Latest Videos

ಪ್ರಕೃತಿ ವಿಕೋಪ ಎದು​ರಿ​ಸಲು ದೇಶ​ ಸನ್ನದ್ಧ : ಮೋದಿ ಮೆಚ್ಚು​ಗೆ

By Kannadaprabha NewsFirst Published Jun 19, 2023, 8:20 AM IST
Highlights

ನೈಸರ್ಗಿಕ ವಿಕೋಪಗಳನ್ನು ಎದುರಿಸುವಲ್ಲಿ ಹೆಚ್ಚುತ್ತಿರುವ ದೇಶದ ಸನ್ನದ್ಧ ಸ್ಥಿತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ, ಇತ್ತೀಚಿನ ಭೀಕರ ಬಿಪೊರ್‌ಜೊಯ್‌ ಚಂಡಮಾರುತದ ಪರಿಣಾಮಗಳ ಹೊರತಾಗಿಯೂ ಗುಜರಾತ್‌ನ ಕಛ್‌ ಆದಷ್ಟುಬೇಗ ಚೇತರಿಸಿಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನವ​ದೆ​ಹ​ಲಿ: ನೈಸರ್ಗಿಕ ವಿಕೋಪಗಳನ್ನು ಎದುರಿಸುವಲ್ಲಿ ಹೆಚ್ಚುತ್ತಿರುವ ದೇಶದ ಸನ್ನದ್ಧ ಸ್ಥಿತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ, ಇತ್ತೀಚಿನ ಭೀಕರ ಬಿಪೊರ್‌ಜೊಯ್‌ ಚಂಡಮಾರುತದ ಪರಿಣಾಮಗಳ ಹೊರತಾಗಿಯೂ ಗುಜರಾತ್‌ನ ಕಛ್‌ ಆದಷ್ಟುಬೇಗ ಚೇತರಿಸಿಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಮ್ಮ ಮಾಸಿಕ ‘ಮನ್‌ ಕೀ ಬಾತ್‌’ ರೇಡಿಯೋ ಕಾರ್ಯ​ಕ್ರ​ಮ​ದಲ್ಲಿ ಭಾನು​ವಾರ ಮಾತ​ನಾ​ಡಿದ ಮೋದಿ, ಚಂಡ​ಮಾ​ರು​ತದ ಮುನ್ಸೂ​ಚನೆ ಅರಿತು 1 ಲಕ್ಷ ಜನ​ರನ್ನು ಮೊದಲೇ ತೆರ​ವು​ಗೊ​ಳಿಸಿ ಶೂನ್ಯ ಸಾವು ದಾಖ​ಲಾ​ಗಿ​ರು​ವು​ದನ್ನು ಪ್ರಸ್ತಾ​ಪಿ​ಸಿ​ದ​ರು.

2 ದಶಕಗಳ ಹಿಂದೆ ಕಛ್‌ ಭೀಕರ ಭೂಕಂಪಕ್ಕೆ ತುತ್ತಾದಾಗ, ಆ ಅನಾಹುತದಿಂದ ಎಂದಾದರೂ ಕಛ್‌ ಚೇತರಿಸಿಕೊಳ್ಳಲಿದೆಯೇ ಎಂದು ಜನರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಕಛ್‌ನ ಜನರು ಆ ಭೀಕರ ವಿಪತ್ತಿನಿಂದ ಚೇತರಿಸಿಕೊಂಡರು. ಕಳೆದ ಕೆಲ ವರ್ಷಗಳಲ್ಲಿ ಭಾರತದ ವಿಪತ್ತು ನಿರ್ವಹಣಾ ಸಾಮರ್ಥ್ಯ ಹಲವು ಪಟ್ಟು ಸುಧಾರಿಸಿದ್ದು, ನಾವು ಇತರರಿಗೆ ಮಾದರಿಯಾಗಿ ಹೊರಹೊಮ್ಮಿದ್ದೇವೆ ಎಂದು ಇತ್ತೀಚಿನ ಚಂಡಮಾರುತವನ್ನು ಗುಜರಾತ್‌ (gujarath) ಅದರಲ್ಲೂ ವಿಶೇಷವಾಗಿ ಕಛ್‌ ಪ್ರದೇಶ ಯಶಸ್ವಿಯಾಗಿ ಎದುರಿಸಿದ್ದನ್ನು ಮೋದಿ ಶ್ಲಾಘಿಸಿದರು.

ಬಿಪರ್ ಜಾಯ್ ಎಫೆಕ್ಟ್: : ಗುಜರಾತ್ ನಲ್ಲಿ ಭಾರೀ ಆಸ್ತಿ ನಷ್ಟ: ಮಾಹಿತಿ ಪಡೆದುಕೊಂಡ ಪ್ರಧಾನಿ ಮೋದಿ

