ಕಾಸಿಲ್ಲದಿದ್ದರೇನಂತೆ ತಲೆ ಕೂದಲು ಕೊಟ್ಟು ಬಾಂಬೆ ಮಿಠಾಯಿ ತಿನ್ನೋ ಮಕ್ಕಳು...

Suvarna News   | Asianet News
Published : Feb 25, 2022, 02:46 PM IST
ಕಾಸಿಲ್ಲದಿದ್ದರೇನಂತೆ ತಲೆ ಕೂದಲು ಕೊಟ್ಟು ಬಾಂಬೆ ಮಿಠಾಯಿ ತಿನ್ನೋ ಮಕ್ಕಳು...

ಸಾರಾಂಶ

ಕೂದಲು ಕೊಟ್ಟು ಮಿಠಾಯಿ ತಿನ್ನುವ ಮಕ್ಕಳು ಹಣದ ಬದಲು ಕೂದಲು ಸ್ವೀಕರಿಸುವ ವ್ಯಾಪಾರಿ ಒಂದು ಕೆಜಿ ಕೂದಲಿನ ಬೆಲೆ ಎಷ್ಟು ಗೊತ್ತೆ

ತಲೆಯ ಕೂದಲನ್ನು ಕೊಟ್ಟು ಮಕ್ಕಳು ಕಾಟನ್‌ ಕ್ಯಾಂಡಿ ಎಂದೂ ಕರೆಯಬಲ್ಲ ಬಾಂಬೆ ಮಿಠಾಯಿ ತಿನ್ನುತ್ತಿರುವ ವಿಡಿಯೋವೊಂದು ಯೂಟ್ಯೂಬ್‌ನಲ್ಲಿ ವೈರಲ್‌ ಆಗಿದೆ. ಇದೆಂಥಾ ವಿಚಿತ್ರ ಇವರಿಗೆ ಕೂದಲು ಕೊಟ್ಟರೆ ಬಾಂಬೆ ಮಿಠಾಯಿ ಕೊಡುವವರು ಯಾರು. ಕೂದಲಿಂದ ಮಿಠಾಯಿ ಮಾರುವವನಿಗೇನು ಲಾಭ ಎಂಬೆಲ್ಲಾ ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಓಡಾಡುತ್ತಿರಬಹುದು ಅಲ್ಲವೇ. ಹೌದು ಭಾರತದ ಯಾವುದೋ ಹಳ್ಳಿಯೊಂದರಲ್ಲಿ ನಡೆಯುತ್ತಿರುವ ಸಣ್ಣ ವ್ಯಾಪಾರ ಇದಾಗಿದೆ. ಆದರೆ ಇದು ಯಾವ ಪ್ರದೇಶ ಎಂಬ ಬಗ್ಗೆ ವಿಡಿಯೋದಲ್ಲಿ ಸರಿಯಾದ ಉಲ್ಲೇಖವಿಲ್ಲ. ಈ ಮಿಠಾಯಿಗೆ ದೇಶದ ಒಂದೊಂದು ಭಾಗದಲ್ಲಿ ಒಂದೊಂದು ಹೆಸರಿನಿಂದ ಕರೆಯುತ್ತಾರೆ. ಅಜ್ಜನ ಗಡ್ಡ ಎಂದು ಕನ್ನಡಿಗರು ಹೇಳಿದರೆ ಬುಧಿಯಾಕೆ ಬಾಲ್‌ ಎಂಬುದಾಗಿ ಹಿಂದಿ ಭಾಷಿಕರು ಹೇಳುತ್ತಾರೆ. 

