ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ಜೊಂಟಾ ಎಂಡಿ ರಾಜ್ ಕುಮಾರ್ ಚೆಲ್ಲಪ್ಪನ್ !

Published : Apr 03, 2023, 11:59 PM IST
ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ಜೊಂಟಾ ಎಂಡಿ ರಾಜ್ ಕುಮಾರ್ ಚೆಲ್ಲಪ್ಪನ್ !

ಸಾರಾಂಶ

2023ರ ಮಾರ್ಚ್ 8ರಂದು ತನ್ನ ಎಫ್‌ಐಆರ್‌ನಲ್ಲಿ, ಜರ್ಮನ್ ಉದ್ಯಮಿ ರಾಜ್‌ಕುಮಾರ್ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ನಂಬಿಕೆಯ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಐಪಿಸಿಯ ಸೆಕ್ಷನ್ 409 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ) ಅಡಿಯಲ್ಲಿ ಎಫ್‌ಐಆರ್ ಅನ್ನು ರಾಜ್‌ಕುಮಾರ್ ವಿರುದ್ಧ ದಾಖಲಿಸಲಾಗಿದೆ.  

ಬೆಂಗಳೂರು (ಏ.3): ಜರ್ಮನಿಯ ಉದ್ಯಮಿ ಪ್ಯಾಟ್ರಿಕ್ ಬಾಯರ್ ಅವರ ವಂಚನೆ ಪ್ರಕರಣದಲ್ಲಿ ಜೊಂಟಾ ಇನ್ಫ್ರಾಟೆಕ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಜ್ ಕುಮಾರ್ ಚೆಲ್ಲಪ್ಪನ್ ಪಿಳ್ಳೈ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಅವರು ಈ ಕುರಿತಾಗಿ ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯವು ಪ್ರಕರಣವನ್ನು ವಿಚಾರಣೆಯನ್ನು ನಡೆಸಿ ಗುರುವಾರ ತೀರ್ಪು ಪ್ರಕಟಿಸಲಿದೆ. ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ಯಾಟ್ರಿಕ್ ಬಾಯರ್, ಜೊಂಟಾ ಎಂಡಿ ವಿರುದ್ಧ ದೂರು ದಾಖಲಿಸಿದ್ದರು. ನಂಬಿಕೆಯ ಉಲ್ಲಂಘನೆಗಾಗಿ ಕ್ರಿಮಿನಲ್‌ ಪ್ರಕರಣವನ್ನು ದಾಖಳು ಮಾಡಿದೆ.  ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಪೊಲೀಸ್ ಠಾಣೆಗೆ ಸಲ್ಲಿಸಲಾಗಿದೆ ಎಂದು ಪ್ಯಾಟ್ರಿಕ್ ಬಾಯರ್ ಅವರ ವಕೀಲರು ಏಷ್ಯಾನೆಟ್ ನ್ಯೂಸ್‌ಗೆ ತಿಳಿಸಿದ್ದಾರೆ.  ಜೊಂಟಾ ಇನ್ಫ್ರಾಟೆಕ್ ನಿಂದ 20 ಕೋಟಿ ರೂ.ಗಳ ಎಸ್‌ಬಿಎಲ್‌ಸಿ (ಸ್ಟ್ಯಾಂಡ್‌ಬೈ ಲೆಟರ್ ಆಫ್ ಕ್ರೆಡಿಟ್) ನೀಡಿದ್ದರಿಂದ ಬಂದ ಲಾಭದ ಪಾಲು 82 ಲಕ್ಷ ರೂಪಾಯಿಯನ್ನು ಬಿಡುಗಡೆ ಮಾಡಲಾಗಿಲ್ಲ. ಅದರೊಂದಿಗೆ ಎಸ್‌ಬಿಎಲ್‌ಸಿ ಕೂಡ ಬಿಡುಗಡೆ ಮಾಡಿಲ್ಲ ಎಂದು ಪ್ಯಾಟ್ರಿಕ್ ಬಾಯರ್ ಆರೋಪಿಸಿದ್ದರು.

