ಗೂಳಿಯ ಕೊಂಬು ಬಲವಾಗಿ ಹಿಡಿದು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾನೆ. ಕೆಲ ಹೊತ್ತು ನೋಡಿದ ಗೂಳಿ ತಿರುಗೇಟು ನೀಡಿದೆ. ಇನ್‌ಸ್ಟಾಂಟ್ ಕರ್ಮ ಬಿಡುವುದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
ಕರ್ಮ ರಿಟರ್ಸನ್, ಇನ್‌ಸ್ಟಾಂಟ್ ಕರ್ಮ ಕುರಿತು ಹಲವು ವಿಡಿಯೋಗಳು ವೈರಲ್ ಆಗಿದೆ. ಅಲ್ಲೆ ಡ್ರಾ ಅಲ್ಲೆ ಬಹುಮಾನ ಅನ್ನೋ ರೀತಿ, ಕೆಟ್ಟದ್ದು ಮಾಡಲು ಹೋದರೆ ಕರ್ಮ ಬಿಡುವುದಿಲ್ಲ ಅನ್ನೋ ಮಾತು ಮತ್ತೊಮ್ಮೆ ಸಾಬೀತಾಗಿದೆ. ಇಲ್ಲೊಬ್ಬ ಯುವಕ ತನ್ನ ಪಾಡಿಗೆ ಇದ್ದ ಗೂಳಿಯ ಕೊಂಬು ಹಿಡಿದು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾನೆ. ಗೂಳಿಯ ಕೊಂಬು ಹಿಡಿದು ತಲೆಯನ್ನು ಬಗ್ಗಿಸಿ ತನ್ನ ಸಾಮರ್ಥ್ಯ ಪ್ರದರ್ಶಿಸಿದ್ದಾನೆ. ಕೆಲ ಹೊತ್ತು ನೋಡಿದ ಗೂಳಿ ಒಮ್ಮೆಲೆ ತಲೆ ಎತ್ತಿದೆ. ಈ ರಭಸಕ್ಕೆ ಯುವಕ ಮೇಲೆತ್ತರಕ್ಕೆ ಚಿಮ್ಮಿ ಬಿದ್ದಿದ್ದಾನೆ.
ಕರ್ಮಾ ಕ್ಲಿಪ್ಸ್ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ದಷ್ಟ ಪುಷ್ಠವಾಗಿರುವ ಗೂಳಿ ಬಳಿ ತೆರಳಿದ ಯುವಕ ಮೊದಲು ಸವರಿದ್ದಾನೆ. ಬಳಿಕ ಗೂಳಿಯ ಕೊಂಬು ಹಿಡಿದು ಅದರ ತಲೆಯನ್ನು ಬಗ್ಗಿಸಿ ಹಿಡಿದಿದ್ದಾನೆ. ಗೂಳಿ ಮೆಲ್ಲನೆ ತಲೆ ಮೇಲೆತ್ತುವ ಪ್ರಯತ್ನ ಮಾಡಿದೆ. ಆದರೆ ಯುವಕ ತನ್ನ ಪಟ್ಟು ಬಿಗಿಗೊಳಿಸಿದ್ದಾನೆ. ಒಂದೆಡೆರಡು ಬಾರಿ ಗೂಳಿ ಮೆಲ್ಲನೆ ತಲೆ ಎತ್ತುವ ಪ್ರಯತ್ನ ಮಾಡಿದೆ. ಆದರೆ ಯುವಕ ತನ್ನ ಸಾಮರ್ಥ್ಯವೇ ಮೇಲು ಎಂದು ಬಿಗಿಯಾಗಿ ಹಿಡಿದಿದ್ದಾನೆ.
ರೀಲ್ಸ್‌ಗಾಗಿ ರಸ್ತೆಯಲ್ಲಿ ಶಾಲಾ ಬಾಲಕಿಯರ ಸ್ಟಂಟ್, ಮುಂದೇನಾಯ್ತು ನೋಡಿ!
