ಹೆಚ್ಚಿದ ಕೊರೋನಾ ವೈರಸ್; ಈ ವರ್ಷ ಐಪಿಎಲ್ ಟೂರ್ನಿ ರದ್ದು?

By Suvarna NewsFirst Published Mar 25, 2020, 9:03 AM IST
Highlights

ವಿಶ್ವದೆಲ್ಲೆಡೆ ಕೊರೋನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿದೆ. ಭಾರತದ ಪರಿಸ್ಥಿತಿಯ ಗಂಭೀರ ಸ್ವರೂಪ ಪಡೆದುಕೊಂಡಿರುವ ಕಾರಣ 21 ದಿನಗಳ ಕಾಲ ಲಾಕ್‌ಡೌನ್ ಮಾಡಲಾಗಿದೆ. ಇದರ ಬೆನ್ನಲ್ಲೇ ಏಪ್ರಿಲ್ 15ರಿಂದ ಆರಂಭಿಸಲು ನಿರ್ಧರಿಸಿದ್ದ ಐಪಿಎಲ್ ಟೂರ್ನಿ ಈ ವರ್ಷ ಆಯೋಜನೆ ಅನುಮಾನವಾಗಿದೆ.
 

ನವದೆಹಲಿ(ಮಾ.25): ಕೊರೋನಾ ವೈರಸ್‌ ವಿಶ್ವದೆಲ್ಲೆಡೆ ಭೀತಿ ಹುಟ್ಟಿಸಿರುವ ಹಿನ್ನೆಲೆಯಲ್ಲಿ 2020ರ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿ ನಡೆಯುವುದರ ಬಗ್ಗೆ ಅನುಮಾನ ಮೂಡಿಸಿದೆ. ಈಗಾಗಲೇ ಬಿಸಿಸಿಐ ಮಾ.29ರಿಂದ ಆರಂಭವಾಗಬೇಕಿದ್ದ ಐಪಿಎಲ್‌ ಟೂರ್ನಿಯನ್ನು ಆಗಸ್ಟ್‌ 15ರವರೆಗೆ ಮುಂದೂಡಿದೆ. ಆ ನಂತರ ಟೂರ್ನಿ ನಡೆಯುತ್ತೋ ಇಲ್ಲವೋ ಎನ್ನುವುದೇ ಅನುಮಾನವಾಗಿದೆ. ಮಂಗಳವಾರ ಇಲ್ಲಿ ನಡೆಯಬೇಕಿದ್ದ ಫ್ರಾಂಚೈಸಿಗಳೊಂದಿಗಿನ ವಿಡಿಯೋ ಕಾನ್ಫರೆನ್ಸ್‌ ಕೂಡ ರದ್ದಾಗಿದೆ.

ಗಂಭೀರ ಸಮಸ್ಯೆ - ಗೃಹಬಂಧನ ಅಥವಾ ಜೈಲು, ನಿಮಗೆ ಯಾವುದೋ ಬೇಕು ಅದು !.

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಪ್ರಕರಣಗಳನ್ನು ಗಮನಿಸಿದರೆ ಇದೀಗ ಏಪ್ರಿಲ್‌ನಲ್ಲಿಯೂ ಟೂರ್ನಿ ನಡೆಯುವುದು ಅಸಾಧ್ಯ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದರ ನಡುವೆಯೇ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಐಪಿಎಲ್‌ ನಡೆಯುವುದರ ಬಗ್ಗೆ ಪ್ರತಿಕ್ರಿಯಿಸಲು ಹಿಂದೇಟು ಹಾಕಿದ್ದಾರೆ. ಇಡೀ ದೇಶವೇ ಸಂಪೂರ್ಣವಾಗಿ ಬಂದ್‌ ಆಗಿದ್ದು, ಮಾಚ್‌ರ್‍ ಅಂತ್ಯದವರೆಗೂ ಯಥಾಸ್ಥಿತಿ ಕಾಪಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ.

ಹೀಗಾಗಿ ಐಪಿಎಲ್‌ ಸಿದ್ಧತೆಗೂ ಸಾಧ್ಯವಾಗುತ್ತಿಲ್ಲ. ಎಲ್ಲಾ ತಂಡಗಳ ಮಾಲಕರ ಜೊತೆ ಆಯೋಜಿಸಲಾಗಿದ್ದ ಮಾತುಕತೆಯನ್ನು ಬಿಸಿಸಿಐ ರದ್ದುಗೊಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಸಹ ಮಾಲಕ ನೆಸ್‌ ವಾಡಿಯಾ, ‘ಮುನ್ನಚ್ಚರಿಕೆ ವಹಿಸುವುದು ನಮ್ಮೆಲ್ಲರ ಜವಾಬ್ದಾರಿ. ಮೊದಲು ಮನುಷ್ಯರಾಗಬೇಕಿದೆ. ಉಳಿದೆಲ್ಲವೂ ನಂತರದ ವಿಚಾರ. ಸದ್ಯಕ್ಕಂತೂ ಕೊರೋನಾ ಹತೋಟಿಗೆ ಬರುವ ಲಕ್ಷಣಗಳಿಲ್ಲ. ಹೀಗಾಗಿ ಈಗ ಚರ್ಚಿಸಬೇಕಾದ ಅಗತ್ಯವಿಲ್ಲ. ಹೀಗಾಗಿ ಕಾನ್ಫರೆನ್ಸ್‌ ರದ್ದುಗೊಳಿಸಲಾಗಿದೆಯಷ್ಟೇ’ ಎಂದಿದ್ದಾರೆ.

click me!