ಇದಪ್ಪ ಲವ್‌ ಅಂದರೆ..! ಗರ್ಲ್‌ಫ್ರೆಂಡ್‌ ಕೊನೆಯಾಸೆ ಈಡೇರಿಸಲು ಆಕೆಯ ಮೃತದೇಹಕ್ಕೆ ತಾಳಿ ಕಟ್ಟಿದ ಪ್ರೇಮಿ..!

By BK Ashwin  |  First Published Nov 20, 2022, 5:34 PM IST

ಶುಕ್ರವಾರ ಅಸ್ಸಾಂನ ಗುವಾಹಟಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಬಹುಕಾಲದ ಗರ್ಲ್‌ಫ್ರೆಂಡ್‌ ಅನ್ನು 27 ವರ್ಷದ ಯುವಕ ಮದುವೆಯಾಗಿದ್ದಾನೆ. ಅಲ್ಲದೆ, ಮತ್ತೆ ಮದುವೆಯಾಗಲ್ಲ ಎಂದು ಆಕೆಯ ಮೃತದೇಹದ ಎದುರೇ ಶಪಥ ಮಾಡಿದ್ದಾನೆ.


ಹುಡುಗರು ಸಾಮಾನ್ಯವಾಗಿ ಶೋಕಿಗೆ ಹಾಗೂ ಮೋಹದ ಆಕರ್ಷಣೆಗೆ ಪ್ರೀತಿ ಮಾಡುತ್ತಿರುತ್ತಾರೆ. ಆದರೆ, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್‌ ಆಗಿರುವ ವಿಡಿಯೋದಲ್ಲಿ ಯುವ ಪ್ರೇಮಿಯೊಬ್ಬ (Lover) ತನ್ನ ಗರ್ಲ್‌ಫ್ರೆಂಡ್‌ (Girl Friend) ಸಾವಿಗೀಡಾದ ಬಳಿಕ ಅಂದರೆ ಆಕೆಯ ಮೃತದೇಹಕ್ಕೆ (Dead Body) ವಿವಾಹವಾಗಿದ್ದಾನೆ (Marriage) ಈ ಮೂಲಕ ತನ್ನನ್ನು ಮದುವೆಯಾಗಲು ಇಚ್ಛಿಸಿದ್ದ ಯವತಿಯನ್ನು ಆಕೆ ಮೃತಪಟ್ಟ ಬಳಿಕ ವಿವಾಹವಾಗಿದ್ದಾನೆ. ಅಲ್ಲದೆ, ತಾನು ಈಗಾಗಲೇ ವಿವಾಹವಾಗಿರುವುದರಿಂದ ಮತ್ತೊಮ್ಮೆ ಮದುವೆಯಾಗಲ್ಲ ಎಂದೂ ಹೇಳಿದ್ದಾನೆ. ನೀವು ನಂಬಲೂ ಕಷ್ಟವಾದರೂ ಇದು ನಿಜ..!
 
ಅಂದಹಾಗೆ, ಈ ಘಟನೆ ನಡೆದಿರೋದು ಭಾರತದಲ್ಲೇ. ಶುಕ್ರವಾರ ಅಸ್ಸಾಂನ (Assam) ಗುವಾಹಟಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಬಹುಕಾಲದ ಗರ್ಲ್‌ಫ್ರೆಂಡ್‌ ಅನ್ನು 27 ವರ್ಷದ ಯುವಕ ಮದುವೆಯಾಗಿದ್ದಾನೆ. ಅಲ್ಲದೆ, ಮತ್ತೆ ಮದುವೆಯಾಗಲ್ಲ ಎಂದು ಆಕೆಯ ಮೃತದೇಹದ ಎದುರೇ ಶಪಥ ಮಾಡಿದ್ದಾನೆ.

ಇದನ್ನು ಓದಿ: ಘರ್ ವಾಪ್ಸಿ... ಪ್ರೇಮಿಯ ವಿವಾಹವಾಗಲೂ ಹಿಂದೂ ಧರ್ಮ ಸ್ವೀಕರಿಸಿದ 19 ವರ್ಷದ ಮುಸ್ಲಿಂ ಹುಡುಗಿ

Tap to resize

Latest Videos

ಬಿಟುಪನ್‌ ತಮುಲಿ ಎಂದು ಗುರುತಿಸಲಾದ ಯುವಕ ಮೃತ ಹುಡುಗಿಗೆ ತಾಳಿ ಕಟ್ಟಿ ಸಿಂಧೂರವಿಟ್ಟು ಪಕ್ಕಾ ಭಾರತೀಯ ಸಂಪ್ರದಾಯದಂತೆ ಮದುವೆಯಾಗಿದ್ದಾನೆ. ನಂತರ 27 ವರ್ಷದ ಯುವಕ ಆಕೆಯ ಕತ್ತಿಗೆ ಬಿಳಿಯ ಹಾರವನ್ನೂ ಹಾಕಿದ್ದಾನೆ. ನೆಲದಲ್ಲಿ ಮಲಗಿದ್ದ ಆಕೆಯ ಮೃತದೇಹಕ್ಕೆ ಈ ರೀತಿ ಮಾಡಿದ್ದಾನೆ. ನಂತರ ಆಕೆಯ ದೇಹದ ಭಾಗಗಳಿಗೆ ಮತ್ತೊಂದು ಹಾರವನ್ನು ಮುಟ್ಟಿಸಿ ತಾನೂ ಹಾರ ಹಾಕಿಕೊಂಡಿದ್ದಾನೆ. 
 