ತಾಳ್ಮೆ ಪರೀಕ್ಷಿಸಿದ ಯುವಕನಿಗೆ ಗೂಳಿ ತಕ್ಕ ಪಾಠ ಕಲಿಸಿದೆ. ಒಂದೇ ರಭಸದಲ್ಲಿ ಗೂಳಿ ತಲೆ ಮೇಲಕ್ಕೆತ್ತಿದೆ. ಯುವಕ ಮೇಲಕ್ಕೆ ಚಿಮ್ಮಿದ್ದಾನೆ. ಬಳಿಕ ಕೆಳಕ್ಕೆ ಬಿದ್ದಿದ್ದಾನೆ. ಆದರೆ ಬೀಳುವಾಗ ಈತನ ತಲೆ ನೆಲಕ್ಕೆ ಬಡಿದಿದೆ. ಇದರಿಂದ ತೀವ್ರಗಾಯವಾಗಿದೆ. ಈ ವಿಡಿಯೋ ಇಲ್ಲಿಗೆ ಅಂತ್ಯಗೊಂಡಿದೆ. ಆದರೆ ಈತನ ಕರ್ಮ ಮಾತ್ರ ಇನ್ನೂ ಈತನಿಗೆ ಪಾಠ ಕಲಿಸುತ್ತಿದೆ. ಕಾರಣ ತಲೆಯ ಭಾಗಕ್ಕೆ ಗಾಯವಾಗಿರುವ ಕಾರಣ ಈತ ಮತ್ತೆ ಎದ್ದೇಳಲು ಕೆಲ ದಿನಗಳೇ ಬೇಕು ಎಂದು ಕಮೆಂಟ್ ವ್ಯಕ್ತವಾಗಿದೆ.
Trying to overpower a bull pic.twitter.com/76Hm67afKq
— Karma Clips (@Unexpectedvid_1)
ವೈರಲ್ ವಿಡಿಯೋ ಮಾಡಲು ಹೋದ ಈತನಿಗೆ ತಕ್ಕೆ ಶಿಕ್ಷೆಯಾಗಿದೆ ಎಂದು ಕೆಲವರು ಹೇಳಿದ್ದಾರೆ. ಸೂಪರ್ ಹೀರೋ, ಟಾಮಂಜರಿ ಸಿನಿಮಾ ನೋಡಿ ಬಂದು ತಾನು ಸೂಪರ್ ಹೀರೋ ಎಂದುಕೊಂಡರೆ ಹೀಗೆ ಆಗುತ್ತದೆ ಎಂದು ಕಮೆಂಟ್ ಮಾಡಿದ್ದಾರೆ. ಈತನ ತಲೆ ಮಾತ್ರವಲ್ಲ, ಸೊಂಟ ಕೂಡ ಮುರಿದಿರುವ ಸಾಧ್ಯತೆ ಇದೆ ಎಂದು ಮತ್ತೆ ಕೆಲವರು ಕಮೆಂಟ್ ಮಾಡಿದ್ದಾರೆ. ಕರ್ಮ ಯಾವತ್ತೂ ಬಿಡುವುದಿಲ್ಲ. ಪಾಪದ ಕೊಡ ತುಂಬಿದರೆ ತಕ್ಷಣವೇ ಕರ್ಮದ ಫಲ ಸಿಗಲಿದೆ. ಇಲ್ಲದಿದ್ದರೆ ಕೊಂಚ ತಡವಾದರೂ ಕರ್ಮ ಬೆಂಬಿಡದೆ ಹಿಂಬಾಲಿಸುತ್ತದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿದ್ದಾರೆ.
ಯುವಕರ ರೀಲ್ಸ್ ಹುಚ್ಚಿಗೆ ಎರಡು ಮಹೀಂದ್ರ ಥಾರ್ ಸಮುದ್ರ ಪಾಲು, ಭಯಾನಕ ವಿಡಿಯೋ!