ತುರ್ತು ಪರಿಸ್ಥಿತಿ ದೇಶದ ಇತಿಹಾಸಕ್ಕೆ  ಕಪ್ಪುಚುಕ್ಕೆ: ಮೋದಿ

ನವದೆಹಲಿ: ದೇಶದ ಇತಿಹಾಸಕ್ಕೆ ತುರ್ತುಪರಿಸ್ಥಿತಿ ಒಂದು ಕಪ್ಪು ಚುಕ್ಕೆ. ತುರ್ತು ಪರಿಸ್ಥಿತಿ ಅವಧಿಯಲ್ಲಿ ಪ್ರಜಾಪ್ರಭುತ್ವ ಬೆಂಬಲಿಸುವವರ ಮೇಲೆ ನಾನಾ ರೀತಿಯ ದೌರ್ಜನ್ಯಗಳನ್ನು ಎಸಗಲಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.  ಭಾನುವಾರ ಮಾಸಿಕ ‘ಮನ್‌ ಕೀ ಬಾತ್‌’ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ಪ್ರಜಾಸತಾತ್ಮಕ ಮೌಲ್ಯಗಳು ಮತ್ತು ಸಂವಿಧಾನವನ್ನು ಅತ್ಯಂತ ಎತ್ತರದಲ್ಲಿ ಸ್ಥಾನದಲ್ಲಿ ಕಾಣುವ ಪ್ರಜಾಪ್ರಭುತ್ವಕ್ಕೆ (democracy) ಭಾರತ ತಾಯಿ ಇದ್ದಂತೆ.  ಹೀಗಾಗಿ ನಮ್ಮ ಮೇಲೆ 1975ರ ಜೂ.25ರಂದು ಹೇರಲಾದ ತುರ್ತು ಪರಿಸ್ಥಿತಿಯನ್ನು ಮರೆಯಲು ಸಾಧ್ಯವಿಲ್ಲ’ ಎಂದು ಕಿಡಿಕಾರಿದರು.  1975ರ ಜೂ.25ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದರು. ಆ ಘಟನೆಗೆ ಮುಂದಿನ ವಾರ 48 ವರ್ಷ ತುಂಬಲಿದ್ದು, ಈ ಹಿನ್ನೆಲೆಯಲ್ಲಿ ಮೋದಿ ಮನ್‌ ಕೀ ಬಾತ್‌ನಲ್ಲಿ ಆ ವಿಷಯ ಪ್ರಸ್ತಾಪಿಸಿದ್ದಾರೆ.

ಒಂದು ವಾರ ಮೊದಲೇ ಮನ್‌ ಕೀ ಬಾತ್‌: ಯೋಗ ಜೀವನದ ಭಾಗ ಮಾಡಿಕೊಳ್ಳಿ: ಮೋದಿ

ಪ್ರತಿ ತಿಂಗಳ ಕೊನೆಯ ಭಾನುವಾರ ಮನ್‌ ಕೀ ಬಾತ್‌ (Man ki baath) ಪ್ರಸಾರವಾಗುತ್ತದೆ. ಆದರೆ ಮುಂದಿನ ವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅಮೆರಿಕ ಪ್ರವಾಸ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಒಂದು ವಾರ ಮೊದಲೇ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗಿದೆ. ಮನ್‌ ಕೀ ಬಾತ್‌ನಲ್ಲಿ ಮೋದಿ ಯೋಗವನ್ನು ನಿತ್ಯ ಜೀವನದ ಭಾಗ ಮಾಡಿಕೊಳ್ಳಿ ಎಂದು ದೇಶದ ಜನರಿಗೆ ಕರೆ ನೀಡಿದ್ದಾರೆ.  ಜೂ.21ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ತಮ್ಮ ‘ಮನ್‌ ಕೀ ಬಾತ್‌’ನಲ್ಲಿ ಈ ವಿಷಯ ಪ್ರಸ್ತಾಪಿಸಿರುವ ಮೋದಿ, ‘21ನೇ ಜೂನ್‌ ಸಮೀಪಿಸುತ್ತಿದೆ. ವಿಶ್ವದ ಪ್ರತಿ ಮೂಲೆ ಮೂಲೆಯ ಜನರೂ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಕಾತುರದಿಂದ ಕಾಯುತ್ತಿದ್ದಾರೆ. ಈ ವರ್ಷದ ಯೋಗ ದಿನ ಧ್ಯೇಯವಾಕ್ಯ ‘ವಸುಧೈವ ಕುಟುಂಬಕಂ’. ಪ್ರತಿ ವರ್ಷದಂತೆ ಈ ವರ್ಷವೂ ದೇಶದ ಮೂಲೆ ಮೂಲೆಯಲ್ಲೂ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಯಾರಾರ‍ಯರು ಇನ್ನೂ ತಮ್ಮ ದೈನಂದಿನ ಜೀವನದಲ್ಲಿ ಯೋಗವನ್ನು ಒಂದು ಭಾಗ ಮಾಡಿಕೊಂಡಿಲ್ಲವೋ ಅವರೆಲ್ಲರಿಗೂ ಯೋಗವನ್ನು ಜೀವನದ ಭಾಗ ಮಾಡಿಕೊಳ್ಳುವಂತೆ ಕರೆ ಕೊಡುತ್ತೇನೆ. ಈ ವರ್ಷ ನಾನು ವಿಶ್ವಸಂಸ್ಥೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದೇನೆ ಎಂದು ಹೇಳಿದರು.

Mann Ki Baat: ತುರ್ತು ಪರಿಸ್ಥಿತಿ ಭಾರತ ಇತಿಹಾಸದ ಕರಾಳ ದಿನ; ಸಂವಿಧಾನವೇ ಸರ್ವೋಚ್ಚ: ಪ್ರಧಾನಿ ಮೋದಿ

click me!