ಅಂದು ಪ್ರಧಾನಿ ಕಾರ್ಯವೈಖರಿ ಟೀಕಿಸಿದ್ದೆ ಆದರೆ... ಮೋದಿಯ ಹೊಗಳಿದ ಕಾಂಗ್ರೆಸ್ ಸಂಸದ ತರೂರ್

Published : Jul 18, 2023, 05:04 PM IST
ಅಂದು ಪ್ರಧಾನಿ ಕಾರ್ಯವೈಖರಿ ಟೀಕಿಸಿದ್ದೆ ಆದರೆ... ಮೋದಿಯ ಹೊಗಳಿದ ಕಾಂಗ್ರೆಸ್ ಸಂಸದ ತರೂರ್

ಸಾರಾಂಶ

ಜಿ20ಯಲ್ಲಿ ಉತ್ತಮ ರಾಜತಾಂತ್ರಿಕತೆ ಹಾಗೂ ಇಸ್ಲಾಮಿಕ್ ರಾಷ್ಟ್ರಗಳ ಜೊತೆ ಉತ್ತಮ ಒಡನಾಟ ಹೆಚ್ಚಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಹೊಗಳಿ ಅಚ್ಚರಿ ಮೂಡಿಸಿದ್ದಾರೆ. ಹಲವು ವಿಚಾರಗಳಿಗೆ ಅವರು ಪ್ರಧಾನಿ ಮೋದಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದು ಅದರ ಡಿಟೇಲ್ ಇಲ್ಲಿದೆ.

ನವದೆಹಲಿ: ಜಿ20ಯಲ್ಲಿ ಉತ್ತಮ ರಾಜತಾಂತ್ರಿಕತೆ ಹಾಗೂ ಇಸ್ಲಾಮಿಕ್ ರಾಷ್ಟ್ರಗಳ ಜೊತೆ ಉತ್ತಮ ಒಡನಾಟ ಹೆಚ್ಚಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಹೊಗಳಿ ಅಚ್ಚರಿ ಮೂಡಿಸಿದ್ದಾರೆ. ಇಸ್ಲಾಮಿಕ್ ದೇಶಗಳಿಗೂ ಕೂಡ ಪ್ರಧಾನಿ ಭೇಟಿ ಮಾಡಿ ರಾಜತಾಂತ್ರಿಕ ಸಂಬಂಧವನ್ನು ಉತ್ತಮಗೊಳಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ ಶಶಿ ತರೂರ್ ಇದೊಂದು ಅನಕರಣೀಯ ಕ್ರಮ ಎಂದಿದ್ದಾರೆ.  ಅಲ್ಲದೇ ಜಿ-20ಯಲ್ಲಿ ಭಾರತದ ತನ್ನದೇ ಹವಾ ಸೃಷ್ಟಿಸಿರುವುದರಲ್ಲಿ ಯಶಸ್ವಿಯಾಗಿರುವ ಮೋದಿ ನೇತೃತ್ವದ ಸರ್ಕಾರವನ್ನು ಮೆಚ್ಚಿದ ಶಶಿ ತರೂರ್  ಅವರು, ದೇಶದಲ್ಲಿ ಚೀನಾದ ಅಪ್ಲಿಕೇಶನ್‌ಗಳ ಮೇಲಿನ ನಿಷೇಧದ ಹೊರತಾಗಿಯೂ ದೇಶದ ಚೀನಾ ನೀತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. 

ಸುದ್ದಿಸಂಸ್ಥೆಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದೇಶಾಂಗ ನೀತಿಯಲ್ಲಿ, ಒಟ್ಟಾರೆಯಾಗಿ, ನಾನು ಮೋದಿ  ಆಡಳಿತವನ್ನು ಆರಂಭದಲ್ಲಿ ಟೀಕೆ ಮಾಡುತ್ತಿದ್ದೆ. ಆದರೆ ಅವರು ಈಗ ಎಲ್ಲಾ ನೆಲೆಗಳನ್ನು ಸಮಂಜಸವಾಗಿ ಸ್ಪರ್ಶಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ತರೂರ್ ಹೇಳಿದರು.