ಫುಡಿ ವಿಶಾಲ್‌ (Foody Vishal) ಎಂಬುವವರ ಯೂಟ್ಯೂಬ್‌ನಲ್ಲಿ ಈ ವಿಡಿಯೋ ಇದ್ದು ಇವರು ಈ ಬೀದಿ ಬದಿಯ ವ್ಯಾಪಾರಿಯ ಈ ವ್ಯವಹಾರದ ಟ್ರಿಕ್ಸ್‌ನ್ನು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಬೀದಿ ಬದಿ ವ್ಯಾಪಾರಿಯೊಬ್ಬರು ಬಾಂಬೆ ಮಿಠಾಯಿ ಮಾರುತ್ತಿದ್ದಾರೆ. ಇವರ ಸುತ್ತಲೂ ಮಕ್ಕಳ ಗುಂಪು ಸೇರಿದ್ದು ಎಲ್ಲರ ಕೈಯಲ್ಲಿ ಹಣದ ಬದಲಾಗಿ ಹಿಡಿಯಷ್ಟು ತಲೆಕೂದಲಿದೆ. ಬಾಂಬೆ ಮಿಠಾಯಿಗೆ ಹಣದ ಬದಲು ಈ ಮಕ್ಕಳು ಹಿಡಿ ಕೂದಲನ್ನು ನೀಡಿ ಮಿಠಾಯಿ ಖರೀದಿಸುತ್ತಾರೆ. ಈ ಮಿಠಾಯಿ ಮಾರುವಾತನ ಸೈಕಲ್‌ನಲ್ಲಿ ಬದಿಯಲ್ಲಿ ಚೀಲಗಳನ್ನು ನೇತು ಹಾಕಿದ್ದು, ಆ ಚೀಲಕ್ಕೆ ಕೂದಲನ್ನು ಹಾಕುವ ಮಕ್ಕಳು ಅಷ್ಟೇ ಪ್ರಮಾಣದ ಮಿಠಾಯಿಯನ್ನು ಖರೀದಿಸುತ್ತಾರೆ. 

 

ಈ ವಿಡಿಯೋದಲ್ಲಿ ಕಾಣಿಸುತ್ತಿರುವ ಮಕ್ಕಳ ಬಳಿ ನೀವು ಎಲ್ಲರ ಕೈಯಲ್ಲೂ ಕೂದಲಿನ ಉಂಡೆಗಳಿದ್ದು, ಯೂಟ್ಯೂಬರ್ (YouTuber) ಯಾರ ಕೂದಲನ್ನು ತೆಗೆದುಕೊಂಡು ಬಂದಿದ್ದೀರಾ ಎಂದು ಮಕ್ಕಳಲ್ಲಿ ಕೇಳುತ್ತಾನೆ. ಅದಕ್ಕೆ ಮಕ್ಕಳು ಅಕ್ಕನ ಕೂದಲು ಅಜ್ಜಿದು ಅಮ್ಮನ ಕೂದಲು ಎಂದು ಉತ್ತರಿಸುತ್ತಾರೆ. ಈ ಕೂದಲಿಂದ ಏನು ಉಪಯೋಗ ಎಂದು ಮಿಠಾಯಿ ಮಾರುವಾತನನ್ನು ಯೂಟ್ಯೂಬರ್‌ ಕೇಳಿದ್ದು, ಈ ವೇಳೆ ಒಂದು ಕೆಜಿ ಕೂದಲಿಗೆ 3000 ರೂಪಾಯಿಗೆ ಮಾರಾಟವಾಗುವುದಾಗಿ ಆತ ಹೇಳಿದ್ದಾನೆ. ಈ ಕೂದಲು ವಿಗ್‌ ತಯಾರಿಕೆಗೆ ಹೋಗುವುದಾಗಿ ಅವರು ಹೇಳಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆದ ಬಳಿಕ 55 ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 

Long Hair Village: ಈ ಊರಿನ ತುಂಬಾ ನೀಳವೇಣಿಯರೇ!

ವಿಶ್ವದ(World) ಶೇ. 95ರಷ್ಟು ಮಾನವ ಕೂದಲು ಬೇಡಿಕೆಯನ್ನು ಭಾರತವೇ ಪೂರೈಕೆ ಮಾಡುತ್ತಿದೆ. ಆದರೆ, ಇದನ್ನು ಆಮದು ಮಾಡಿಕೊಳ್ಳುತ್ತಿದ್ದ ಚೀನಾ ಸಿದ್ಧಪಡಿಸಿದ ಕೂದಲನ್ನು ವಿಶ್ವಕ್ಕೆ ಪೂರೈಕೆ ಮಾಡುತ್ತಿತ್ತು. ಈಗ ಇದಕ್ಕೆ ಕಡಿವಾಣ ಬೀಳಲಿದ್ದು, ಇಡೀ ವಿಶ್ವ ಮಾನವ ಕೂದಲಿಗಾಗಿ ಭಾರತದ ಮಾರುಕಟ್ಟೆಯನ್ನೇ(Market) ನೆಚ್ಚಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಇದರಿಂದ ವಿದೇಶಿ ವಿನಿಮಯಕ್ಕೆ(Foreign Exchange) ಬಹುದೊಡ್ಡ ಕೊಡುಗೆ ದೊರೆಯಲಿದೆ.

Chaitra Vasudevan donates hair ಕ್ಯಾನ್ಸರ್‌ ರೋಗಿಗೆ ಕೂದಲು ದಾನ ಮಾಡಿದ ನಿರೂಪಕಿ ಚೈತ್ರಾ ವಾಸುದೇವನ್ ಮತ್ತು ಚಂದನಾ!

ಮೇಲ್ನೋಟಕ್ಕೆ ಇದು ಕೂದಲು ಉದ್ಯಮವಾಗಿದ್ದರೂ ಎಲ್ಲ ಅಕ್ರಮಗಳು ಕಚ್ಚಾ ಕೂದಲು ರಫ್ತಿನ ಮೂಲಕವೇ ನಡೆಯುತ್ತಿತ್ತು. ಅಂತಾರಾಷ್ಟ್ರೀಯ ಹವಾಲ ದಂಧೆಗೂ ಇದು ದೊಡ್ಡ ದಾರಿ ಮಾಡಿಕೊಡುತ್ತಿದ್ದು ಕಳೆದೆರಡು ವರ್ಷಗಳಿಂದ ನಡೆದ ನಿರಂತರ ಪರಿಶೀಲನೆಯಲ್ಲಿ ಇದೆಲ್ಲವು ಬೆಳಕಿಗೆ ಬಂದಿದೆ. ಕೆಜಿಗೆ .6000 ಇದ್ದ ದರವನ್ನು ಕೇವಲ 100ಕ್ಕೆ ನಿಗದಿ ಮಾಡಿ ರಫ್ತು ಮಾಡಲಾಗುತ್ತಿತ್ತು. ಈ ಮೂಲಕ ಕೇಂದ್ರ ಸರ್ಕಾರಕ್ಕೆ ಬರಬೇಕಾಗಿದ್ದ ಆದಾಯಕ್ಕೂ ದೋಖಾ ಮಾಡಲಾಗುತ್ತಿತ್ತು. ಇದೆಲ್ಲವನ್ನು ಪರಿಗಣಿಸಿಯೇ ಕೇಂದ್ರ ಸರ್ಕಾರ ಈಗ ಕಚ್ಚಾ ಕೂದಲು ರಫ್ತು ಮಾಡುವುದನ್ನು ಸಂಪೂರ್ಣ ನಿರ್ಬಂಧಿಸಿ ಆದೇಶ ಮಾಡಿರುವುದು ಮಹತ್ವದ ಬೆಳವಣಿಗೆಯಾಗಿದೆ.

ಬಾಂಗ್ಲಾದೇಶ(Bangladesh), ಬರ್ಮಾ(Burma) ಮೂಲಕ ಚೀನಾ ನಡೆಸುತ್ತಿದ್ದ ಈ ಕೂದಲು ವಹಿವಾಟಿಗೆ ಬ್ರೇಕ್‌ ಹಾಕುವುದಕ್ಕಾಗಿಯೇ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!
ನಾವ್ಯಾರಿಗೂ ಕಮ್ಮಿ ಇಲ್ಲ ಬ್ರೋ... ಆಹಾ ಭಾರತೀಯ ನಾರಿ ಕುಡಿದು ರಾಪಿಡೋ ಏರಿ ಬಿದ್ದಳು ಕೆಳಗೆ ಜಾರಿ: ವೀಡಿಯೋ