Rahul Gandhi Defamation Case: ಕಾಂಗ್ರೆಸ್‌ ನಾಯಕನಿಗೆ ಜಾಮೀನು, ಏ.13ಕ್ಕೆ ಮುಂದಿನ ವಿಚಾರಣೆ

By Santosh Naik  |  First Published Apr 3, 2023, 3:57 PM IST

ರಾಹುಲ್‌ ಗಾಂಧಿಗೆ ಮಾನಹಾನಿ ಪ್ರಕರಣದಲ್ಲಿ ಸೂರತ್‌ ಕೋರ್ಟ್‌ ಮತ್ತೆ ಜಾಮೀನು ನೀಡಿದ್ದು, ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್‌ 13 ರಂದು ನಡೆಯಲಿದೆ ಎಂದು ತಿಳಿಸಿದೆ.
 


ನವದೆಹಲಿ (ಏ.3): ಚುನಾವಣಾ ಪ್ರಚಾರದ ವೇಳೆ ಜಾತಿನಿಂದನೆ ಮಾಡುವ ಮೂಲಕ ವಿವಾದಕ್ಕೆ ಈಡಾಗಿದ್ದ ರಾಹುಲ್‌ ಗಾಂಧಿಗೆ ಗುಜರಾತ್‌ ಕೋರ್ಟ್‌ ಸೋಮವಾರ ಜಾಮೀನು ಮಂಜೂರು ಮಾಡಿದೆ. ಏಪ್ರಿಲ್‌ 13ರ ತನಕ ಅವರಿಗೆ ಈ ಕೇಸ್ನಲ್ಲಿ ಜಾಮೀನು ನೀಡಲಾಗಿದೆ.  ಪ್ರಧಾನಿ ನರೇಂದ್ರ ಮೋದಿಯವರನ್ನು ಅವಮಾನಿಸಿದ ಹೇಳಿಕೆಗಾಗಿ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆ ವಿಧಿಸಿದ ಮ್ಯಾಜಿಸ್ಟ್ರೇಟ್ ಆದೇಶವನ್ನು ರದ್ದುಗೊಳಿಸುವಂತೆ ಕಾಂಗ್ರೆಸ್ ನಾಯಕ ಸೂರತ್‌ನ ಸೆಷನ್ಸ್ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು. ಪ್ರಕರಣವನ್ನು ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿರುವ ರಾಹುಲ್‌ ಗಾಂಧಿ ಅದರ ನಡುವೆ ಈ ಪ್ರಕರಣದಲ್ಲಿ ನೀಡಿರುವ ಶಿಕ್ಷೆಗೆ ಮಧ್ಯಂತರ ತಡೆ ನೀಡುವಂತೆಯೂ ವಿನಂತಿ ಮಾಡಿದ್ದಾರೆ. ಆ ಮೂಲಕ ಅವರ ಲೋಕಸಭಾ ಸದಸ್ಯ ಸ್ಥಾನ ತಕ್ಷಣದಲ್ಲಿಯೇ ಮರುಸ್ಥಾಪನೆಯಾಗಲು ಕಾರಣವಾಗಲಿದೆ. ಸೂರತ್‌ಗೆ ಬಂದು ರಾಹುಲ್‌ ಗಾಂಧಿ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸುವ ವೇಳೆ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಕಾಂಗ್ರೆಸ್‌ ಆಡಳಿತವಿರುವ ಮೂರು ರಾಜ್ಯಗಳ ಮುಖ್ಯಮಂತ್ರಿಗಳಾದ ಅಶೋಕ್‌ ಗ್ಲೆಹೋಟ್‌, ಭೂಪೇಶ್‌ ಭಾಗೇಲ್‌ ಮತ್ತು ಸುಖ್ವಿಂದರ್‌ ಸಿಂಗ್‌ ಸುಖು ಕೂಡ ಜೊತೆಯಲ್ಲಿದ್ದರು. ರಾಹುಲ್‌ ಗಾಂಧಿಗೆ ನೈತಿಕ ಬೆಂಬಲ ನೀಡುವ ದೃಷ್ಟಿಯಿಂದ ಇವರೆಲ್ಲರೂ ಗುಜರಾತ್‌ನಲ್ಲಿದ್ದಾರೆ.

