IPL 2020: ಉದ್ಘಾಟನಾ ಪಂದ್ಯದಲ್ಲಿ ಮುಂಬೈಗೆ ಸೋಲುಣಿಸಿದ CSK!

By Suvarna NewsFirst Published Sep 19, 2020, 11:30 PM IST
Highlights

13ನೇ ಆವೃತ್ತಿ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಶುಭಾರಂಭ ಮಾಡಿದೆ. ತೀವ್ರ ಕುತೂಹಲ ಕೆರಳಿದ್ದ ಪಂದ್ಯದಲ್ಲಿ ಧೋನಿ ಚಾಣಾಕ್ಷ ನಾಯಕತ್ವ, ಅಂಬಾಟಿ ರಾಯುಡು ಹಾಗೂ ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್ ನೆರವಿನಿಂದ ಸಿಎಸ್‌ಕೆ ಗೆಲುವಿನ ನಗೆ ಬೀರಿದೆ.

ಅಬುು ಧಾಬಿ(ಸೆ.19):  ಕೊರೋನಾ ಕಾರಣ ಕೆಲ ಬದಲಾವಣೆಯೊಂದಿಗೆ ಆರಂಭಗೊಂಡಿರುವ 13ನೇ ಆವೃತ್ತಿ ಐಪಿಎಲ್ ಟೂರ್ನಿ ಮೊದಲ ಪಂದ್ಯವೇ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದೆ.  ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ ಗೆಲುವು ಸಾಧಿಸಿದೆ.

"

163 ರನ್ ಟಾರ್ಗೆಟ್ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರಂಭಿಕ ವೈಫಲ್ಯದ ನಡುವೆಯೂ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಶೇನ್ ವ್ಯಾಟ್ಸನ್ ಹಾಗೂ ಮುರಳಿ ವಿಜಯ್ ಜೊತೆಯಾಟದಿಂದ ಕೇವಲ 6 ರನ್ ಮಾತ್ರ ಹರಿದುಬಂತು. ಆದರೆ ಅಂಬಾಟಿ ರಾಯುಡು ಹಾಗೂ ಫಾಫ್ ಡುಪ್ಲೆಸಿಸ್ ಪಂದ್ಯದ ಗತಿಯನ್ನು ಬದಲಿಸಿದರು.

IPL 2020: ಚೆನ್ನೈಗೆ 163 ರನ್ ಟಾರ್ಗೆಟ್ ನೀಡಿದ ಮುಂಬೈ!...

ವಿಕೆಟ್ ಕೈಚೆಲ್ಲದೆ ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿದ ರಾಯುಡು ಹಾಗೂ ಡುಪ್ಲೆಸಿಸ್ ಜೊತೆಯಾಟದಿಂದ ಚೆನ್ನೈ ಚೇತರಿಸಿಕೊಂಡಿತು. ಇದರ ಜೊತೆಗೆ ಗೆಲುವಿನತ್ತ ಹೆಜ್ಜೆ ಇಟ್ಟಿದೆ. ಹಾಫ್ ಸೆಂಚುರಿ ಸಿಡಿಸಿ ಮುನ್ನಗ್ಗುತ್ತಿದ್ದ ರಾಯುಡು 48 ಎಸೆತದಲ್ಲಿ 71 ರನ್ ಸಿಡಿಸಿ ಔಟಾದರು.   ರವೀಂದ್ರ ಜಡೇಜಾ ಜೊತೆಗೂಡಿದ ಡುಪ್ಲೆಸಿಸ್ ಚೆನ್ನೈಗೆ ಆಸರೆಯಾದರು.

ಜಡೇಜಾ ಕೇವಲ 10 ರನ್ ಸಿಡಿಸಿ ನಿರ್ಗಮಿಸಿದರು. ಅಷ್ಟರಲ್ಲಿ ಮುಂಬೈ ಪಂದ್ಯದ ಮೇಲೆ ಹಿಡಿತ ಸಾಧಿಸಲು ಆರಂಭಿಸಿತು.ಆದರೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ.  2 ಸಿಕ್ಸರ್ ಮೂಲಕ ಅಬ್ಬರಿಸಿದ ಸ್ಯಾಮ್ 18  ರನ್ ಸಿಡಿಸಿ ಔಟಾದರು.  ಅಂತಿಮ 10 ಎಸೆತದಲ್ಲಿ ಚೆನ್ನೈ ಗೆಲುವಿಗೆ 10 ರನ್ ಅವಶ್ಯಕತೆ ಇತ್ತು. ಡುಪ್ಲೆಸಿಸ್ ಸಿಡಿಸಿದ ಬೌಂಡರಿ ಸಿಎಸ್‌ಕೆ ಆತಂಕ ದೂರ ಮಾಡಿತು. ಇಷ್ಟೇ ಅಲ್ಲ ಡುಪ್ಲೆಸಿಸ್ ಹಾಫ್ ಸೆಂಚುರಿ ಸಿಡಿಸಿದರು.

ಅಂತಿಮ 6 ಎಸೆತದಲ್ಲಿ ಚೆನ್ನೈ ಗೆಲುವುಗೆ 5 ರನ್ ಅವಶ್ಯಕತೆ ಇತ್ತು. ಡುಪ್ಲೆಸಿಸ್ ಬೌಂಡರಿ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ 19.2 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. 5 ವಿಕೆಟ್ ಗೆಲುವು ಸಾಧಿಸಿದ ಚೆನ್ನೈ ಶುಭಾರಂಭ ಮಾಡಿತು. ಡುಪ್ಲೆಸಿಸ್ ಅಜೇಯ 58 ರನ್ ಸಿಡಿಸಿದರು. ಇತ್ತ ಮುಂಬೈ ಪ್ರತಿ ಆವೃತ್ತಿಗಳಂತೆ ಆರಂಭಿಕ ಪಂದ್ಯದಲ್ಲಿ ಮುಗ್ಗರಿಸುವ ಸಂಪ್ರದಾಯ ಮುಂದುವರಿಸಿತು.

click me!