ಅಸ್ಸಾಂನ ಮೋರಿಗಾಂವ್‌ ಮೂಲದ ಬಿಟುಪನ್‌ ಹಾಗೂ ಛಪರ್‌ಮುಖ್‌ ಬಳಿಯ ಕೋಸುವಾ ಗ್ರಾಮದ ಪ್ರಾರ್ಥನಾ ಬೋರಾ ಇಬ್ಬರೂ ಬಹುಕಾಲದಿಂದ ಪ್ರೇಮಿಗಳಾಗಿದ್ದರು. ಅವರು ಮದುವೆಯಾಗುವುದಾಗಿ ಎರಡೂ ಕುಟುಂಬದವರಿಗೆ ಹೇಳಿಕೊಂಡಿದ್ದರು, ಅವರ ಸಂಬಂಧದ ಬಗ್ಗೆಯೂ ಅರಿವಿತ್ತು ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: ಸ್ನೇಹಿತರ ನಡುವೆ ಪ್ರೀತಿ ಹುಟ್ಟಿದಾಗ…. ಏನು ಬದಲಾವಣೆ ನಿಮ್ಮಲ್ಲಾಗಬೇಕು?
 
ಪ್ರಾರ್ಥನಾ ಬೋರಾ ಇದ್ದಕ್ಕಿದ್ದಂತೆ ಕೆಲ ದಿನಗಳ ಮುನ್ನ ಅನಾರೋಗ್ಯಕ್ಕೀಡಾದಳು, ನಂತರ ಆಕೆಯನ್ನು ಗುವಾಹಟಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ನಮ್ಮ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ಅವಳನ್ನು ಉಳಿಸಿಕೊಳ್ಳಲು ನಮ್ಮಿಂದ ಆಗಲಿಲ್ಲ. ಶುಕ್ರವಾರ ರಾತ್ರಿ ಆಕೆ ಮೃತಪಟ್ಟಳು ಎಂದು ಮೃತ ಯುವತಿಯ ಸಂಬಂಧಿಕರು ಸುಭೋನ್‌ ಬೋರಾ ಹೇಳಿದ್ದಾರೆ. 
   
ಈ ಸಾವಿನ ವಿಷಯ ತಿಳಿದು ಧೃತಿಗೆಟ್ಟ ಬಿಪುಟಾನ್‌ ಮದುವೆಯಾಗಲು ಬೇಕಾದ ಅಗತ್ಯ ವಸ್ತುಗಳನ್ನು ಆಕೆಯ ಅಂತ್ಯಸಂಸ್ಕಾರ ಮಾಡುವ ಜಾಗಕ್ಕೆ ತಂದಿದ್ದ ಎಂದು ತಿಳಿದುಬಂದಿದೆ. ಬಿಪುಟನ್‌ ಅಲ್ಲಿಗೆ ಬಂದಾಗ ಆಕೆಯನ್ನು ಮದುವೆಯಾಗುವುದಾಗಿ ಹೇಳಿದ. ಅವನ ಮಾತು ಕೇಳಿ ನಾವು ಮೂಕವಿಸ್ಮಿತರಾದೆವು. ಇದು ನಮ್ಮ ಕಲ್ಪನೆಗೂ ಮೀರಿತ್ತು. ನನ್ನ ಸಹೋದರಿಯನ್ನು ಅಷ್ಟು ಆಳವಾಗಿ ಯಾರಾದರೂ ಪ್ರೀತಿಸುತ್ತಾರೆಂದು ನಾವು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ನಾವು ಅವನನ್ನು ತಡೆಯುವ ಬಗ್ಗೆ ಅಂದುಕೊಳ್ಳುವುದಕ್ಕೂ ಆಗಲಿಲ್ಲ ಎಂದು ಮೃತ ಯುವತಿಯ ಕಸಿನ್‌ ಸುಭೋನ್‌ ಹೇಳಿಕೆ ನೀಡಿದ್ದಾನೆ.  
 

ಇದನ್ನೂ ಓದಿ: ಪಾಠ ಮಾಡೋ ಪ್ರೊಫೆಸರ್ ಮೇಲೆ ಹುಚ್ಚು ಪ್ರೀತಿ ಇವಳಿಗೆ, ನಿದ್ರೆ, ಊಟ ಎಲ್ಲವೂ ಬಿಟ್ಟಾಗಿದೆ!

ಆತ ಅಳುತ್ತಲೇ ಎಲ್ಲ ಆಚರಣೆಗಳನ್ನು ಮಾಡಿದ. ನನ್ನ ಸಹೋದರಿ ನಿಜಕ್ಕೂ ಅದೃಷ್ಟವಂತಳಾಗಿದ್ದಳು. ಆಕೆ ಬಿಪುಟನ್‌ನನ್ನು ಮದುವೆಯಾಗಲು ಬಯಸಿದ್ದಳು, ಪ್ರೇಮಿ ಆಕೆಯ ಕೊನೆಯಾಸೆಯನ್ನು ಈಡೇರಿಸಿದ. ಈ ವಿಚಾರದಲ್ಲಿ ಇನ್ನೇನು ಹೇಳಲು ಇದೆ ಎಂದು ಸುಭೋನ್‌ ಪ್ರಶ್ನೆ ಮಾಡಿದ್ದು, ಯುವಕನ ಪ್ರೀತಿ ಇಡೀ ಕುಟುಂಬವನ್ನೇ ಆಶ್ಚರ್ಯಚಕಿತರನ್ನಾಗಿ ಮಾಡಿದೆ ಎಂದೂ ಹೇಳಿಕೊಂಡಿದ್ದಾನೆ. 

click me!