ವರ ವಿಗ್‌ ಧರಿಸಿದ್ದು ತಿಳಿದು ಮಂಟಪದಲ್ಲೇ ಮೂರ್ಛೆ ಹೋದ ವಧು... ಮದುವೆ ರದ್ದು

Suvarna News   | Asianet News
Published : Feb 25, 2022, 12:53 PM IST
ವರ ವಿಗ್‌ ಧರಿಸಿದ್ದು ತಿಳಿದು ಮಂಟಪದಲ್ಲೇ ಮೂರ್ಛೆ ಹೋದ ವಧು... ಮದುವೆ ರದ್ದು

ಸಾರಾಂಶ

ಬೋಳುತಲೆಯ ಕಾರಣಕ್ಕೆ ಮುರಿದುಬಿದ್ದ ಮದುವೆ ಉತ್ತರಪ್ರದೇಶದ ಇತ್ವಾಹ್‌ನಲ್ಲಿ ಘಟನೆ ಹೂ ಹಾರ ಹಾಕುವ ವೇಳೆ ವಿಗ್‌ ಧರಿಸಿದ್ದು ಬಯಲು  

ಇತ್ವಾಹ್‌(ಫೆ.25): ವರ ವಿಗ್‌ ಧರಿಸಿದ ಕಾರಣಕ್ಕೆ ಮದುವೆ ಮುರಿದು ಬಿದ್ದ ಘಟನೆ ಉತ್ತರಪ್ರದೇಶದ(Uttar Pradesh) ಇತ್ವಾಹ್‌ನಲ್ಲಿ (Etawah) ನಡೆದಿದೆ. ನಾಟಕ, ರಹಸ್ಯ ಹಾಗೂ ದುರಂತದಿಂದಾಗಿ ಕೆಲವು ಭಾರತೀಯ ಮದುವೆಗಳು ಯಾವುದೇ ಸಿನಿಮಾ ಕತೆಗಿಂತ ಕಡಿಮೆ ಇರುವುದಿಲ್ಲ. ಹಾಗೆಯೇ ಇಲ್ಲೊಂದು ಕಡೆ ಮದುವೆ ದಿನ ವಧುವಿಗೆ ತಾನು ಮದುವೆಯಾಗುತ್ತಿರುವ ಹುಡುಗನ ತಲೆಯಲ್ಲಿ ಕೂದಲಿಲ್ಲ ಆತ ವಿಗ್‌ ಧರಿಸಿದ್ದಾನೆ ಎನ್ನುವುದು ಗೊತ್ತಾಗಿದ್ದು, ಆಕೆ ಮಂಟಪದಲ್ಲೇ ತಲೆ ತಿರುಗಿ ಬಿದ್ದಿದ್ದಾಳೆ. 

ಈ ನೈಜ ಘಟನೆ ನಿಮಗೆ ಆಯುಷ್ಮಾನ್‌ ಖುರಾನ (Ayushmann Khurrana) ನಟನೆಯ  2019ರಲ್ಲಿ ತೆರೆ ಕಂಡ ಸಿನಿಮಾ ಬಾಲವನ್ನು ನೆನಪು ಮಾಡದಿರದು. ಇದರಲ್ಲಿ ವ್ಯಕ್ತಿಯೊಬ್ಬನಿಗೆ ತನ್ನ ವಯಸ್ಸಿಗೂ ಮೊದಲೇ ಕೂದಲೆಲ್ಲಾ ಉದುರಿ ತಲೆ ಬೋಳಾಗಿರುತ್ತದೆ. ಆದರೆ ಆತ ವಿವಾಹವಾಗುವ ಸಲುವಾಗಿ ಈ ಬೋಳು ತಲೆಯನ್ನು ತನ್ನ ವಿಗ್‌ನಿಂದ ಮುಚ್ಚಿರುತ್ತಾನೆ. 

