* ಭಾರತದ ಅತಿದೊಡ್ಡ ಲಸಿಕಾ ಅಭಿಯಾನ ಯಶಸ್ವಿ
*ಆರೋಗ್ಯ ಸಮಸ್ಯೆ ಇರುವ ಮಕ್ಕಳಿಗೆ ಮೊದಲು ಲಸಿಕೆ ನೀಡಿಕೆ
* ಝೈಕೋವ್-ಡಿ ಲಸಿಕೆ ಬಗ್ಗೆ ತಿಳಿದುಕೊಳ್ಳಲೇಬೇಕು
* ಕೊರೋನಾ ವಿರುದ್ಧದ ಹೋರಾಟದ ಅಂತಿಮ ಘಟ್ಟ
ನವದೆಹಲಿ(ನ. 24) ಭಾರತದ (India) ಅತಿದೊಡ್ಡ ಲಸಿಕಾ (vaccination drive)ಅಭಿಯಾನದಲ್ಲಿ ಯಶಸ್ಸು ಸಾಧಿಸಿಕೊಂಡು ಮುಂದೆ ಸಾಗುತ್ತಲೇ ಇದೆ. ನೂರು ಕೋಟಿ ಲಸಿಕಾ ಗುರಿಯನ್ನು ಮೀರಿ ಆಗಿದೆ.
ಆರಂಭದಲ್ಲಿ ಕೊರೋನಾ ವಾರಿಯರ್ಸ್ ಗೆ ನಂತರ ಹಿರಿಯ ನಾಗರಿಕರಿಗೆ ಅದಾದ ಮೇಲೆ ಹದಿನೆಂಟು ವರ್ಷ ಮೇಲ್ಪಟ್ಟವರಿಗೆ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ನೀಡಲಾಗಿದೆ. ಅಭಿಯಾನ ಯಶಸ್ವಿಯಾಗಿದ್ದು ದೇಶದಲ್ಲಿ ಕೊರೋನಾ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಈ ನಡುವೆ 18 ವರ್ಷಕ್ಕಿಂತ ಕೆಳಗಿನವರಿಗೆ ಲಸಿಕೆ ನೀಡುವ ಹೆಜ್ಜೆಗಳು ಆರಂಭವಾಗಿವೆ.
undefined
ಹದಿನೆಂಟು ವರ್ಷಕ್ಕಿಂತ ಒಳಗಿನವರಿಗೆ ನೀಡಬಹುದಾದ ಭಾರತೀಯ Zydus Cadila Vaccine ಲಸಿಕೆಗೆ ಅನುಮತಿ ಸಿಕ್ಕಿದೆ. ZyCoV-Dಲಸಿಕೆಯ ಮೂರು ಡೋಸ್ ಗಳು ವೈರಸ್ ನಿಂದ ಶೇ. 66ರಷ್ಟು ರಕ್ಷಣೆ ಒದಗಿಸುತ್ತದೆ ಎನ್ನುವುದು ಅಧ್ಯಯನದಿಂದ ವ್ಯಕ್ತವಾಗಿದೆ.
ಭಾರತದ ಶೇ. 13ರಷ್ಟು ವಯಸ್ಕರು ಸಂಪೂರ್ಣವಾಗಿ ಲಸಿಕೆಯನ್ನು(ಎರಡು ಡೋಸ್) ಪಡೆದುಕೊಂಡಿದ್ದಾರೆ. ಶೇ. 47ರಷ್ಟು ಜನರು ಒಂದು ಬಾರಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಜನವರಿಯಲ್ಲಿ ಆರಂಭವಾದ ಲಸಿಕಾ ಅಭಿಯಾನ ಯಶಸ್ಸು ಕಂಡಿದೆ.
ಝೈಡಸ್ ಕ್ಯಾಡಿಲಾ ಲಸಿಕೆ ಅಥವಾ ಝೈಕೋವ್-ಡಿ ಲಸಿಕೆ (zydus cadila) ZyCoV-D ಲಸಿಕೆಯು ಕೋವಿಡ್-19 ವಿರುದ್ಧ ವಿಶ್ವದ ಮೊದಲ DNA ಲಸಿಕೆಯಾಗಿದೆ. ಇತರ ಲಸಿಕೆಗಳಂತೆ, ಡಿಎನ್ಎ ಲಸಿಕೆಯನ್ನು ಒಮ್ಮೆ ನಿರ್ವಹಿಸಿದರೆ ವೈರಸ್ ವಿರುದ್ಧ ಹೋರಾಡಲು ದೇಹದ ಪ್ರತಿರಕ್ಷಣಾ ವ್ಯವಸ್ಥೆ ಸಿದ್ಧವಾಗುತ್ತದೆ. ZyCoV-D ಪ್ಲಾಸ್ಮಿಡ್‌ಗಳನ್ನು ಬಳಸುತ್ತದೆ - ಅಥವಾ ಆನುವಂಶಿಕ ಮಾಹಿತಿಯನ್ನು ಹೊಂದಿರುವ ಡಿಎನ್‌ಎಯ ಪ್ರತಿಕಾಯದ ಕೆಲಸ ಆರಂಭಿಸುತ್ತದೆ.
