ನಡು ರಸ್ತೆಯಲ್ಲಿ ಯುವತಿಗೆ ಖಾಸಗಿ ಅಂಗ ತೋರಿಸಿ ಹಸ್ತಮೈಥುನ, ಕಾಮುಕನ ಅಸಹ್ಯ ದೃಶ್ಯ ಸೆರೆ!

Published : Jun 25, 2024, 08:49 AM IST
ನಡು ರಸ್ತೆಯಲ್ಲಿ ಯುವತಿಗೆ ಖಾಸಗಿ ಅಂಗ ತೋರಿಸಿ ಹಸ್ತಮೈಥುನ, ಕಾಮುಕನ ಅಸಹ್ಯ ದೃಶ್ಯ ಸೆರೆ!

ಸಾರಾಂಶ

ಕಾಡು, ಪೊದೆಗಳಿಂದ ಕೂಡಿದ ದಾರಿಯಲ್ಲಿ ಬೈಕ್ ನಿಲ್ಲಿಸಿದ ಕಾಮುಕ, ಯುವತಿ ಬರುತ್ತಿದ್ದಂತೆ ಹಸ್ತಮೈಥುನ ಮಾಡಿದ್ದಾನೆ. ಯುವತಿಗೆ ತನ್ನ ಖಾಸಗಿ ಅಂಗ ತೋರಿಸುತ್ತಾ ಅಸಹ್ಯಕರವಾಗಿ ವರ್ತಿಸಿದ್ದಾನೆ. ಈತನ ಕಾಮುಕ ವರ್ತನೆ ದೃಶ್ಯ ವೈರಲ್ ಆಗುತ್ತಿದ್ದಂತೆ ಆರೋಪಿಗೆ ಹುಡುಕಾಟ ಶುರುವಾಗಿದೆ.

ಕೋಲ್ಕತಾ(ಜೂ.25) ಸಾರ್ಜನಿಕ ಪ್ರದೇಶದಲ್ಲಿ ಯುವತಿ, ಅಪ್ರಾಪ್ತ ಬಾಲಕಿಯರ ಮುಂದೆ ಅಸಹ್ಯಕರ ರೀತಿಯಲ್ಲಿ ವರ್ತಿಸುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿದೆ. ರೈಲು, ಮೆಟ್ರೋ, ಬಸ್ ಸೇರಿದಂತೆ ಹಲವೆಡೆ ಯುವತಿರ, ಬಾಲಕಿಯರು, ಮಹಿಳೆಯ ಮುಂದೆ ಹಸ್ತಮೈಥುನ ಮಾಡಿ ಅವರ ಮೇಲೆ ಸ್ಖಲಿಸಿದ ಹಲವು ಘಟನೆಗಳು ನಡೆದಿದೆ. ಇದೀಗ ಇದೇ ರೀತಿ ಮತ್ತೊಬ್ಬ ಕಾಮುಕನ ಅಸಹ್ಯ ಘಟನೆ ದಶ್ಯ ಸೆರೆಯಾಗಿದೆ. ಯುವತಿ ನಡೆದುಕೊಂಡು ಬರುತ್ತಿದ್ದ ದಾರಿಯಲ್ಲಿ ಬೈಕ್ ನಿಲ್ಲಿಸಿದ ಕಾಮುಕ, ಆಕೆ ಹತ್ತಿರ ಬರುತ್ತಿದ್ದಂತೆ ತನ್ನ ಖಾಸಗಿ ಅಂಗವನ್ನು ಯುವತಿಗೆ ಪ್ರದರ್ಶಿಸಿ ಹಸ್ತಮೈಥುನ ಮಾಡಿಕೊಂಡಿದ್ದಾನೆ. ಈ ಘಟನೆ ಪಶ್ಚಿಮ ಬಂಗಾಳದ ಬಸೀರ್ಹಟ್ ಜಿಲ್ಲೆಯಲ್ಲಿ ನಡೆದಿದೆ.

ಅದು ಕಾಡುಗಳಿಂದು ತುಂಬಿದ ಗ್ರಾಮದ ದಾರಿ. ಸಣ್ಣ ದಾರಿಯಾಗಿದ್ದು, ಹೆಚ್ಚಿನ ವಾಹನಗಳಿಲ್ಲ. ಬೈಕ್‌‌ನಲ್ಲಿ ಬಂದ ಈ ಕಾಮುಕ, ಮುಂಭಾಗದಿಂದ ವಿರುದ್ಧ ದಿಕ್ಕಿನಲ್ಲಿ ಯುವತಿ ಬರುತ್ತಿರುವುದನ್ನು ಗಮನಿಸಿದ್ದಾನೆ. ತಕ್ಷಣವೇ ಬೈಕ್‌ನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದಾನೆ. ಬಳಿಕ ಇತರ ವಾಹನಗಳು ಬರುತ್ತಿದೆಯಾ ಎಂದು ಗಮನಿಸಿದ್ದಾನೆ. ಈ ವೇಳೆ ಹಿಂಬಾಗದಿಂದ ದ್ವಿಚಕ್ರ ವಾಹನ ಸಂಚರಿಸಿದೆ. ಈ ವೇಳೆ ಏನೂ ಗೊತ್ತಿಲ್ಲದಂತೆ ಸುಮ್ಮನೆ ನಿಂತಿದ್ದಾನೆ.

