಿಸಿದರೂ ಸಮಸ್ಯೆ ಎದುರಾಗಲಿದೆ. ಮಾಚ್‌ರ್‍ನಿಂದ ಮೇ ವರೆಗೂ ಮಾತ್ರ ಯಾವುದೇ ಪ್ರತಿಷ್ಠಿತ ಅಂ.ರಾ.ಕ್ರಿಕೆಟ್‌ ಟೂರ್ನಿಗಳು ನಡೆಯುವುದಿಲ್ಲ. ಅಲ್ಲದೇ ಈ ವರ್ಷ ಟಿ20 ವಿಶ್ವಕಪ್‌ ಸಹ ಇರುವ ಕಾರಣ, 13ನೇ ಆವೃತ್ತಿಯನ್ನು ಮುಂದೂಡಲು ಸಾಧ್ಯವಾಗುವುದಿಲ್ಲ.

click me!