ಮೂರು ರಾಜ್ಯಗಳ ಮುಖ್ಯಮಂತ್ರಿ ಹಾಗೂ ತಮ್ಮ ಸಹೋದರಿಯೊಂದಿಗೆ ರಾಹುಲ್‌ ಗಾಂಧಿ ಸೂರತ್‌ ಕೋರ್ಟ್‌ಗೆ ತೆರಳಿದ್ದನ್ನು ಬಿಜೆಪಿ ಕಟು ಶಬ್ದಗಳಲ್ಲಿ ಟೀಕೆ ಮಾಡಿದೆ. ನ್ಯಾಯಾಂಗದ ಮೇಲೆ ಒತ್ತಡ ಹೇರಲು ರಾಹುಲ್‌ ಗಾಂಧಿಯ ಬಾಲಿಶ ವರ್ತನೆ ಇದಾಗಿದೆ ಎಂದು ಹೇಳಿದೆ.

Tap to resize

Latest Videos

ಉನ್ನತ ನ್ಯಾಯಾಲಯಕ್ಕೆ ಅರ್ಜಿ ದಾಖಲಿಸಿದ ಕೂಡಲೇ ಕೆಳ ನ್ಯಾಯಾಲಯದ ಬೇಲ್ ಅಧಿಕಾರ ಮುಗಿಯುತ್ತದೆ. ಉನ್ನತ ನ್ಯಾಯಾಲಯ ಅದೇ ಬೇಲ್ ವಿಸ್ತರಣೆ ಮಾಡಬಹುದು ಅಥವಾ ಹೊಸ ಬೇಲ್ ಮಂಜೂರು ಮಾಡಬಹುದು. ಏಪ್ರಿಲ್ 13 ಹೊಸ ಬೇಲ್ ಪ್ರಕರಣ ವಿಚಾರಣೆ ನಡೆಯಲಿದೆ. ದೋಷಿ ಎನ್ನುವುದು ಅಮಾನತ್ತಿನಲ್ಲಿದ್ದರೆ,  ಶಿಕ್ಷೆಯ ಪ್ರಮಾಣ ಜಾರಿಯಲ್ಲಿದೆ. ಮುಂದಿನ ವಿಚಾರಣೆಯಂದು ರಾಹುಲ್ ಗಾಂಧಿ ಹಾಜರಿರಲೇ ಬೇಕು ಎನ್ನುವಂತಿಲ್ಲ. ಬದಲಿಗೆ ಅವರ ಪರ ವಕೀಲರು ವಾದ ಮಂಡನೆ ಮಾಡಲಿದ್ದಾರೆ.

ವಿಚಾರಣಾ ನ್ಯಾಯಾಲಯ ಮಾಡಿರುವಂಥ ಸ್ಪಷ್ಟ ದೋಷಗಳನ್ನು ಮೇಲ್ಮನವಿ ನ್ಯಾಯಾಲಯವು ಗುರುತಿಸುತ್ತದೆ ಮತ್ತು ತ್ವರಿತವಾಗಿ ನ್ಯಾಯವನ್ನು ನೀಡುತ್ತದೆ ಎಂದು ನಮಗೆ ವಿಶ್ವಾಸವಿದೆ ಎಂದು ರಾಹುಲ್ ಗಾಂಧಿ ಅವರ ಕಾನೂನು ತಂಡದ ಮೇಲ್ವಿಚಾರಣೆಯ ಕಾಂಗ್ರೆಸ್ ನಾಯಕ, ರಾಜ್ಯಸಭಾ ಸಂಸದ ಅಭಿಷೇಕ್ ಸಿಂಘ್ವಿ ಈಗಾಗಲೇ ಹೇಳಿದ್ದಾರೆ.

ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ನ ನ್ಯಾಯಾಲಯವು 2019 ರ ಚುನಾವಣೆಯ ಮೊದಲು ರಾಹುಲ್‌ ಗಾಂಧಿ ನೀಡಿದ ಹೇಳೀಕೆ ಸಂಬಂಧಿಸಿದಂತೆ ಮಾನನಷ್ಟ ಪ್ರಕರಣದಲ್ಲಿ ಗಾಂಧಿಯನ್ನು ತಪ್ಪಿತಸ್ಥರೆಂದು ಪರಿಗಣಿಸಿತ್ತು. ಕರ್ನಾಟಕದ ಕೋಲಾರದಲ್ಲಿ ಮಾತನಾಡಿದ ಅವರು, ಪರಾರಿಯಾಗಿರುವ ನೀರವ್ ಮೋದಿ ಮತ್ತು ಲಲಿತ್ ಮೋದಿಯನ್ನು ಉಲ್ಲೇಖಿಸಿ, ಎಲ್ಲಾ ಕಳ್ಳರಿಗೆ 'ಮೋದಿ' ಎಂಬ ಅಡ್ಡಹೆಸರೇ ಏಕಿರುತ್ತದೆ ಎನ್ನುವುದೇ ನನಗೆ ಅಚ್ಚರಿ ನೀಡಿದೆ ಎಂದು ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡುವ ಭರದಲ್ಲಿ ರಾಹುಲ್‌ ಗಾಂಧಿ ಈ ಮಾತನ್ನು ಆಡಿದ್ದರು.

ರಾಹುಲ್ ಅನರ್ಹತೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ವೇಳೆ ಕುಸಿದ ವೇದಿಕೆ: ವೀಡಿಯೋ

ರಾಹುಲ್‌ ಗಾಂಧಿಯ ವಿರುದ್ಧ ನೀಡಿರುವ ಈ ತೀರ್ಪು ಅವರು ದೋಷಿ ಮಾತ್ರವಲ್ಲದೆ, ಚುನಾವಣೆಯಿಂದ ಎಂಟು ವರ್ಷಗಳ ಕಾಲ ಅಮಾನತಿನಲ್ಲಿರುವ ಸಾಧ್ಯತೆಯೂ ಕಾಣುತ್ತಿದೆ. ಹಾಗೇನಾದರೂ ಅವರ ಮೇಲಿನ ಶಿಕ್ಷೆಯನ್ನು ಸೆಷನ್ಸ್‌ ಕೋರ್ಟ್‌ ತೆರವು ಮಾಡದೇ ಇದಲ್ಲಿ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಅವಕಾಶದಿಂದಲೂ ವಂಚಿತರಾಗಲಿದ್ದಾರೆ.

ಸೂರತ್‌ ಕೋರ್ಟ್‌ನಲ್ಲಿ ಕೈ ಶಕ್ತಿ ಪ್ರದರ್ಶನ: ನ್ಯಾಯಾಲಯಕ್ಕೆ ಒತ್ತಡ ಹೇರುವ ಬಾಲಿಶ ಪ್ರಯತ್ನ ಎಂದ ಬಿಜೆಪಿ

ಆಗಿನ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿತ್ತು. ಈ ತೀರ್ಪು ಮತ್ತು ಸಂಸತ್ತಿನ ಅನರ್ಹತೆಯು ಕಾಂಗ್ರೆಸ್ ಮತ್ತು ಆಡಳಿತಾರೂಢ ಭಾರತೀಯ ಜನತಾ ಪಕ್ಷದ ನಡುವೆ ದೊಡ್ಡ ಮಟ್ಟದ ವಾಕ್ಸಮರಕ್ಕೆ ಕಾರಣವಾಗಿತ್ತು. ಮಮತಾ ಬ್ಯಾನರ್ಜಿಯವರ ತೃಣಮೂಲ ಮತ್ತು ಕೆ ಚಂದ್ರಶೇಖರ್ ರಾವ್ ಅವರ ಭಾರತ್ ರಾಷ್ಟ್ರ ಸಮಿತಿ ಸೇರಿದಂತೆ ಇತರ ವಿರೋಧ ಪಕ್ಷಗಳು, ರಾಹುಲ್ ಗಾಂಧಿಯವರ ಪಕ್ಷದೊಂದಿಗೆ ಸೌಹಾರ್ದ ಸಂಬಂಧವನ್ನು ಹೊಂದಿಲ್ಲದೇ ಇದ್ದರೂ, ಬಿಜೆಪಿಯನ್ನು ಟೀಕೆ ಮಾಡಿದ್ದವು. ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಮತ್ತು ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ಕಾಂಗ್ರೆಸ್‌ಗೆ ದೊಡ್ಡ ಮಟ್ಟದ ಬೆಂಬಲ ನೀಡಿದ್ದವು.

 

click me!