IPL 2020: ಡೆಲ್ಲಿ ವಿರುದ್ಧದ ಪಂದ್ಯಕ್ಕೆ KXIP ಸಂಭವನೀಯ ತಂಡ; ಯಾರಿಗಿದೆ ಚಾನ್ಸ್?

By Suvarna NewsFirst Published Sep 20, 2020, 3:04 PM IST
Highlights
  • ಕಿಂಗ್ಸ್ ಇಲೆವೆನ್ ಪಂಜಾಬ್ vs ಡೆಲ್ಲಿ ಕ್ಯಾಪಿಟಲ್ಸ್ ಹೋರಾಟ
  • 13ನೇ ಆವೃತ್ತಿ ಐಪಿಎಲ್ ಟೂರ್ನಿಯ 2 ಲೀಗ್ ಪಂದ್ಯ
  • ಪಂಜಾಬ್ ತಂಡದ ಸಂಭವನೀಯ ಆಟಗಾರರ ಪಟ್ಟಿ ಇಲ್ಲಿದೆ

ದುಬೈ(ಸೆ.20): 13ನೇ ಆವೃತ್ತಿ ಐಪಿಎಲ್ ಟೂರ್ನಿ ಅದ್ಧೂರಿಯಾಗಿ ಆರಂಭಗೊಂಡಿದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್ ಶುಭಾರಂಭ ಮಾಡಿದೆ. ಇದೀಗ 2ನೇ ಪಂದ್ಯದಲ್ಲಿ ಕನ್ನಡಿಗರಿಂದ ತುಂಬಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಯುವ ಹಾಗೂ ಅನುಭವಿ ಪಡೆಯನ್ನು ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗುತ್ತಿದೆ.

8 ರಲ್ಲಿ 7 IPL ತಂಡದಲ್ಲಿ ವಿದೇಶಿ ಕೋಚ್: ಅಸಮಾಧಾನ ವ್ಯಕ್ತಪಡಿಸಿದ ಕುಂಬ್ಳೆ

ಪಂಜಾಬ್ ತಂಡದ ಪ್ರಮುಖ ಆಕರ್ಷರಣೆ ಕನ್ನಡಿಗರು. ನಾಯಕ ಕೆಎಲ್ ರಾಹುಲ್, ಕೋಚ್ ಅನಿಲ್ ಕುಂಬ್ಳೆ ಸೇರಿದಂತೆ ಬಹುದೊಡ್ಡ ಕನ್ನಡಿಗರ ಪಡೆ ಪಂಜಾಬ್ ತಂಡದಲ್ಲಿದೆ. ಕುಂಬ್ಳೆ ಮಾರ್ಗದರ್ಶದಲ್ಲಿ ಟೀಂ ಇಂಡಿಯಾ ಅತ್ಯುತ್ತಮ ತಂಡವಾಗಿ ಮಾರ್ಪಟ್ಟಿತ್ತು. ಹೀಗಾಗಿ ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಕುಂಬ್ಳೆ ಮಾರ್ಗದರ್ಶನದಲ್ಲಿ ಪಂಜಾಬ್ ಟ್ರೋಫಿ ಗೆದ್ದರೂ ಆಶ್ಚರ್ಯವಿಲ್ಲ.

ಬಯಲಾಯ್ತು ಸೀಕ್ರೇಟ್: KXIP ಮ್ಯಾಕ್ಸ್‌ವೆಲ್ ದುಬಾರಿ ಮೊತ್ತಕ್ಕೆ ಖರೀದಿಸಿದ್ದೇಕೆ..?

13ನೇ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಅಭಿಯಾನ ಇಂದಿನಿಂದ(ಸೆ.20) ಆರಂಭಗೊಳ್ಳುತ್ತಿದೆ. ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರಿಸಲು ಸಜ್ಜಾಗಿದೆ. ಇಂದಿನ ಪಂದ್ಯಕ್ಕೆ ಪಂಜಾಬ್ ತಂಡದಲ್ಲಿ ಯಾರೆಲ್ಲ ಸ್ಥಾನ ಪಡೆಯಲಿದ್ದಾರೆ. ಎಷ್ಟು ಕನ್ನಡಿಗರು ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಕುತೂಹಲಕ್ಕೆ ಸುವರ್ಣನ್ಯೂಸ್.ಕಾಂ ಸಂಭನೀಯ ತಂಡದ ಮೂಲಕ ಉತ್ತರ ನೀಡುತ್ತಿದೆ. 

KXIP ಸಂಭವನೀಯ ಆಟಗಾರರ ಪಟ್ಟಿ
ಕ್ರಿಸ್‌ ಗೇಲ್‌, ಕೆ.ಎಲ್‌.ರಾಹುಲ್‌ (ನಾಯಕ), ಮಯಾಂಕ್‌ ಅಗರ್‌ವಾಲ್‌, ಸರ್ಫರಾಜ್‌ ಖಾನ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮನ್‌ದೀಪ್‌ ಸಿಂಗ್‌, ಕೆ.ಗೌತಮ್‌, ಮೊಹಮದ್‌ ಶಮಿ, ಮುಜೀಬ್‌ ಉರ್‌ ರಹಮಾನ್‌, ಕ್ರಿಸ್‌ ಜೊರ್ಡನ್‌, ರವಿ ಬಿಶ್ನೋಯ್‌.

ಮೂವರು ಕನ್ನಡಿಗರಾದ ನಾಯಕ ಕೆಎಲ್ ರಾಹುಲ್, ಮಂಯಾಂಕ್ ಅಗರ್ವಾಲ್ ಹಾಗೂ ಕೆ,ಗೌತಮ್ ಸ್ಥಾನ ಬಹುತೇಕ ಪಕ್ಕಾ ಆಗಿದೆ. ಕೋಚ್ ಕುಂಬ್ಳೆ ಹಾಗೂ ನಾಯಕ ಕೆಎಲ್ ರಾಹುಲ್ ಅಂತಿಮ ಕ್ಷಣದಲ್ಲಿ ಕೆಲ ಬದಲಾವಣೆ ಮಾಡುವ ಸಾಧ್ಯತೆಯೂ ಹೆಚ್ಚಿದೆ. ಪಿಚ್ 

ಪಿಚ್‌ ರಿಪೋರ್ಟ್‌
ದುಬೈ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಯಾಗಿದ್ದು, ಉತ್ತಮ ಮೊತ್ತ ನಿರೀಕ್ಷಿಸಬಹುದು. ಸ್ಪಿನ್ನರ್‌ಗಳಿಗೆ ಪಿಚ್‌ ನೆರವು ನೀಡಲಿದೆ. ಇಬ್ಬನಿ ಬೀಳುವ ಸಾಧ್ಯತೆ ಇದ್ದು, 2ನೇ ಇನ್ನಿಂಗ್ಸ್‌ನಲ್ಲಿ ಬೌಲ್‌ ಮಾಡುವುದು ಕಷ್ಟವಾಗಬಹುದು.
 

click me!