Farmer Protest : ಪ್ರಧಾನಿ ಬೇಡಿಕೆಗೆ ಒಪ್ಪಿದರೆ ಹೋರಾಟ ವಾಪಸ್‌: ಟಿಕಾಯತ್‌

Suvarna News   | Asianet News
Published : Nov 24, 2021, 09:42 PM ISTUpdated : Nov 24, 2021, 10:37 PM IST
Farmer Protest : ಪ್ರಧಾನಿ ಬೇಡಿಕೆಗೆ ಒಪ್ಪಿದರೆ ಹೋರಾಟ ವಾಪಸ್‌: ಟಿಕಾಯತ್‌

ಸಾರಾಂಶ

* ರೈತ ಸಂಘಗಳ ಸಂಯುಕ್ತ ಸಂಸ್ಥೆಯಾದ ಸಂಯುಕ್ತ ಕಿಸಾನ್ ಮೋರ್ಚಾ * ಪ್ರಧಾನಿ ಮೋದಿಗೆ ಬಹಿರಂಗ ಪತ್ರ ಬರೆದ ಎಸ್‌ಕೆಎಂ * ಇನ್ನೂ ಆರು ಬಾಕಿ ಇರುವ ಬೇಡಿಕೆಗಳನ್ನು ಈಡೇರಿಸಲು ಬೇಡಿಕೆ

ನವದೆಹಲಿ(ನ.24): ಭಾರತೀಯ ಕಿಸಾನ್‌ ಯೂನಿಯನ್‌(Bharatiya Kisan Union) ನಾಯಕ ಮಾತನಾಡಿ, ಸರ್ಕಾರ ಹಿಂಪಡೆಯಲು ಬಯಸಿರುವ ಮೂರು ಕೃಷಿ ಮಸೂದೆಗಳ ವಿಚಾರವಾಗಿ ಮಾತ್ರ ನಾವು ಪ್ರತಿಭಟನೆ ನಡೆಸುತ್ತಿಲ್ಲ. ಕನಿಷ್ಠ ಬೆಂಬಲ ಬೆಲೆ(MSP) ಹಾಗೂ ಕಳೆದ ವರ್ಷ ಮೃತಪಟ್ಟ ೭೦೦ ರೈತರಿಗೆ ಪರಿಹಾರದ ವಿಚಾರವಾಗಿಯೂ ನಾವು ಹೋರಾಟ ನಡೆಸುತ್ತಿದ್ದೇವೆ. ಸರ್ಕಾರ ಕಾಯಿದೆಗಳನ್ನು ಘೋಷಣೆ ಮಾಡುತ್ತದೆ ಹಾಗೂ ಅವರು ಪ್ರಸ್ತಾವನೆಯನ್ನು ಕಾರ್ಯರೂಪಕ್ಕೆ ತರಬಹುದು. ಆದರೆ ಕನಿಷ್ಠ ಬೆಂಬಲ ಬೆಲೆ ಹಾಗೂ 700  ರೈತರ ಸಾವು ಕೂಡ ನಮ್ಮ ಹೋರಾಟದ ವಿಚಾರವಾಗಿದೆ. ಈ ವಿಚಾರಗಳ ಬಗ್ಗೆಯೂ ಸರ್ಕಾರ ಮಾತನಾಡಬೇಕಾಗಿದೆ. ಒಂದು ವೇಳೆ ಸರ್ಕಾರ ಜನವರಿ 26ಕ್ಕೂ ಮೊದಲು ಮಾತನಾಡಿದರೆ, ನಾವು  ನಮ್ಮ ಹೋರಾಟವನ್ನು ಹಿಂಪಡೆಯುತ್ತೇವೆ ಹಾಗೆಯೇ ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಬಳಿಕ ನಾವು ಚುನಾವಣೆ ಬಗ್ಗೆ ಮಾತನಾಡುತ್ತೇವೆ ಎಂದು ಟಿಕಾಯತ್‌ ಹೇಳಿದರು. 

ಮುಂದಿನ ವರ್ಷ ಪಂಜಾಬ್‌ ಹಾಗೂ ಉತ್ತರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.  ಈ ವಿಚಾರವನ್ನು ಇಲ್ಲಿ ಗಮನಿಸಬಹುದು. ಮೂರು ಕೃಷಿ ಕಾನೂನು ಬಗ್ಗೆ ರೈತರು ಪ್ರತಿಭಟನೆ ನಡೆಸುತ್ತಿದ್ದು, ಈ ಕಾಯಿದೆಗಳನ್ನು ಕೇಂದ್ರ ಕ್ಯಾಬಿನೆಟ್‌( Union Cabinet) ವಾಪಸ್‌ ಪಡೆಯುವ ಬಗ್ಗೆ ಬುಧವಾರ ಕ್ಯಾಬಿನೆಟ್‌ ಸಭೆ ನಡೆಯಲಿದೆ. ಕಳೆದ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ( Narendra Modi)ಮೂರು ವಿವಾದಿತ ಕೃಷಿ ಮಸೂದೆಗಳನ್ನು ವಾಪಸ್‌ ಪಡೆಯುವುದಾಗಿ ಘೋಷಣೆ ಮಾಡಿದ್ದರು.