ಯೋಗ ಜನಪ್ರಿಯಗೊಳಿಸಿದ್ದು ನೆಹರು ಎಂದ ಕಾಂಗ್ರೆಸ್‌, ಅಲ್ಲ ಭಾರತದ ಪ್ರಧಾನಿ ಎಂದ ತರೂರ್

ನನಗೆ ನೆನಪಿರುವಂತೆ ಮೋದಿಯವರು ಪ್ರಧಾನಿಯಾದ ಆರಂಭದ ವರ್ಷದಲ್ಲಿ ಅವರು 27 ದೇಶಗಳಿಗೆ ಪ್ರಯಾಣ ಬೆಳೆಸಿದರು. ಆದರೆ ಆ 27 ದೇಶಗಳಲ್ಲಿ ಒಂದೇ ಒಂದು ಮುಸ್ಲಿಂ ರಾಷ್ಟ್ರವಿರಲಿಲ್ಲ. ಆ ಬಗ್ಗೆ ನಾನು ಕಾಂಗ್ರೆಸ್ ಸಂಸದನಾಗಿ ಸಂಸತ್‌ನಲ್ಲಿ ಗಲಾಟೆ ಮಾಡಿದ್ದೆ. ಆದರೆ ಇದಾದ ನಂತರ ಅವರು ಇಸ್ಲಾಮಿಕ್ ಜಗತ್ತನ್ನು ತಲುಪಲು ಏನೇಲ್ಲಾ ಕೆಲಸಗಳನ್ನು ಮಾಡಿದ್ದಾರೆಂದು ಹೇಳಲು ನನಗೆ ಖುಷಿಯಾಗುತ್ತಿದೆ. ಇದೊಂದು ಅನುಕರಣೀಯ ನಡೆ ವಾಸ್ತವದಲ್ಲಿ ಅವರು ಕೈಗೊಂಡು ಕ್ರಮಗಳು ಇದಕ್ಕಿಂತ ಉತ್ತಮವಾಗಿರಲು ಸಾಧ್ಯವಿಲ್ಲ.  ಜಗತ್ತಿನ ದೊಡ್ಡ ಮುಸ್ಲಿಂ ರಾಷ್ಟ್ರಗಳೊಂದಿಗೆ  ನಮ್ಮ ಸಂಬಂಧ ಇದಕ್ಕಿಂತ ಉತ್ತಮ ಈ ಹಿಂದೆಂದೂ ಇರಲಿಲ್ಲ. ಈ ವೇಳೆ ನಾನು ಈ ಹಿಂದೆ ಮೋದಿಯವರ ಬಗ್ಗೆ ಮಾಡಿದ್ದ ಟೀಕೆಗಳನ್ನು ಹಿಂಪಡೆಯಲು ಬಯಸುತ್ತೇನೆ ಎಂದು ತರೂರ್ ಮನಬಿಚ್ಚಿ ಮಾತನಾಡಿದ್ದಾರೆ. 

ತರೂರ್ ಅವರ ಈ ಹೇಳಿಕೆಗೆ ಭಾರತೀಯ ಜನತಾ ಪಾರ್ಟಿಯ  ಐಟಿ ಸೆಲ್‌ನ ಮುಖ್ಯಸ್ಥ ಅಮಿತ್ ಮಾಳವೀಯಾ ಅವರು ಪ್ರತಿಕ್ರಿಯಿಸಿದು,  ಶಶಿ ತರೂರ್ ಅವರು ಕೊನೆಗೂ ಸತ್ಯ ಹೇಳಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಎದುರಿಸಬೇಕಾದರೆ ಸಂಘಟಿತ ಪ್ರತಿಪಕ್ಷಗಳು ಸಾಮಾನ್ಯ ಕನಿಷ್ಠ ಕಾರ್ಯಕ್ರಮದೊಂದಿಗೆ ಹೊರಬರಬೇಕು ಎಂದು ಇದೇ ವೇಳೆ ತರೂರ್ ಹೇಳಿದರು. 

ಬುದ್ದಿವಂತಿಕೆಯಿಂದ ಪೋಷಕರ ಆರಿಸಿ, ಶಶಿ ತರೂರ್ ಉತ್ತರಕ್ಕೆ ನೆಗೆಗಡಲಲ್ಲಿ ತೇಲಿದ ಯುವ ಸಮೂಹ!

