13ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಯಾವುದೇ ಅಡೆತಡೆಯಾಗದಂತೆ ಆಯೋಜಿಸಿದ್ದ ಎಮಿರೇಟ್ಸ್ ಕ್ರಿಕೆಟ್ ಮಂಡಳಿಗೆ ಬಿಸಿಸಿಐ 100 ಕೋಟಿ ರುಪಾಯಿ ಪಾವತಿಸಿದೆ ಎಂದು ವರದಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ(ನ.17): ಕೊರೋನಾ ಸೋಂಕಿನಿಂದಾಗಿ 13ನೇ ಆವೃತ್ತಿಯ ಐಪಿಎಲ್ ಟಿ20 ಪಂದ್ಯಾವಳಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಗೆ ಸ್ಥಳಾಂತರಿಸಿದ್ದ ಬಿಸಿಸಿಐ, ಅಲ್ಲಿನ ಕ್ರಿಕೆಟ್ ಮಂಡಳಿಗೆ ಬರೋಬ್ಬರಿ 100 ಕೋಟಿ ರುಪಾಯಿ (14 ಮಿಲಿಯನ್ ಡಾಲರ್) ಪಾವತಿಸಿದ್ದಾಗಿ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ದುಬೈ, ಶಾರ್ಜಾ ಹಾಗೂ ಅಬುಧಾಬಿ ಕ್ರೀಡಾಂಗಣಗಳನ್ನು ಐಪಿಎಲ್‌ಗೆ ಸಿದ್ಧಗೊಳಿಸಿದ್ದ ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ), ಅತ್ಯುತ್ತಮ ಪಿಚ್ ಹಾಗೂ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಿತ್ತು. ಐಪಿಎಲ್ ಆಯೋಜನೆಯಿಂದ ಇಸಿಬಿ ಭರ್ಜರಿ ಲಾಭ ದೊರೆತಿದೆ.
undefined
ಐಪಿಎಲ್ ತಂಡ ಖರೀದಿಗೆ ಅದಾನಿ, ಗೋಯೆಂಕಾ ಆಸಕ್ತಿ
ನವದೆಹಲಿ: ಐಪಿಎಲ್ 13ನೇ ಆವೃತ್ತಿ ಮುಕ್ತಾಯಗೊಂಡ ಒಂದೆರಡು ದಿನಗಳಲ್ಲೇ 14ನೇ ಆವೃತ್ತಿಗೆ ಹೊಸ ತಂಡ ಸೇರ್ಪಡೆಗೊಳ್ಳಲಿದೆ ಎನ್ನುವ ಸುದ್ದಿ ಹಬ್ಬಿತ್ತು. ಮುಂದಿನ ವರ್ಷ 9 ತಂಡಗಳು ಸ್ಪರ್ಧಿಸಬಹುದು ಎನ್ನಲಾಗುತ್ತಿದ್ದು, ತಂಡ ಖರೀದಿಸಲು ಅದಾನಿ ಹಾಗೂ ಸಂಜೀವ್ ಗೋಯೆಂಕಾ ಸಮೂಹ ಸಂಸ್ಥೆಗಳು ಆಸಕ್ತಿ ತೋರಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಕೊಹ್ಲಿಯಿಂದ ಟಿ20 ನಾಯಕತ್ವ ಪಡೆಯಲು ರೋಹಿತ್‌ಗಿದು ಸಕಾಲ: ನಾಸಿರ್ ಹುಸೇನ್
2021ರ ಟೂರ್ನಿ ಬಗ್ಗೆ ವಿವರಗಳನ್ನು ಮುಂದಿನ ತಿಂಗಳು ತಿಳಿಸುವುದಾಗಿ ಬಿಸಿಸಿಐ, ಐಪಿಎಲ್‌ನ 8 ಫ್ರಾಂಚೈಸಿಗಳಿಗೆ ತಿಳಿಸಿದ್ದು, ಕೊರೋನಾದಿಂದಾಗಿ ಆಗಿರುವ ನಷ್ಟವನ್ನು 9ನೇ ತಂಡವನ್ನು ಸೇರ್ಪಡೆಗೊಳಿಸುವ ಮೂಲಕ ತುಂಬುವ ನಿರೀಕ್ಷೆಯಲ್ಲಿದೆ. ಗೋಯೆಂಕಾ ಸಂಸ್ಥೆ 2016, 2017ರಲ್ಲಿ ಪುಣೆ ಸೂಪರ್‌ಜೈಂಟ್ಸ್ ತಂಡದ ಮಾಲೀಕತ್ವ ಪಡೆದುಕೊಂಡಿತ್ತು. ಹೊಸ ತಂಡದ ಸೇರ್ಪಡೆಯಾದರೆ, 14ನೇ ಆವೃತ್ತಿಗೆ ಮೆಗಾ ಹರಾಜು ಪ್ರಕ್ರಿಯೆ ನಡೆಸಬೇಕಾಗುತ್ತದೆ.