ಕಲಾಪಕ್ಕೆ ಸಾಗುತ್ತಿದ್ದ ದಾರಿಯಲ್ಲಿ ಯುವ ಸಮೂಹದ ಬೆತ್ತಲೆ ಪ್ರತಿಭಟನೆ; ಮಜುಗರಕ್ಕೀಡಾದ ಸರ್ಕಾರ!

Published : Jul 18, 2023, 06:34 PM ISTUpdated : Jul 18, 2023, 07:25 PM IST
ಕಲಾಪಕ್ಕೆ ಸಾಗುತ್ತಿದ್ದ ದಾರಿಯಲ್ಲಿ ಯುವ ಸಮೂಹದ ಬೆತ್ತಲೆ ಪ್ರತಿಭಟನೆ; ಮಜುಗರಕ್ಕೀಡಾದ ಸರ್ಕಾರ!

ಸಾರಾಂಶ

ಚತ್ತೀಸಘಡದಲ್ಲಿ ವಿಧಾನಸಭೆ ಕಲಾಪ ಆರಂಭಗೊಂಡಿದೆ. ಇಂದು ಕಲಾಪಕ್ಕೆ ತೆರಳುತ್ತಿದ್ದ ದಾರಿಯಲ್ಲಿ ಯುವ ಸಮೂಹ ಬೆತ್ತಲೇ ಪ್ರತಿಭಟನೆ ಮಾಡಿದೆ. ಪ್ರಮುಖ ರಸ್ತೆಯಲ್ಲಿ ಹಲವು ಯುವಕರು ಬೆತ್ತಲಾಗಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಬೆತ್ತಲೇ ಪ್ರತಿಭಟನೆ ಕುರಿತ ಹೆಚ್ಚಿನ ಮಾಹಿತಿ ಹಾಗೂ ವಿಡಿಯೋ ಇಲ್ಲಿದೆ.

ರಾಯ್‌ಪುರ್(ಜು.18) ವಿನೂತನ ಪ್ರತಿಭಟನೆಯಿಂದ ಚತ್ತೀಸಘಡ ಸರ್ಕಾರ ಮುಜುಗರಕ್ಕೀಡಾಗಿದೆ. ಮೀಸಲಾತಿ ಅಡಿಯಲ್ಲಿ ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಲು ನಕಲಿ ಜಾತಿ ಪ್ರಮಾಣ ನೀಡಲಾಗುತ್ತಿದೆ. ಈ ದಂಧೆ ವಿರುದ್ದ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಯುವ ಸಮೂಹ ಬೆತ್ತಲೇ ಪ್ರತಿಭಟನೆ ಮಾಡಿದೆ.  ವಿಧಾನಸಭಾ ಕಲಾಪ ಆರಂಭಗೊಳ್ಳುತ್ತಿದ್ದಂತೆ ಪ್ರಮುಖ ರಸ್ತೆಗಳಲ್ಲಿ ಹಲವು ಯುವಕರು ಬೆತ್ತಲೇ  ಪ್ರತಿಭಟನೆ ಮಾಡಿದ್ದಾರೆ. ಸಚಿವರು, ಶಾಸಕರು ಕಲಾಪದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ರಸ್ತೆಯಲ್ಲಿ ಯುವಕರು ಪ್ರತಿಭಟನೆ ಮಾಡಿದ್ದಾರೆ. ಈ ಪ್ರತಿಭಟನೆ ದೇಶದಲ್ಲೇ ಭಾರಿ ಸುದ್ದಿಯಾಗಿದೆ. ಹೀಗಾಗಿ ಚತ್ತೀಸಘಡ ಸರ್ಕಾರ ಮುಜುಗರಕ್ಕೀಡಾಗಿದೆ.