ರೈಲಿನಲ್ಲಿ ಮಲಗಿದ್ದ ಯುವತಿ ಮುಖದ ಮೇಲೆ ಹಸ್ತಮೈಥುನ ಮೂಲಕ ವೀರ‍್ಯಸ್ಖಲನ ಮಾಡಿದ ಕಾಮುಕ!

ಅತ್ತ ಅದೇ ದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದ ಯುವತಿ ಹತ್ತಿರ ಆಗಮಿಸುತ್ತಿದ್ದಂತೆ ಬೈಕ್ ಬಿಟ್ಟು ಪಕ್ಕಕ್ಕೆ ನಿಂತ ಕಾಮುಕ, ತನ್ನ ಖಾಸಗಿ ಅಂಗ ಪ್ರದರ್ಶಿಸಿದ್ದಾನೆ. ಬಳಿಕ ಯುವತಿ ಮುಂದೆ ಹಸ್ತಮೈಥುನ ಮಾಡಿದ್ದಾನೆ. ಆತಂಕಗೊಂಡ ಯುವತಿ ಬೇರೆಗಡೆ ಗಮನಹರಿಸುತ್ತಾ ಸಾಗಿದ್ದಾಳೆ. ಇತ್ತ ಹಸ್ತಮೈಥುನ ಮಾಡುತ್ತಿದ್ದ ಕಾಮುಕ, ಯುವತಿಯನ್ನು ಹಿಂಬಾಲಿಸುವ ಪ್ರಯತ್ನಕ್ಕೆ ಮುಂದಾಗಿದ್ದಾನೆ. ಆದರೆ ಇತರ ವಾಹನ ಗಮನಿಸಿ ಬೈಕ್ ಏರಿ ಹೊರಟಿದ್ದಾನೆ.

 

 

ಯುವತಿ ಬ್ಯಾಗ್ ಹಿಡಿದು ನಡೆದುಕೊಂಡು ಬಂದಿದ್ದಾಳೆ. ಹೀಗಾಗಿ ಕಾಲೇಜಿಗೆ ತೆರಳುತ್ತಿರುವ ವೇಳೆ ಈ ಘಟನೆ ನಡೆದಿರುವ ಸಾಧ್ಯತೆ ಇದೆ. ಕಾಡು ಪೊದೆಗಳಿಂದ ತುಂಬಿರುವ ಈ ದಾರಿಯಲ್ಲಿ ಇಂದು ಹಸ್ತಮೈಥುನ ಮಾಡಿದ ಈ ಕಾಮುಕ, ನಾಳೆ ಹೆಣ್ಣುಮಕ್ಕಳ ಮೇಲೆರಗುವ ಸಾಧ್ಯತೆ ಇದೆ. ಹೀಗಾಗಿ ಪಶ್ಚಿಮ ಬಂಗಾಳ ಪೊಲೀಸರು ಈ ವಿಡಿಯೋ ಆಧರಿಸಿ ಪ್ರಕರಣ ದಾಖಲಿಸಿ ತಕ್ಷಣವೇ ಕಾಮುಕನ ಬಂದಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹ ವ್ಯಕ್ತವಾಗಿದೆ. 

ದೆಹಲಿ ಮೆಟ್ರೋದಲ್ಲಿ ಹಸ್ತಮೈಥುನ ಮಾಡಿ ಅಪ್ರಾಪ್ತ ಬಾಲಕಿಯ ಮೇಲೆ ಸ್ಖಲಿಸಿದ ವ್ಯಕ್ತಿಯ ಬಂಧನ!

ಈ ರೀತಿಯ ಘಟನೆ ಮರುಕಳಿಸಬಾರದು. ಹಾಡ ಹಗಲೇ ಕಾಮುಕ ಯಾರು ಇಲ್ಲದ ದಾರಿಯಲ್ಲಿ ಈ ರೀತಿ ಮಾಡಿದ್ದಾನೆ. ಹೆಣ್ಣು ಮಕ್ಕಳು ಶಾಲಾ ಕಾಲೇಜು, ಉದ್ಯೋಗಕ್ಕೆ ತೆರಳುವುದು ಹೇಗೆ? ಅವರ ಸುರಕ್ಷತೆ ಎಲ್ಲಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌
ಜಾಲತಾಣಗಳಲ್ಲಿ ಮಕ್ಕಳ ಬಳಕೆ ನಿರ್ಬಂಧಿಸಿ: ಸುಧಾ ಮೂರ್ತಿ