ಇದರಿಂದ ತಮ್ಮ ಕಕ್ಷಿದಾರರಿಗೆ ಅಪಾರ ನಷ್ಟ ಉಂಟಾಗಿದ್ದು, ರಾಜ್‌ಕುಮಾರ್‌ ಇದಕ್ಕೆ ಪರಿಹಾರ ನೀಡಬೇಕು ಎಂದು ಪ್ಯಾಟ್ರಿಕ್‌ ಪರ ವಕೀಲರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿರುವುದರಿಂದ ಇನ್ನು ಮುಂದೆ ಹಣ ನೀಡುವುದಿಲ್ಲ ಎಂದು ಜೋಂಟಾ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀಜು ನಾಯರ್ ಬೆದರಿಕೆ ಹಾಕಿದ್ದಾರೆ ಎಂದು ಪ್ಯಾಟ್ರಿಕ್ ಪರ ವಕೀಲ ಪ್ರತೀಕ್ ಹೇಳಿದ್ದಾರೆ. ಫೋರ್ಕ್‌ಲಿಫ್ಟ್ ಟ್ರಕ್‌ಗಳು ಮತ್ತು ಮರುಬಳಕೆ ಮತ್ತು ತ್ಯಾಜ್ಯ ಕಂಟೈನರ್‌ಗಳಿಗೆ ಅಗತ್ಯ ವಸ್ತುಗಳನ್ನು ಅಭಿವೃದ್ಧಿಪಡಿಸುವ ಮತ್ತು ತಯಾರಿಸುವ ವ್ಯವಹಾರವನ್ನು ನಡೆಸುತ್ತಿರುವ ಪ್ಯಾಟ್ರಿಕ್ ಬಾಯರ್, ಝೊಂಟಾ ಇನ್ಫ್ರಾಟೆಕ್ ಪ್ರೈವೇಟ್ ಲಿಮಿಟೆಡ್‌ನ ಷೇರುದಾರ ಮತ್ತು ನಿರ್ದೇಶಕರೂ ಆಗಿದ್ದಾರೆ.

ಕೊಚ್ಚಿಯ ಬ್ರಹ್ಮಪುರಂ ತ್ಯಾಜ್ಯ ಡಂಪ್ ಯಾರ್ಡ್‌ನಲ್ಲಿ ಸಂಭವಿಸಿದ ಬೆಂಕಿಗೆ ಎಲ್‌ಡಿಎಫ್ ಮಾಜಿ ಸಂಚಾಲಕ ವೈಕ್ಕಂ ವಿಶ್ವನ್ ಅವರ ಅಳಿಯ ರಾಜ್‌ಕುಮಾರ್ ಚೆಲ್ಲಪ್ಪನ್ ಪಿಳ್ಳೈ ನಡೆಸುತ್ತಿರುವ ಬೆಂಗಳೂರು ಮೂಲದ ಸಂಸ್ಥೆಯನ್ನು ದೂಷಿಸಲಾಗಿದೆ. 'ಅನುಭವದ ಅವಶ್ಯಕತೆಗಳನ್ನು ಉಲ್ಲಂಘಿಸಲಾಗುತ್ತಿದೆ' ಎಂಬ ಆರೋಪದ ಹೊರತಾಗಿಯೂ ಕಂಪನಿಗೆ 54 ಕೋಟಿ ರೂಪಾಯಿ ತ್ಯಾಜ್ಯದಿಂದ ಶಕ್ತಿಯ ಗುತ್ತಿಗೆಯನ್ನು ನೀಡಲಾಯಿತು. ಮಾರಣಾಂತಿಕ ಬೆಂಕಿಯ ಬಳಿಕ ಈ ವಿಚಾರದಲ್ಲಿ ಟೀಕೆ ಎದುರಿಸಿದಾಗ, ಜೊಂಟಾ ಕಾಂಗ್ರೆಸ್ ಹಿರಿಯ ನಾಯಕನ ಮಗ ನಡೆಸುತ್ತಿರುವ ಕಂಪನಿಗೆ ಉಪಗುತ್ತಿಗೆ ನೀಡಿತ್ತು.

