ಕೆಕೆಆರ್ ವಿರುದ್ಧ ಆರ್‌ಸಿಬಿಗೆ ಭರ್ಜರಿ ಗೆಲವು/ ಎಂಟು ವಿಕೆಟ್ ಜಯ ಸಾಧನೆ/ ಯಾವ ಹಂತದಲ್ಲಿಯೂ ಹಿಡಿತ ಬಿಟ್ಟುಕೊಡದ ಬೆಂಗಳೂರು/ ಪ್ಲೇ ಆಫ್ ಹತ್ತಿರಕ್ಕೆ ಆರ್‌ಸಿಬಿ
ಅಬುದಾಬಿ(ಅ. 21) ಭರ್ಜರಿ ಬೌಲಿಂಗ್ ಮತ್ತು ಬ್ಯಾಟಿಂಗ್ ಪ್ರದರ್ಶನ ಮಾಡಿದ ಆರ್ ಸಿಬಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಕೇವಲ 84 ರನ್ ಗೆ ಕಟ್ಟಿಹಾಕಿದ್ದ ಆರ್ ಸಿಬಿ ಕೇವಲ 13.3 ಓವರ್ ನಲ್ಲಿ ಗುರಿ ಮುಟ್ಟಿತು.
ಈ ಮೂಲಕ ಎರಡು ಅಂಕ ದಾಖಲಿಸಿಕೊಂಡು ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿತು. ಕೋಲ್ಕತ್ತಾ ಯಾವ ಹಂತದಲ್ಲಿಯೂ ಪಂದ್ಯದ ಮೇಲೆ ಹಿಡಿತ ಸಾಧಿಸಲೇ ಇಲ್ಲ. ಆರಂಭಿಕರಾದ ಪಿಂಚ್ ಮತ್ತು ಪಡಿಕಲ್ ಉತ್ತಮ ಸ್ಟಾರ್ಟ್ ಒದಗಿಸಿದರು. ದೇವದತ್ ಪಡಿಕಲ್ 25 ರನ್ ಕೊಡುಗೆ ನೀಡಿದರೆ ಪಿಂಚ್ 16 ರನ್ ದಾಖಲಿಸಿದರು. ನಾಯಕ ವಿರಾಟ್ ಕೊಹ್ಲಿ ಮತ್ತು ಗುರು ಕೀರತ್ ಸಿಂಗ್ ಬಾಕಿ ಉಳಿದ ಕೆಲಸ ಮುಗಿಸಿದರು.
undefined
ಧೋನಿ ಪಡೆಯಿಂದ ಬಟ್ಲರ್ ಗೆ ಭರ್ಜರಿ ಗಿಫ್ಟ್
ಕೋಲ್ಕತ್ತಾ ಪರ ಪೆರ್ಗೂಸನ್ ಒಂದು ವಿಕೆಟ್ ಕಿತ್ತರು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೋಲ್ಕತ್ತಾಗೆ ಆರಂಭದಲ್ಲೆ ಸಿರಾಜ್ ಆಘಾತ ನೀಡಿದ್ದರು. ತಮ್ಮ ವೃತ್ತಿ ಜೀವನ್ ಮೂನ್ನೂರನೇ ಇಯಾನ್ ಮಾರ್ಗನ್ ಒಬ್ಬರನ್ನು ಬಿಟ್ಟರೆ ಯಾರೂ ಪ್ರತಿರೋಧ ತೋರಲಿಲ್ಲ. ಕೊನೆಯಲ್ಲಿ ಪೆರ್ಗೂಸನ್ ಮತ್ತು ಕುಲದೀಪ್ ಯಾದವ್ ತಡೆ ಹಾಕಿ ರನ್ ಗತಿ ಕೊಂಚ ಏರಿಸಿದ್ದರು.
ಮೊದಲಿನಿಂದಲೂ ಆಕ್ರಮಣಕಾರಿ ತಂತ್ರಗಾರಿಗೆ ಪ್ರದರ್ಶನ ಮಾಡಿದ ಆರ್ಸಿಬಿ ಕ್ಷೇತ್ರ ರಕ್ಷಣೆಯಲ್ಲೂ ಹಿಡಿತ ಸಾಧಿಸಿತ್ತು. ಒಟ್ಟಿನಲ್ಲಿ ಆರ್ ಸಿಬಿ ಅಭಿಮಾನಿಗಳಿಗೆ ಇದೊಂದು ಗಿಫ್ಟ್ ಎಂದೇ ಹೇಳಬಹುದು.