ರೀಲ್ಸ್ ಗೀಳು ಅಂಟಿಕೊಂಡರೆ ಅಪಾಯ ಹೆಚ್ಚು. ಇದೀಗ ಯುವಕರು ಎರಡು ಮಹೀಂದ್ರ ಥಾರ್ ಕಾರನ್ನು ಸಮುದ್ರಕ್ಕಿಳಿಸಿ ರೀಲ್ಸ್ ಮಾಡಲು ಮುಂದಾಗಿದ್ದಾರೆ. ಆದರೆ ಸಮುದ್ರ ಅಲೆಗಳೆಗೆ ಥಾರ್ ಜೀಪ್ ನೀರುಪಾಲಾಗಿದೆ.ಭಯಾನಕ ಘಟನೆಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಕಚ್(ಜೂ.24) ರೀಲ್ಸ್ ಹುಚ್ಚಾಟ ಇದೀಗ ಹಲವರ ಜೀವಗಳನ್ನು ಬಲಿಪಡೆಯುತ್ತಿದೆ. ಅಪಾಯಾಕಾರಿ ಸ್ಟಂಟ್ ಮೂಲಕ ಅತೀ ಹೆಚ್ಚು ಲೈಕ್ಸ್, ಕಮೆಂಟ್, ವೈರಲ್ ಆಗಲು ಬಯಸುತ್ತಿದ್ದಾರೆ. ಇದೀಗ ಇದೇ ರೀಲ್ಸ್ ಗೀಳಿಗೆ ಯುವಕರು ದುಬಾರಿ ದಂಡ ತೆತ್ತಿದ ಘಟನೆ ಗುಜರಾತ್‌ನ ಕಚ್ ಜಿಲ್ಲೆಯ ಭದ್ರೇಶ್ವರ ಕಡಲ ತೀರದಲ್ಲಿ ನಡೆದಿದೆ. ಯುವಕರು ಎರಡು ಮಹೀಂದ್ರ ಥಾರ್ ಜೀಪ್‌ನ್ನು ಸಮುದ್ರಕ್ಕಿಳಿಸಿ ರೀಲ್ಸ್ ಮಾಡಿದ್ದಾರೆ. ಆದರೆ ಸಮುದ್ರದಲ್ಲಿ ಅಲೆಗಳ ಪ್ರಮಾಣ ಹೆಚ್ಚಾಗಿದೆ. ರಭಸವಾಗಿ ಅಪ್ಪಳಿಸಿದ ಅಲೆಗಳಿಂದ ಜೀಪ್ ನೀರುಪಾಲಾದ ಘಟನೆ ನಡೆದಿದೆ.
ಯುವಕರು ತಮ್ಮ ಮಹೀಂದ್ರ ಥಾರ್ ಜೀಪನ್ನು ಸಮುದ್ರಕ್ಕಿಳಿಸಿ ಅಪಾಯಕಾರಿ ಸ್ಟಂಟ್‌ಗೆ ಮುಂದಾಗಿದ್ದಾರೆ. ಇನ್‌ಸ್ಟಾಗ್ರಾಮ್ ರೀಲ್ಸ್‌ಗಾಗಿ ಯುವಕರು ಈ ಸಾಹಸ ಮಾಡಿದ್ದಾರೆ. ಸಮುದ್ರಕ್ಕಿಳಿಸಿದ ಜೀಪ್‌ನಲ್ಲಿ ಕುಳಿತು ರೀಲ್ಸ್ ಮಾಡುತ್ತಿದ್ದಂತೆ ಸಮುದ್ರದ ಅಲೆಗಳ ರಭಸ ಹೆಚ್ಚಾಗಿದೆ. ಇದರಿಂದ ಥಾರ್ ಜೀಪ್ ಸಮುದ್ರತ್ತ ಜಾರಿದೆ.
undefined
ಸ್ಪೋರ್ಟ್ಸ್ ಬೈಕ್ ಮೇಲೆ ತಾಯಿ-ಮಗನ ರೋಮ್ಯಾಂಟಿಕ್ ರೀಲ್ಸ್, ನೆಟ್ಟಿಗರಿಂದ ತಪರಾಕಿ!
