Russia Ukraine Crisis: ವೈದ್ಯಕೀಯ ಶಿಕ್ಷಣಕ್ಕೆ ರಷ್ಯಾ, ಉಕ್ರೇನ್‌ ತೆರಳುವುದೇಕೆ?

By Kannadaprabha News  |  First Published Feb 25, 2022, 1:45 AM IST

ಉನ್ನತ ಶಿಕ್ಷಣಕ್ಕೆ ಭಾರತ ಖ್ಯಾತಿ ಪಡೆದಿರುವಾಗ, ಸಾವಿರಾರು ವಿದ್ಯಾರ್ಥಿಗಳು ದೂರದ ರಷ್ಯಾ ಮತ್ತು ಉಕ್ರೇನ್‌ಗೆ ವೈದ್ಯಕೀಯ ಶಿಕ್ಷಣ ಪಡೆಯಲು ಹೋಗುವುದು ಏಕೆ ಎಂಬ ಪ್ರಶ್ನೆ ಎಲ್ಲರಲ್ಲೂ ಸಹಜವಾಗಿಯೇ ಇದೆ.


ನವದೆಹಲಿ (ಫೆ.25): ಉನ್ನತ ಶಿಕ್ಷಣಕ್ಕೆ ಭಾರತ (India) ಖ್ಯಾತಿ ಪಡೆದಿರುವಾಗ, ಸಾವಿರಾರು ವಿದ್ಯಾರ್ಥಿಗಳು ದೂರದ ರಷ್ಯಾ (Russia) ಮತ್ತು ಉಕ್ರೇನ್‌ಗೆ (Ukraine) ವೈದ್ಯಕೀಯ ಶಿಕ್ಷಣ ಪಡೆಯಲು ಹೋಗುವುದು ಏಕೆ ಎಂಬ ಪ್ರಶ್ನೆ ಎಲ್ಲರಲ್ಲೂ ಸಹಜವಾಗಿಯೇ ಇದೆ. ಇದಕ್ಕೆ ಉತ್ತರ ಈ ಎರಡು ದೇಶಗಳಲ್ಲಿ ಸಿಗುವ ಗುಣಮಟ್ಟದ ವೈದ್ಯಕೀಯ ಶಿಕ್ಷಣ ಮತ್ತು ಭಾರತದ ಮೆಡಿಕಲ್‌ ಕಾಲೇಜುಗಳಿಗೆ ಹೋಲಿಸಿದರೆ ವೆಚ್ಚ ಭಾರೀ ಕಡಿಮೆ ಇರುವುದು.

ಭಾರತದಲ್ಲಿ ಸರ್ಕಾರಿ ಕೋಟಾದಲ್ಲಿ ಸೀಟು ಸಿಕ್ಕವರು ಕಷ್ಟಪಟ್ಟು ವೈದ್ಯಕೀಯ ಶಿಕ್ಷಣ ಪಡೆಯಬಹುದು. ಆದರೆ ಕಾಲೇಜುಗಳ ಕೋಟಾದಲ್ಲಿ ಲಕ್ಷ, ಕೋಟಿ ತೆರಬೇಕು. ಇದು ಬಹುತೇಕ ಭಾರತೀಯರಿಗೆ ಗಗನ ಕುಸುಮ. ಹೀಗಾಗಿಯೇ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಪ್ರತಿ ವರ್ಷ ರಷ್ಯಾ ಮತ್ತು ಉಕ್ರೇನ್‌ಗೆ ವೈದ್ಯಕೀಯ ಶಿಕ್ಷಣ ಪಡೆಯಲು ಹೋಗುತ್ತಾರೆ. ಭಾರತಕ್ಕೆ ಹೋಲಿಸಿದರೆ ಉಕ್ರೇನ್‌ನಲ್ಲಿ ವೈದ್ಯಕೀಯ ಶಿಕ್ಷಣದ ಶುಲ್ಕ ಶೇ.60ರಿಂದ ಶೆ.70ರಷ್ಟುಅಗ್ಗವಿದೆ. ನೀಟ್‌ ಉತ್ತೀರ್ಣರಾದ ಯಾರು ಬೇಕಾದರೂ ಸುಲಭವಾಗಿ ಸೀಟು ಪಡೆಯಬಹುದು. 

Tap to resize

Latest Videos

ಜೊತೆಗೆ ಅಲ್ಲಿ ಜೀವನ ವೆಚ್ಚವೂ ಕಡಿಮೆ. ಜೊತೆಗೆ ಇಲ್ಲಿನ ವೈದ್ಯಕೀಯ ಪದವಿಗೆ ವಿಶ್ವ ಆರೋಗ್ಯ ಸಂಸ್ಥೆ, ಯುನೆಸ್ಕೋ, ಯುರೋಪಿಯನ್‌ ದೇಶಗಳ ಮಾನ್ಯತೆ ಇದೆ. ಹೀಗಾಗಿ ಇಲ್ಲಿ ಶಿಕ್ಷಣ ಪಡೆದವರು ಜಗತ್ತಿನ ಬಹುತೇಕ ದೇಶಗಳಲ್ಲಿ ವೈದ್ಯರಾಗುವ ಅವಕಾಶ ಸುಲಭವಾಗಿ ಪಡೆದುಕೊಳ್ಳುತ್ತಾರೆ. ಹೀಗಾಗಿಯೇ ಪ್ರತಿ ವರ್ಷ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಉಕ್ರೇನ್‌ ಮತ್ತು ರಷ್ಯಾಕ್ಕೆ ತೆರಳುತ್ತಾರೆ.

Russia Ukraine Crisis: ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ಉಕ್ರೇನ್ ರಾಯಭಾರಿ ಇಗೊರ್ ಪೋಲಿಖಾ ಮನವಿ!