ಎಸೆಯಬಹುದಾದ ಸೂಜಿ-ಮುಕ್ತ ಇಂಜೆಕ್ಟರ್‌ನೊಂದಿಗೆ ನೀಡಲಾಗುತ್ತದೆ. ಕ್ಯಾಡಿಲಾ ಹೆಲ್ತ್‌ಕೇರ್ ಭಾರತದಲ್ಲಿ ಇದುವರೆಗೆ ಲಸಿಕೆಗಾಗಿ ಅತಿದೊಡ್ಡ ಕ್ಲಿನಿಕಲ್ ಪ್ರಯೋಗವನ್ನು ನಡೆಸಿದೆ, 50 ಕ್ಕೂ ಹೆಚ್ಚು ಕೇಂದ್ರಗಳಲ್ಲಿ 28,000 ಸ್ವಯಂಸೇವಕರ ಮೇಲೆ ಪ್ರಯೋಗ ಆಗಿದೆ..
ಕ್ಲಿನಿಕಲ್ ಪ್ರಯೋಗಗಳ ಪ್ರಮುಖ ಮೂರನೇ ಹಂತವನ್ನು ವೈರಸ್‌ನ ತಡೆಗೆ ಇದು ಮದ್ದಾಗಲಿದೆ ಸಾಂಕ್ರಾಮಿಕ ಡೆಲ್ಟಾ ರೂಪಾಂತರದ ವಿರುದ್ಧವೂ ಹೋರಾಟ ಮಾಡಲಿದೆ. ವಿಜ್ಞಾನಿಗಳ ಪ್ರಕಾರ, ಪ್ಲಾಸ್ಮಿಡ್ ಡಿಎನ್‌ಎಯನ್ನು ಮಾನವ ಜೀವಕೋಶಕ್ಕೆ ಕಳುಹಿಸಲಾಗುತ್ತದೆ. ಇದೇ ಕಾರಣಕ್ಕೆ ಇದರ ಪರಿಣಾಮದ ಅವಧಿ ಹೆಚ್ಚು.
ಡಬಲ್ ಡೋಸ್ ಪಡೆದುಕೊಂಡ್ರೆ ಏನ್ ಲಾಭ?
ಲೂಯಿಸಿಯಾನ ಸ್ಟೇಟ್ ಯೂನಿವರ್ಸಿಟಿ ಹೆಲ್ತ್ ಸೈನ್ಸಸ್ ಸೆಂಟರ್‌ನ ವೈರಾಲಜಿಸ್ಟ್ ಡಾ ಜೆರೆಮಿ ಕಾಮಿಲ್ ಹೇಳುವಂತೆ ಸ್ವತಂತ್ರ ಅಧ್ಯಯನ ನಡೆಸಿ ಸಂಶೋಧನಾ ವರದಿ ಸಿದ್ಧಮಾಡಿಕೊಳ್ಳಲಾಗಿದೆ ಎಂದಿದ್ದಾರೆ. ಭಾರತದ ಎರಡನೇ ಸ್ವದೇಶಿ ಲಸಿಕೆಯನ್ನು 120 ಮಿಲಿಯನ್ ಡೋಸ್‌ಗಳನ್ನು ತಯಾರಿಸಲು ಸಂಸ್ಥೆಯು ಯೋಜಿಸಿದೆ.
Zycov-D ಆಗಸ್ಟ್ 20 ರಂದು ಔಷಧ ನಿಯಂತ್ರಕದಿಂದ ತುರ್ತು ಬಳಕೆಗಾಗಿ ಅನುಮೋದನೆ ಪಡೆದುಕೊಂಡಿತ್ತು. Zycov-D 12 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರಿಗೆ ಪ್ರತಿರಕ್ಷಣೆಗಾಗಿ ನೀಡಬಹುದಾಗಿದೆ.
ಒಟ್ಟಿನಲ್ಲಿ ಹೇಳಬೇಕು ಎಂದರೆ ವಯಸ್ಕರಿಗೆ ಲಸಿಕೆ ನೀಡಿರುವ ದೇಶ ಮುಂದಿನ ಹಂತವಾಗಿ ಮಕ್ಕಳಿಗೆ ನೀಡಲಿದ್ದು ಸೂಜಿ ಮುಕ್ತ ಲಸಿಕಾಕರಣ ಮಾಡಲಿದೆ. ಯಾವ ಕೇಂದ್ರಗಳಲ್ಲಿ ಎಲ್ಲರಿಗೂ ಹೇಗೆ ಲಭ್ಯವಾಗಲಿದೆ ಎನ್ನುವ ರೂಪುರೇಷೆಗಳನ್ನು ಸರ್ಕಾರ ಸಿದ್ಧಮಾಡುತ್ತಿದೆ.
ಭಾರತದ ಲಸಿಕಾ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ದೊರೆತಿದ್ದು ಎಲ್ಲರ ಸಹಕಾರದಿಂದ ಯಶಸ್ಸು ಸಾಧ್ಯವಾಗಿದೆ ಎಂದು ಪ್ರಧಾನಿ ಮೋದಿ ಅಭಿನಂದನೆ ತಿಳಿಸಿದ್ದರು. ಕೊರೋನಾ ವಿರುದ್ಧದ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಸಾಮಾಜಿಕ ಅಂತರ, ಮಾಸ್ಕ್ ಸೇರಿ ನಿಯಮಗಳನ್ನು ಪಾಲನೆ ಮಾಡುವುದನ್ನು ಮಾತ್ರ ಮರೆಯಬೇಡಿ.