ಕೆಂಪು ಹಾಗೂ ಬಿಳಿ ಬಣ್ಣದ ಎರಡು ಜೀಪ್ ರೀಲ್ಸ್‌ಗಾಗಿ ಸಮುದ್ರಕ್ಕಿಳಿಸಿದ್ದಾರೆ. ಆದರೆ ಅಲೆಗಳ ರಭಸಕ್ಕೆ ಥಾರ್ ಜೀಪು ಸಮುದ್ರತ್ತೆ ಜಾರಿದೆ. ಜೀಪ್ ಸ್ಟಾರ್ಟ್ ಮಾಡಿ ಮರಳಿ ದಡಕ್ಕೆ ತರುವ ಪ್ರಯತ್ನವನ್ನು ಯುವಕರು ಮಾಡಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಥಾರ್ ಸಮುದ್ರಪಾಲಾಗುತ್ತಿದ್ದಂತೆ ಸಾಹಯಕ್ಕಾಗಿ ಕೂಗಿದ್ದಾರೆ. ಸ್ಥಳೀಯರು ಆಗಮಿಸಿ ಥಾರ್ ಜೀಪ್ ದಡಕ್ಕೆ ಸೇರಿಸುವ ಪ್ರಯತ್ನ ಮಾಡಿದ್ದಾರೆ.
ಥಾರ್ ಜೀಪ್‌ನ್ನು ದಡ ಸೇರಿಸಿದ್ದಾರೋ ಅನ್ನೋ ಕುರಿತು ಮಾಹಿತ ಲಭ್ಯವಾಗಿಲ್ಲ. ಆದರೆ ಯುವಕರ ರೀಲ್ಸ್ ಹುಚ್ಚಾಟಕ್ಕೆ ಮಹೀಂದ್ರ ಥಾರ್ ಜೀಪನ್ನು ಬಳಸಿ ಅಪಾಯಕಾರಿ ಸ್ಟಂಟ್ ಮಾಡಿದ್ದಾರೆ. ಅತ್ತ ಜೀಪ್‌ನ್ನು ಮರಳಿ ದಡ ಸೇರಿಸಲು ಸಾಧ್ಯವಾಗದೆ, ಇತ್ತ ಪ್ರಯತ್ನ ಮಾಡಲು ಸಾಧ್ಯವಾಗದೆ ಯುವಕರು ಅಸಾಹಾಯಕಾರಿದ್ದಾರೆ.
ಯುವಕರು ತಮ್ಮ ಸಾಹಸದ ವಿಡಿಯೋವನ್ನು ಅಪ್ಲೋಡ್ ಮಾಡಿಲ್ಲ. ಆದರೆ ನೆರವಿಗೆ ಧಾವಿಸಿದ ಸ್ಥಳೀಯರೊಬ್ಬರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಹರಿದಾಡಿದೆ. ಈ ವಿಡಿಯೋ ಪೊಲೀಸರ ಕೈಸೇರಿದೆ. ತನಿಖೆ ನಡೆಸಿದ ಮುಂದ್ರ ಮರಿನ್ ಪೊಲೀಸ್ ಯುವಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 289, 114 ಹಾಗೂ ಮೋಟಾರ್ ವಾಹನ ಕಾಯ್ದೆ ಅಡಿಯಲ್ಲಿ 177, 184ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ರೀಲ್ಸ್‌ಗಾಗಿ ಹುಡುಗನ ಕೈ ಹಿಡಿದು ಕಟ್ಟಡದ ಅಂಚಿನಲ್ಲಿ ನೇತಾಡಿದ ಯುವತಿ
ಇತ್ತ ಪೊಲೀಸರ ಯುವ ಸಮೂಹಕ್ಕೆ ಎಚ್ಚರಿಕೆ ನೀಡಿದ್ದಾರೆ. ರೀಲ್ಸ್ ಹೆಸರಿನಲ್ಲಿ ಸಾಹಸ, ಸ್ಟಂಟ್, ಇತರರನ್ನು ಬೆದರಿಸುವುದು, ತೊಂದೆರೆ ನೀಡುವುದು, ಪ್ರಾಣಿಗಳನ್ನು ಬಳಸಿಕೊಳ್ಳುವುದು ಮಾಡಿದರೆ ಆರೋಪಿಗಳ ಜೊತೆ ಪೋಷಕರಿಗೂ ತಟ್ಟಲಿದೆ ಕಂಟಕ ಎಂದಿದ್ದಾರೆ.