ಚಲಿಸುತ್ತಿರುವ ರೈಲಿನಲ್ಲಿ ವ್ಯಕ್ತಿಗೆ ಪೆಟ್ರೋಲ್ ಸುರಿದು ಬೆಂಕಿ : ಮಗು ಸೇರಿ ಮೂವರು ಬಲಿ

2023ರ ಮಾರ್ಚ್ 8ರಂದು ತನ್ನ ಎಫ್‌ಐಆರ್‌ನಲ್ಲಿ, ಜರ್ಮನ್ ಉದ್ಯಮಿ ರಾಜ್‌ಕುಮಾರ್ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ನಂಬಿಕೆಯ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಐಪಿಸಿಯ ಸೆಕ್ಷನ್ 409 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ) ಅಡಿಯಲ್ಲಿ ಎಫ್‌ಐಆರ್ ಅನ್ನು ರಾಜ್‌ಕುಮಾರ್ ವಿರುದ್ಧ ದಾಖಲಿಸಲಾಗಿದೆ.

ಅಬ್ಬಬ್ಬಾ..55 ಕೋಟಿ ರೂ. ವೆಚ್ಚದಲ್ಲಿ ನಡೆದಿತ್ತು ಕೇರಳದ ಉದ್ಯಮಿಯ ಅದ್ಧೂರಿ ಮದುವೆ

ಪ್ಯಾಟ್ರಿಕ್ 1.5 ಮಿಲಿಯನ್ ಯುರೋಗಳನ್ನು ಈಕ್ವಿಟಿಯಾಗಿ ಮತ್ತು 2.5 ಮಿಲಿಯನ್ ಯುರೋಗಳನ್ನು ಜೋಂಟಾದಲ್ಲಿ ಬಾಹ್ಯ ವಾಣಿಜ್ಯ ಸಾಲದ ಮೂಲಕ ಹೂಡಿಕೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ತಮ್ಮ ಮುಂಬರುವ ಯೋಜನೆಗಾಗಿ 2.28 ಮಿಲಿಯನ್ ಯುರೋಗಳ ಹೆಚ್ಚುವರಿ ಹಣಕಾಸು ಕೋರಿ 2018 ರಲ್ಲಿ ಜೋಂಟಾ ಅವರನ್ನು ಸಂಪರ್ಕಿಸಿತ್ತು.. 2.28 ಮಿಲಿಯನ್ ಯುರೋಗಳ ಸ್ಟ್ಯಾಂಡ್ ಬೈ ಲೆಟರ್ ಆಫ್ ಕ್ರೆಡಿಟ್ (SBLC) ಹಿಂದಿನ ಹೂಡಿಕೆಗೆ ಹೆಚ್ಚುವರಿಯಾಗಿತ್ತು. 


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಕ್ರಮ ಸಂಬಂಧದ ಹಾದಿ ಹಿಡಿದ ಅಮ್ಮ: ಆಕೆಯ ಇಬ್ಬರು ಪುಟ್ಟ ಮಕ್ಕಳ ಮೋರಿಗೆಸೆದ ಪ್ರಿಯಕರ
19ರ ತರುಣನ ಜೊತೆ ಮಗಳ ಮದುವೆಗೆ ನಿರಾಕರಿಸಿದ ಪ್ರೇಯಸಿ ಮನೆಯವರು: ಕರೆಂಟ್ ಟವರ್ ಏರಿ ಪ್ರಿಯಕರನ ಹೈಡ್ರಾಮಾ