ಗೆಲುವಿಗಾಗಿ ವಿಂಡೀಸ್ ಕ್ರಿಕೆಟಿಗನ ಕರೆ ತಂದ ಸನ್‌ರೈಸರ್ಸ್!

By Suvarna NewsFirst Published Oct 22, 2020, 7:44 PM IST
Highlights

ಪ್ಲೇ ಆಫ್ ರೇಸ್‌ಗಾಗಿ ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈರ್ಸ್ ಹೈದರಾಬಾದ್ ಹೋರಾಟ ನಡೆಸುತ್ತಿದೆ. ಗೆಲ್ಲಲೇಬೇಕಾದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ವಿಂಡೀಸ್ ಬಿಗ್ ಮ್ಯಾನ್ ಹೈದರಾಬಾದ್ ತಂಡ ಸೇರಿಕೊಂಡಿದ್ದಾರೆ.
 

ದುಬೈ(ಅ.22): 13ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ 8 ತಂಡಗಳು ಜಿದ್ದಾ ಜಿದ್ದಿನ ಹೋರಾಟ ನಡೆಸುತ್ತಿದೆ. ಇದೀಗ ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಪ್ಲೇ ಆಫ್ ರೇಸ್‌ ಆಸೆ ಜೀವಂತವಾಗಿರಿಸಲು ಹೋರಾಟ ನಡೆಸುತ್ತಿದೆ. ರಾಜಸ್ಥಾನ ವಿರುದ್ಧದ ಗೆಲ್ಲಲೇಬೇಕು ಎಂಬ ಹಠದಲ್ಲಿರುವ ಹೈದರಾಬಾದ್ ತಂಡಕ್ಕೆ ವೆಸ್ಟ್ ಇಂಡೀಸ್ ಬಿಗ್ ಮ್ಯಾನ್ ಜೇಸನ್ ಹೋಲ್ಡರ್ ಸೇರಿಸಿಕೊಳ್ಳಲಾಗಿದೆ.

ಐಪಿಎಲ್ ಲೀಗ್‌ನಿಂದ ಕಿಕೌಟ್‌ ಪಕ್ಕಾ: ಚೆನ್ನೈ ಇಂದಿನ ಸ್ಥಿತಿಗೆ ಕಾರಣ ಯಾರು ಗೊತ್ತಾ?.

ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಇಷ್ಟೇ ಅಲ್ಲ ತಂಡದಲ್ಲಿ ಮಹತ್ತರ 2 ಬದಲಾವಣೆ ಮಾಡಲಾಗಿದೆ. ಜೇಸನ್ ಹೋಲ್ಡರ್ ಹಾಗೂ ಶಹಭಾಜ್ ನದೀಮ್ ತಂಡ ಸೇರಿಕೊಂಡಿದ್ದಾರೆ.

 

A look at the Playing XI for pic.twitter.com/FZFjqo08zy

— IndianPremierLeague (@IPL)

ಆದರೆ ರಾಜಸ್ಥಾನ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇತ್ತ ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನ ಎಚ್ಚರಿಕೆಯ ಆರಂಭ ಪಡೆದಿದೆ.
 

click me!