ಏರ್ ಇಂಡಿಯಾ ವಿಮಾನ ದೆಹಲಿಗೆ ವಾಪಸ್: ನಿರೀಕ್ಷೆಯಂತೆಯೇ ಉಕ್ರೇನ್ ಮೇಲೆ ರಷ್ಯಾ (Russia Ukraine Crisis) ಅಧಿಕೃತವಾಗಿ ಯುದ್ಧ ಘೋಷಣೆ ಮಾಡಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು ದೇಶದಾದ್ಯಂತ ಸ್ಫೋಟಗಳು ಕೇಳಿಬಂದಿವೆ. ಇತ್ತ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಉಕ್ರೇನ್‌ಗೆ ಹೋಗಬೇಕಿದ್ದ ಏರ್ ಇಂಡಿಯಾ (Air India) ವಿಮಾನವು ದೆಹಲಿಗೆ ಹಿಂತಿರುಗುತ್ತಿದೆ. 

ಉಕ್ರೇನ್ ತನ್ನ ಪೂರ್ವ ವಿಘಟಿತ ಪ್ರದೇಶಗಳಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಗಳ ಮಧ್ಯೆ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಹೀಗಾಗಿ ವಿಮಾನ ಕಾರ್ಯಾಚರಣೆ ಸ್ಥಗಿತಗೊಂಡಿದೆ.  ರಷ್ಯಾದೊಂದಿಗಿನ ಸಂಘರ್ಷದ ನಡುವೆ ಸಾವಿರಾರು ಭಾರತೀಯರು ಉಕ್ರೇನ್‌ನಿಂದ ಸ್ವದೇಶಕ್ಕೆ ಮರಳಲು ಕಾಯುತ್ತಿದ್ದಾರೆ. ಇನ್ನು ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಣೆ  ಬೆನ್ನಲ್ಲೇ ಕೈವ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಿಂದ ವಿಶೇಷ ಸಲಹೆ ನೀಡಲಾಗಿದೆ. ಉಕ್ರೇನ್ ನಲ್ಲಿ ಪರಿಸ್ಥಿತಿ ಹದಗೆಟ್ಟಿದೆ, ಈ ಹಿನ್ನಲೆ ಭಾರತೀಯರು ಈಗಿರುವ ಪ್ರದೇಶಗಳಲ್ಲಿ ಸುರಕ್ಷಿತವಾಗಿರಿ ಮನೆ, ಹೋಟೆಲ್‌ನಂತಹ ಸುರಕ್ಷಿತ ಸ್ಥಳಗಳಲ್ಲಿ ವಾಸ್ತವ್ಯ ಹೂಡಿ ಎಂದು ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ. 

ಕೈವ್ ಕಡೆಗೆ ಅನಾವಶ್ಯಕ ಪ್ರಯಾಣ ಮಾಡಬೇಡಿ ಹಾಗೂ  ಪಶ್ಚಿಮ ಕೈವ್ ಕಡೆಗೆ ಪ್ರಯಾಣ ಬೆಳೆಸಿದವರು ನಿಮ್ಮ ಸುರಕ್ಷಿತ ಪ್ರದೇಶಕ್ಕೆ ವಾಪಸ್ ಆಗುವಂತೆ ಸಲಹೆ ನೀಡಿದೆ.  ಪರಿಸ್ಥಿತಿ ಅವಲೋಕಿಸಿದ ಮುಂದೆ ಆದೇಶ ನೀಡಲಾಗುವುದು ಎಂದು ರಾಯಭಾರಿ ಕಚೇರಿ ಹೇಳಿದೆ. ಉಕ್ರೇನ್‌ನಲ್ಲಿರುವ ಭಾರತೀಯರಿಗಾಗಿ 24 ಗಂಟೆಗಳ ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ. 

Russia Ukraine Crisis: ಹಿಂಸಾಚಾರವನ್ನು ತಕ್ಷಣವೇ ಕೊನೆ ಮಾಡಿ, ಪುಟಿನ್ ಗೆ ಮೋದಿ ಮನವಿ!

ಭಾರತದ ಮೇಲೇನು ಪರಿಣಾಮ?: ಈ ಯುದ್ಧ ಈಗಾಗಲೇ ಅಂತಾರಾಷ್ಟ್ರೀಯ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ಅತ್ತ  ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಉಕ್ರೇನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಘೋಷಿಸುತ್ತಿದ್ದಂತೆ ಇತ್ತ ಜಾಗತಿಕ ಕಚ್ಚಾ ತೈಲ ಬೆಲೆಯಲ್ಲಿ ದಾಖಲೆಯ ಏರಿಕೆ ಕಂಡುಬಂದಿದೆ.  ಕಚ್ಚಾ ತೈಲ (Crude Oil) ಬೆಲೆಯಲ್ಲಿ (Price) ಪ್ರತಿ ಬ್ಯಾರಲ್ ಗೆ 100 ಡಾಲರ್ ಏರಿಕೆಯಾಗಿದೆ. 2014ರ ಬಳಿಕ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತದ ಹೆಚ್ಚಳ ಕಂಡುಬಂದಿದ್ದು, ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿದೆ.  ಅಂತಾರಾಷ್ಟ್ರೀಯ (International) ಮಾರುಕಟ್ಟೆಯಲ್ಲಿ ಚಿನ್ನದ (Gold) ಬೆಲೆಯಲ್ಲಿ ಕೂಡ ಗಣನೀಯ ಪ್ರಮಾಣದ ಏರಿಕೆ ಕಂಡುಬಂದಿದೆ. 

click me!