ಜಿ20ಯಲ್ಲಿ ಭಾರತ ಅತ್ಯಂತ ಬುದ್ಧಿವಂತಿಕೆ ತೋರಿ  ಕಾರ್ಯಕ್ರಮದಲ್ಲಿ ಭಾರತವೇ ಬೆಳಗುವಂತೆ ಮಾಡಿದೆ. ಜಗತ್ತು ಇನ್ನೆಂದಿಗೂ ಭಾರತವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ, ಇದರಲ್ಲಿ ನರೇಂದ್ರ ಮೋದಿಯವರ ವಿದೇಶಾಂಗ ನೀತಿಯ ಪ್ರಭಾವವಿದೆ ಎಂದು ತರೂರ್ ಹೇಳಿದರು.  ಇದೇ ವೇಳೆ ಚೀನಾ ಜೊತೆಗಿನ ಸರ್ಕಾರದ ಯೋಜನೆಯ ಬಗ್ಗೆ ಸರ್ಕಾರದ ಕಡೆಯಿಂದ ಸ್ಪಷ್ಟತೆ ಇಲ್ಲ. ಭಾರತದ ವಿರುದ್ಧ ಕತ್ತಿ ಮಸೆಯಲು ಇದು ಚೀನಾಗೆ ಫ್ರೀ ಪಾಸ್ ನೀಡಿದಂತೆ ಎಂದ ತರೂರ್, ಪಾರ್ಲಿಮೆಂಟ್‌ನಲ್ಲಿ ಈ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಚೀನಾ ಆಪ್‌ಗಳ (Chinese apps) ಮೇಲಿನ ನಿಷೇಧ ಕೇವಲ ಸಂಕೇತಿಕವಾಗಿದೆಯಷ್ಟೇ ಎಂದು ಹೇಳಿದ್ದಾರೆ. 

ಈ ಹಿಂದೆಯೂ ಮೋದಿ ಶ್ಲಾಘಿಸಿದ್ದ ತರೂರ್
ಕೆಲ ದಿನಗಳ ಹಿಂದಷ್ಟೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಮುಗಿದು ಹೋಯ್ತು, ಈ ವೇಳೆ ಯೋಗ ದಿನಾಚರಣೆಯ ಶುಭಾಶಯ ಸಲ್ಲಿಸಲು ಟ್ವಿಟ್ಟರ್‌ನಲ್ಲಿ ಪೋಸ್ಟೊಂದನ್ನು ಮಾಡಿದ ಕಾಂಗ್ರೆಸ್, ತನ್ನ ಅಧಿಕೃತ ಖಾತೆಯಲ್ಲಿ  ಮಾಜಿ ಪ್ರಧಾನಿ ಹಾಗೂ ಕಾಂಗ್ರೆಸ್ ನಾಯಕ ನೆಹರೂ ಅವರು ಯೋಗ ಮಾಡುತ್ತಿರುವ ಫೋಟೋವೊಂದನ್ನು ಪೋಸ್ಟ್ ಮಾಡಿ ಜಗತ್ತಿನೆಲ್ಲೆಡೆ ಯೋಗ ವಿಸ್ತಾರವಾಗಿ ಪಸರಿಸಲು ನೆಹರೂ ಕಾರಣ ಎಂದು ಹೇಳಿತ್ತು. ಕೂಡಲೇ ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ, ಕೇರಳದ ತಿರುನಂತಪುರ ಕ್ಷೇತ್ರದ ಸಂಸದ ಶಶಿ ತರೂರ್, ಈ ವಿಚಾರದಲ್ಲಿ ಪ್ರಸ್ತುತ ಪ್ರಧಾನಿ ಕಾರ್ಯಾಲಯದ ಕೊಡುಗೆಯನ್ನು ಮರೆಯುವಂತಿಲ್ಲ ಎಂದು ಹೇಳುವ ಮೂಲಕ ಯೋಗವನ್ನು ಜಗತ್ತಿನಾದ್ಯಂತ ಪಸರಿಸುವಲ್ಲಿ ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿಯವರ ಕೊಡುಗೆಯನ್ನು ತನ್ನದೇ ಪಕ್ಷಕ್ಕೆ ನೆನಪು ಮಾಡಿಕೊಟ್ಟಿದ್ದರು. ಈಗ ಮತ್ತೆ ಶಶಿ ತರೂರ್ ಪ್ರಧಾನಿ ಕಾರ್ಯವೈಖರಿಗೆ ಶ್ಲಾಘನೆ ವ್ಯಕ್ತಪಡಿಸಿದ್ದು, ಅಚ್ಚರಿ ಮೂಡಿಸಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೈದ್ರಾಬಾದ್‌ ರಸ್ತೆಗಳಿಗೆ ಟ್ರಂಪ್, ಗೂಗಲ್‌ ಹೆಸರು
ಗಲ್ವಾನ್‌ ಹಿಂಸೆ ನಡೆದ ಸ್ಥಳದಲ್ಲಿ ವಿಶ್ವದ ಎತ್ತರದ ಯುದ್ಧ ಸ್ಮಾರಕ!