ಇಂತಹ ಸಿನಿಮೀಯ ಘಟನೆಯೊಂದು ಈಗ ಉತ್ತರಪ್ರದೇಶದ ಇತ್ವಾಹ್‌ನಲ್ಲಿ ನಡೆದಿದೆ. ಮದುವೆಯ ಎಲ್ಲಾ ಸಂಪ್ರದಾಯದ ಬಳಿಕ ಹೂವಿನ ಹಾರ ಬದಲಾಯಿಸುವ ವೇಳೆ ಗಂಡು ತನ್ನ ಬೋಳು ತಲೆಯನ್ನು ಮುಚ್ಚಲು ವಿಗ್‌ ಧರಿಸಿದ್ದಾನೆ ಎಂಬ ಬಗ್ಗೆ ಯುವತಿಗೆ ಸಂಶಯ ಬಂದಿದೆ. ಹೂ ಹಾರ ಬದಲಾಯಿಸುವ ವೇಳೆ ಮದುವೆ ಗಂಡು ಅಜಯ್‌ಕುಮಾರ್ ತನ್ನ ತಲೆ ಕೂದಲಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದ ಅಲ್ಲದೇ ಆತ ಮತ್ತೆ ಮತ್ತೆ ತನ್ನ ತಲೆಕೂದಲನ್ನು ಸರಿ ಪಡಿಸುತ್ತಿದ್ದ ಇದನ್ನು ಯುವತಿ ಗಮನಿಸಿದ್ದಾಳೆ


ಈ ಸಂಶಯದ ಜೊತೆ ಯಾರೋ ಕೆಲವರು ವಧುವಿಗೆ ನೀನು ಮದುವೆಯಾಗುತ್ತಿರುವ ಹುಡುಗನ ತಲೆಯಲ್ಲಿ ನಿಜವಾಗಿಯೂ ಕೂದಲಿಲ್ಲ. ಆತ ಬೋಳುತಲೆಯನ್ನು ಹೊಂದಿದ್ದಾನೆ. ಇದನ್ನು ಮುಚ್ಚಲು ಆತ ವಿಗ್‌ ಧರಿಸಿದ್ದಾನೆ ಎಂದು ಹೇಳಿದ್ದಾರೆ. ಇದನ್ನು ಕೇಳಿದ ವಧು ಅಲ್ಲೇ ಮೂರ್ಛೆ ಹೋಗಿದ್ದಾಳೆ. ನಂತರ ಆಕೆಗೆ ಪ್ರಜ್ಞೆ ಮರಳಿದ್ದು, ಬೋಳುತಲೆಯವನನ್ನು ಮದುವೆಯಾಗಲು ಆಕೆ ನಿರಾಕರಿಸಿದ್ದಾಳೆ. ಮನೆಯವರ ತೀವ್ರ ಒತ್ತಾಯದ ನಂತರವೂ ಆಕೆ ಮದುವೆಯಾಗಲು ನಿರಾಕರಿಸಿದ್ದು, ಇದರಿಂದ ಮದುವೆ ಮುರಿದು ಬಿದ್ದಿದೆ. 

ಇಂತಹದೇ ಘಟನೆಯೊಂದು ಮಧ್ಯಪ್ರದೇಶದ (Madhya Pradesh) ರೇವಾದಲ್ಲಿ (Rewa) ನಡೆದಿತ್ತು. ಮದುವೆಯ ಸಂಪ್ರದಾಯಗಳು ನಡೆಯುತ್ತಿದ್ದಂತೆ ಮಧ್ಯದಲ್ಲೇ ವಧುವೂ ವರನ ಮಾನಸಿಕ ಸ್ಥಿತಿಯನ್ನು ಗಮನಿಸಿ ಆತನನ್ನು ವಿವಾಹವಾಗಲು ನಿರಾಕರಿಸಿದ್ದಾಳೆ. ಅಲ್ಲದೇ ವಧುವಿನ ಕುಟುಂಬದವರು ವರನ ನೆಂಟರಿಷ್ಟರ ಮೇಲೆ ಹಲ್ಲೆಯನ್ನು ಮಾಡಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