Farm Laws Repeal: ಸರ್ಕಾರ ಕದನ ವಿರಾಮ ಘೋಷಿಸಿದೆ, ನಾವಲ್ಲ : ಸಂಯುಕ್ತ ಕಿಸಾನ್‌ ಮೋರ್ಚಾ!

ನವೆಂಬರ್ 29 ರಂದು ಪ್ರಾರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನ(winter session)ದಲ್ಲಿ ಲೋಕಸಭೆಯಲ್ಲಿ ತೆಗೆದುಕೊಳ್ಳಬೇಕಾದ ಶಾಸಕಾಂಗ ವ್ಯವಹಾರ(Legislative Business)ದಲ್ಲಿ ಸರ್ಕಾರವು ಈಗ 'ದಿ ಫಾರ್ಮ್ ಲಾಸ್ ರಿಪೀಲ್ ಬಿಲ್, 2021' ಅನ್ನು ಸೇರಿಸಿದೆ. ರೈತ ಸಂಘಗಳ ಸಂಯುಕ್ತ ಸಂಸ್ಥೆಯಾದ ಸಂಸ್ಥೆಯಾದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಭಾನುವಾರ ಪ್ರಧಾನಿ ಮೋದಿಗೆ ಬಹಿರಂಗ ಪತ್ರ ಬರೆದು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದರ ಹೊರತಾಗಿ ತಮ್ಮ ಆರು ಬಾಕಿ ಇರುವ ಬೇಡಿಕೆಗಳನ್ನು ಈಡೇರಿಸಬೇಕಾಗಿ ಪುನರುಚ್ಚರಿಸಿದೆ.

Exclusive: 'ಹಾಗೇ ಸುಮ್ಮನೆ ರೈತರು ಮನೆಗೆ ಹೋಗಲ್ಲ, ಇನ್ನೂ ಅನೇಕ ಸಮಸ್ಯೆಗಳು ಬಗೆಹರಿಯಬೇಕಿದೆ'

ಆ ಆರು ಬೇಡಿಕೆಗಳು ಹೀಗಿವೆ

* ಕನಿಷ್ಠ ಬೆಂಬಲ ಬೆಲೆ ಅಥವಾ MSP ಗಾಗಿ ಸಾರ್ವಭೌಮ ಖಾತರಿ
* ದೆಹಲಿ, ಹರಿಯಾಣ, ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ರೈತರ ಮೇಲಿನ ಪ್ರಕರಣ ಹಿಂಪಡೆಯುವುದು
* ಮೂರು ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯಲ್ಲಿ ಮಡಿದವರ ಸ್ಮಾರಕ ನಿರ್ಮಿಸಲು ಭೂಮಿ ಹಂಚಿಕೆ ಮತ್ತು ಮೃತರ ಕುಟುಂಬಗಳಿಗೆ ಪರಿಹಾರ
* ಉದ್ದೇಶಿತ ವಿದ್ಯುತ್ ತಿದ್ದುಪಡಿ ಮಸೂದೆ (2020-2021) ಹಿಂಪಡೆಯುವಿಕೆ
* ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಅಕ್ಕಪಕ್ಕದ ಪ್ರದೇಶಗಳ ವಾಯು ಗುಣಮಟ್ಟ ನಿರ್ವಹಣೆ(Air Quality Management)ಗಾಗಿ ಜಾರಿಯಾದ ಕಾಯಿದೆ-2021ರಲ್ಲಿರುವ ದಂಡದ ನಿಬಂಧನೆಗಳನ್ನು ತೆಗೆದುಹಾಕುವುದು
* ಲಖಿಂಪುರ ಖೇರಿ(Lakhimpur Kheri) ಹತ್ಯೆ ಆರೋಪಿಯಾದ ಆಶಿಶ್ ಮಿಶ್ರಾನ ತಂದೆ ಕೇಂದ್ರದಲ್ಲಿ ಸಚಿವರಾಗಿರುವ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸುವುದು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live:ಇಂಡಿಗೋ ಏರ್‌ಲೈನ್ಸ್ ಸಮಸ್ಯೆ ತನಿಖೆಗೆ 4 ಸದಸ್ಯರ ತಂಡ ರಚಿಸಿದ ಕೇಂದ್ರ ಸರ್ಕಾರ
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