IPL 2020 ಆಯೋಜನೆ ಕುರಿತು ಭವಿಷ್ಯ ಹೇಳಿದ ಬಿಸಿಸಿಐ ಅಧ್ಯಕ್ಷ ಗಂಗೂಲಿ !

By Suvarna NewsFirst Published Mar 25, 2020, 6:36 PM IST
Highlights

ಕೊರೋನಾ ವೈರಸ್‌ನಿಂದ ಮಾರ್ಚ್ 29ಕ್ಕೆ ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿಯನ್ನು ಬಿಸಿಸಿಐ ಏಪ್ರಿಲ್ 15ಕ್ಕೆ ಮುಂದೂಡಿತ್ತು. ಆದರೆ ಸೋಂಕು ವ್ಯಾಪಿಸುತ್ತಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ಇದೀಗ 21 ದಿನಗಳ ವರೆಗೆ ಭಾರತವನ್ನು ಸಂಪೂರ್ಣವಾಗಿ ಲಾಕ್‌ಡೌನ್ ಮಾಡಿದ್ದಾರೆ. ಇದೀಗ ಬಿಸಿಸಿಐ ಹೇಳಿದ ಐಪಿಎಲ್ ಆಯೋಜನೆ ಗಡುವು ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಅಧ್ಯಕ್ಷ ಸೌರವ್ ಗಂಗೂಲಿ ಐಪಿಎಲ್ ಭವಿಷ್ಯ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಮುಂಬೈ(ಮಾ.25): ಕೊರೋನಾ ವೈರಸ್ ವಿಶ್ವವನ್ನೇ ಆಕ್ರಮಿಸಿಕೊಂಡಿದೆ. ಭಾರದಲ್ಲಿ ಸೋಂಕಿತರ ಸಂಖ್ಯೆ 400ರ ಗಡಿದಾಟಿದ್ದರೆ, ಮೃತರ ಸಂಖ್ಯೆ 11ಕ್ಕೇರಿದೆ. ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 42ಕ್ಕೇರಿದೆ. ಇದೀಗ ಈ ಮಹಾಮಾರಿ ತೊಲಗಿಸಲು ಪ್ರಧಾನಿ ಮೋದಿ ಭಾರತವನ್ನು ಲಾಕ್ ಡೌನ್ ಮಾಡಿದ್ದಾರೆ. ಮಾರ್ಚ್ 25 ರಿಂದ ಎಪ್ರಿಲ್ 16ರ ವರೆಗೆ ಸಂಪೂರ್ಣ ಭಾರತ ಬಂದ್ ಆಗಿದೆ. ಇದೀಗ ಏಪ್ರಿಲ್ 15ಕ್ಕೆ ಐಪಿಎಲ್ ಆಯೋಜಿಸಲು ನಿರ್ಧರಿಸಿದ್ದ ಬಿಸಿಸಿಐ ತನ್ನ ನಿರ್ಧಾರ ಬದಲಿಸಿದೆ.

ಒಂದು ಕಂಡೀಷನ್ ಮೇಲೆ ಕನ್ನಡದಲ್ಲಿ ಯುಗಾದಿ ಹಬ್ಬಕ್ಕೆ ಶುಭಕೋರಿದ ದಿಗ್ಗಜ ಅನಿಲ್ ಕುಂಬ್ಳೆ!

ಮಾರ್ಚ್ 29ಕ್ಕೆ ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿಯನ್ನು ಏಪ್ರಿಲ್ 15ರಿಂದ ಆರಂಭಿಸಲು ನಿರ್ಧರಿಸಿತ್ತು. ಆದರೆ ಕೊರೋನಾ ವೈರಸ್‌ನಿಂದಾಗಿ ಇದೀಗ ಏಪ್ರಿಲ್ 15ಕ್ಕೆ ಅಸಾಧ್ಯವಾಗಿದೆ.  ಐಪಿಎಲ್ ಆಯೋಜನೆ ಕುರಿತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಕ್ರಿಯೆ ನೀಡಿದ್ದಾರೆ. ಮೇನಲ್ಲೂ ಐಪಿಎಲ್ ಆಯೋಜನೆ ಕಷ್ಟ. ಭಾರತದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಬಂದರೂ ಇತರ ದೇಶದ ಅಂತಾರಾಷ್ಟ್ರೀಯ ವಿಮಾನಕ್ಕೆ ನಿರ್ಬಂಧ ಕನಿಷ್ಠ 2 ತಿಂಗಳ ವರೆಗೆ ಮುಂದುವರಿಯುವ ಸಾಧ್ಯತೆ ಇದೆ. ಇಷ್ಟೇ ಅಲ್ಲ ವಿದೇಶಗಳಲ್ಲೂ ಕರೋನಾ ವೈರಸ್ ಹತೋಟಿಗೆ ಬರಬೇಕಿದೆ. ಹೀಗಾಗಿ ಐಪಿಎಲ್ ಆಯೋಜನೆ ಕುರಿತು ಸದ್ಯಕ್ಕೆ ಏನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

10 ದಿನಗಳ ಹಿಂದೆ ಐಪಿಎಲ್ ಟೂರ್ನಿ ಆಯೋಜನೆಯನ್ನು ಬಿಸಿಸಿಐ ಎಪ್ರಿಲ್ 15ಕ್ಕೆ ಮುಂದೂಡಿತ್ತು. ಈ 10 ದಿನಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಈಗಲೂ ನಾವು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಒಲಿಂಪಿಕ್ಸ್ ಸೇರಿದಂತೆ ಪ್ರತಿಷ್ಠಿತ ಟೂರ್ನಿಗಳೇ ರದ್ದಾಗಿದೆ. ಈಗಲೇ ಐಪಿಎಲ್ ಆಯೋಜನೆ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವುದು ಅಸಾಧ್ಯ ಎಂದು ಗಂಗೂಲಿ ಹೇಳಿದ್ದಾರೆ.

click me!