
ನವದೆಹಲಿ: ಕಳೆದ ವರ್ಷ ರಷ್ಯಾ- ಉಕ್ರೇನ್ ಯುದ್ಧದ ಪರಿಣಾಮವಾಗಿ ತೀವ್ರ ತೀವ್ರ ಆಹಾರದ ಕೊರತೆ ಎದುರಿಸುತ್ತಿದ್ದ 18 ರಾಷ್ಟ್ರಗಳಿಗೆ 18 ಲಕ್ಷ ಟನ್ ಗೋಧಿ ರಫ್ತು ಮಾಡಿದ್ದ ಭಾರತವನ್ನು ವಿಶ್ವಸಂಸ್ಥೆ ಶ್ಲಾಘಿಸಿದೆ. ಅಲ್ಲದೆ, ಸಿರಿಧಾನ್ಯವನ್ನು ಜಾಗತಿಕವಾಗಿ ಪ್ರಚಾರ ಮಾಡುವಲ್ಲಿ ಭಾರತ ಮಹತ್ವದ ಪಾತ್ರ ವಹಿಸಿದೆ ಎಂದೂ ಕೊಂಡಾಡಿದೆ.
ಭಾನುವಾರ ಪಿಟಿಐ (PTI) ಸುದ್ದಿಸಂಸ್ಥೆ ಜತೆ ಮಾತನಾಡಿದ ಅಂತಾರಾಷ್ಟ್ರೀಯ ಕೃಷಿ ಅಭಿವೃದ್ಧಿ ನಿಧಿ (IFAD) ಅಧ್ಯಕ್ಷ ಅಲ್ವಾರೊ ಲಾರಿಯೊ ‘ಜಾಗತಿಕ ಆಹಾರ ವ್ಯವಸ್ಥೆಯನ್ನು ಪರಿವರ್ತಿಸಬೇಕೆನ್ನುವ ವಿಶ್ವಸಂಸ್ಥೆಯ (United Nation) ನಿರ್ಧಾರಕ್ಕೆ ಅನುಗುಣವಾಗಿ ಭಾರತದ ಆದ್ಯತೆಗಳಿವೆ. ಉಕ್ರೇನ್-ರಷ್ಯಾ (Ukraine-Russia war) ಯುದ್ಧದ ಕಾರಣ 18 ದೇಶಗಳು ಆಹಾರದ ಕೊರತೆ ಅನುಭವಿಸುತ್ತಿದ್ದವು. ಈ ವೇಳೆ 18 ಲಕ್ಷ ಟನ್ ಗೋಧಿಯನ್ನು ಆ ಬಡ ದೇಶಗಳಿಗೆ ಭಾರತ ಕಳಿಸಿ ಹಸಿವು ನೀಗಿಸಿತು’ ಎಂದಿದ್ದಾರೆ.
ಕಾಶ್ಮೀರ ವಿಷಯಕ್ಕೆ ವಿಶ್ವಸಂಸ್ಥೆ ಸೂಕ್ತ ಪರಿಹಾರ: ಪಾಕ್ ನೆಲದಲ್ಲಿ ಚೀನಾ ಕ್ಯಾತೆ; ತಾಲಿಬಾನ್ ಜತೆಗೂ ಒಪ್ಪಂದ!
ಇದೇ ವೇಳೆ, ‘ಬಡವರ ಹಸಿವು ನೀಗಿಸುವಲ್ಲಿ, ಹವಾಮಾನ ಬದಲಾವಣೆ (climate change) ವಿರುದ್ಧ ರೈತರು ಹೋರಾಡುವಲ್ಲಿ ಸಿರಿಧಾನ್ಯಗಳು ಮಹತ್ವದ ಪಾತ್ರ ವಹಿಸುತ್ತವೆ. ಹೀಗಾಗಿ ರಿಇಧಾನ್ಯಗಳ ಪುನರುಜ್ಜೀವನದಲ್ಲಿ ಭಾರತ ಪ್ರಮುಖ ಪಾತ್ರ ವಹಿಸುತ್ತಿದೆ’ ಎಂದೂ ಹೇಳಿದ್ದಾರೆ. ಭಾರತವು ಪ್ರಪಂಚದ ದಕ್ಷಿಣ ಭಾಗದ ಮತ್ತು ಇತರ ದೇಶಗಳ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ಬೆಂಬಲ ನೀಡುತ್ತದೆ ಎಂದು ಲಾರಿಯೊ ಶ್ಲಾಘಿಸಿದ್ದಾರೆ.
ಮನ್ ಕೀ ಬಾತ್‌ಗೆ 100ರ ಸಂಭ್ರಮ: ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ನೇರ ಪ್ರಸಾರ; ಪ್ರತಿ ಸಂಚಿಕೆಯೂ ವಿಶೇಷ ಎಂದ ನಮೋ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