ಚತ್ತೀಸಘಡದಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳುತ್ತಿರುವ ಹಲವು ಪ್ರಕರಣ ಬೆಳಕಿಗೆ ಬಂದಿದೆ. ಈಗಾಗಲೇ ಹಲವು ಹಿರಿಯ ಅಧಿಕಾರಿಗಳು ಅಮಾನತ್ತಾಗಿದ್ದಾರೆ. 2021ರಲ್ಲಿ ಪಿಡಬ್ಲೂಡಿ ಎಂಜಿನಿಯರ್ ಇದೇ ರೀತಿ ನಕಲಿ ಜಾತಿ ಪ್ರಮಾಣಪತ್ರ ನೀಡಿದ ಪ್ರಕರಣದಲ್ಲಿ ಅಮಾನತ್ತಾಗಿದ್ದರು. ಬಳಿಕ ಚತ್ತೀಸಘಡದಲ್ಲಿ ನಕಲಿ ಜಾತಿ ಪ್ರಮಾಣ ದಂಧೆ ಭಾರಿ ಚರ್ಚೆಯಾಗಿತ್ತು. ಸರ್ಕಾರದ ವಿರುದ್ಧ ಪ್ರತಿಭಟನೆ ಹೋರಾಟಗಳು ನಡೆದಿತ್ತು. ಮೀಸಲಾತಿಗಾಗಿ ಹಲವರು ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಉದ್ಯೋಗ ಗಿಟ್ಟಿಸಿಕೊಳ್ಳುತ್ತಿರುವ ದಂಧೆಗೆ ಕಡಿವಾಣ ಹಾಕಲು ಭಾರಿ ಹೋರಾಟ ನಡೆದಿತ್ತು.

 

Naked City: ಇಲ್ಲಿ 14% ಹೆಚ್ಚು ಜನರು ಬಟ್ಟೆ ಇಲ್ಲದೇ ನಗ್ನರಾಗಿ ಓಡಾಡಲು ಇಷ್ತಪಡ್ತಾರಂತೆ!

ಆದರೆ ಚತ್ತೀಸಘಡ ಸರ್ಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಇದೀಗ ಮತ್ತೆ ಪ್ರತಿಭಟನೆ ಆರಂಭಗೊಂಡಿದೆ. ಆದರೆ ಈ ಬಾರಿ ಬೆತ್ತಲೇ ಪ್ರತಿಭಟನೆ ಕಾರಣ ದೇಶದ ಗಮನ ಸೆಳೆದಿದೆ. ಸಚಿವರು, ಮುಖ್ಯಮಂತ್ರಿ, ಶಾಸಕರು ಕಲಾಪಕ್ಕೆ ಸಾಗುತ್ತಿದ್ದ ದಾರಿಯಲ್ಲೇ ಯುವಕರು ಬೆತ್ತಲಾಗಿ ಪ್ರತಿಭಟನೆ ಮಾಡಿದ್ದಾರೆ. ಪೋಸ್ಟರ್, ಬ್ಯಾನರ್ ಹಿಡಿದು ಆಕ್ರೋಶ ಹೊರಹಾಕಿದ್ದಾರೆ. ಇತ್ತ ಸಚಿವರು ವಾಹನ, ಬೆಂಗಾವಲು ವಾಹನ, ಪೊಲೀಸ್ ವಾಹನ ಸಾಗಲು ಅವಕಾಶ ನೀಡಿಲ್ಲ. ವಾಹನದ ಮುಂದೆ ಓಡುತ್ತಾ ಯುವಕರು ಸಾಗಿದ್ದಾರೆ.

 

 

ಈ ಬೆತ್ತಲೇ ಪ್ರತಿಭಟನೆಯಿಂದ ಸರ್ಕಾರದ ಸಚಿವರು ಮುಜುಗರಕ್ಕೀಡಾಗಿದ್ದಾರೆ. ಸರ್ಕಾರವೂ ಇಕ್ಕಟ್ಟಿಗೆ ಸಿಲುಕಿದೆ. 2021ರಲ್ಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರೂ, ದಂಧೆ ಅಂತ್ಯಗೊಂಡಿಲ್ಲ. ಕಳೆದೊಂದು ವರ್ಷದಲ್ಲಿ ಹಲವು ನಕಲಿ ಜಾತಿ ಪ್ರಮಾಣ ಪತ್ರ ಪ್ರಕರಣ ಬೆಳಕಿಗೆ ಬಂದಿದೆ. ಹೀಗಾಗಿ ಸರ್ಕಾರ ಈ ದಂಧಗೆ ನೆರವು ನೀಡುತ್ತಿದೆ ಅನ್ನೋ ಆರೋಪವೂ ಕೇಳಿಬಂದಿದೆ. 

ಫಿಲ್ಮ್‌ ಪ್ರೊಡಕ್ಷನ್‌ ಹೌಸ್ ಮುಂದೆ ಬೆತ್ತಲಾಗಿ ಮಹಿಳಾ ಜ್ಯೂನಿಯರ್ ಆರ್ಟಿಸ್ಟ್ ಪ್ರತಿಭಟನೆ!

ಬೆತ್ತಲೇ ಪ್ರತಿಭಟನೆ ಕಾವು ಜೋರಾಗುತ್ತಿದ್ದಂತೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ. ಇತ್ತ ಯುವಕರು ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್​
ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana