ಅವಳಿ ಮಕ್ಕಳಿಗೆ ತಾಯಿಯಾದ ಮುಖೇಶ್‌ ಅಂಬಾನಿ ಪುತ್ರಿ ಇಶಾ ಅಂಬಾನಿ

By BK Ashwin  |  First Published Nov 20, 2022, 4:17 PM IST

ಇಶಾ ಅಂಬಾನಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ಭಾನುವಾರ ಅಧಿಕೃತ ಮಾಹಿತಿ ಹೊರಬಿದ್ದಿದೆ. ನವೆಂಬರ್ 19, 2022 ರಂದು, ಶನಿವಾರ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಈಗಾಗಲೇ ಹೆಸರನ್ನೂ ಇಡಲಾಗಿದೆ ಎಂದು ಅಂಬಾನಿ ಹಾಗೂ ಪಿರಾಮಲ್‌ ಕುಟುಂಬಗಳು ಮಾಹಿತಿ ನೀಡಿದೆ.


ಉದ್ಯಮಿ ಹಾಗೂ ಭಾರತದ ಅತಿ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಖೇಶ್‌ ಅಂಬಾನಿ (Mukesh Ambani) ಪುತ್ರಿ ಇಶಾ ಅಂಬಾನಿ (Isha Ambani) ಹಾಗೂ ಅವರ ಪತಿ ಆನಂದ್‌ ಪಿರಾಮಲ್‌ (Anand Piramal) ಪೋಷಕರಾಗಿ ಬಡ್ತಿ ಪಡೆದಿದ್ದಾರೆ. ಇಶಾ ಅಂಬಾನಿ ಅವಳಿ (Twins) ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ಭಾನುವಾರ ಅಧಿಕೃತ ಮಾಹಿತಿ ಹೊರಬಿದ್ದಿದೆ. ನವೆಂಬರ್ 19, 2022 ರಂದು, ಶನಿವಾರ ಇಶಾ ಅಂಬಾನಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಎರಡೂ ಮಕ್ಕಳಿಗೆ ಈಗಾಗಲೇ ಹೆಸರನ್ನೂ ಇಡಲಾಗಿದೆ ಎಂದು ಅಂಬಾನಿ ಹಾಗೂ ಪಿರಾಮಲ್‌ ಕುಟುಂಬಗಳು ಮಾಹಿತಿ ನೀಡಿದೆ.

ಇಶಾ ಹಾಗೂ ಮಕ್ಕಳು, ಅಂದರೆ ಹೆಣ್ಣು ಮಗು ಆದಿಯಾ (Aadiya) ಮತ್ತು ಗಂಡು ಮಗು ಕೃಷ್ಣ (Krishna) - ಮೂವರ ಆರೋಗ್ಯವೂ ಚೆನ್ನಾಗಿದೆ ಎಂದು ಅಂಬಾನಿ ಹಾಗೂ ಪಿರಾಮಲ್‌ ಕುಟುಂಬಗಳು ಇಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಮುಖೇಶ್‌ ಅಂಬಾನಿ ಹಾಗೂ ಪತ್ನಿ ನೀತಾ ಅಂಬಾನಿ ಮತ್ತು ಆನಂದ್‌ ಅವರ ಪೋಷಕರಾದ ಸ್ವಾತಿ ಹಾಗೂ ಅಜಯ್‌ ಪಿರಾಮಲ್‌ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಅವಳಿ ಮಕ್ಕಳಿಗೆ ಹಾಗೂ ಅವರ ಜೀವನದ ಈ ಪ್ರಮುಖ ಹಂತದಲ್ಲಿರುವ ಇಶಾ ಮತ್ತು ಆನಂದ್‌ ಅವರಿಗೆ ಆಶೀರ್ವಾದ ಹಾಗೂ ಶುಭ ಹಾರೈಕೆ ನೀಡಬೇಕೆಂದು ಸಹ ಎರಡೂ ಉದ್ಯಮಿಗಳ ಕುಟುಂಬವು ಮನವಿ ಮಾಡಿಕೊಂಡಿದೆ. 

Tap to resize

Latest Videos

ಇದನ್ನು ಓದಿ: ರಿಲಯನ್ಸ್‌ ರೀಟೇಲ್‌ ಮುಖ್ಯಸ್ಥೆಯಾಗಿ ಇಶಾ ಅಂಬಾನಿಯನ್ನು ಪರಿಚಯಿಸಿದ ತಂದೆ
 
ಇಶಾ ಅಂಬಾನಿ ಹಾಗೂ ಆನಂದ್ ಪಿರಾಮಲ್‌ 2018 ರಲ್ಲಿ ಮದುವೆಯಾಗಿದ್ದರು. ಆನಂದ್‌ ಪಿರಾಮಲ್‌ ಗ್ರೂಪ್‌ನ ಎಕ್ಸಿಕ್ಯುಟಿವ್‌ ನಿರ್ದೇಶಕರಾಗಿದ್ದಾರೆ. ಈ ಮಧ್ಯೆ, ಆಗಸ್ಟ್‌ ತಿಂಗಳಲ್ಲಿ ವರ್ಚುವಲ್‌ ಆಗಿ ನಡೆದ ರಿಲಯನ್ಸ್‌ ಇಂಡಸ್ಟ್ರೀಸ್‌ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಖೇಶ್‌ ಅಂಬಾನಿ ಅವರು ಇಶಾ ಅಂಬಾನಿಯನ್ನು ರಿಲಯನ್ಸ್‌ ರೀಟೇಲ್‌ನ ನಿರ್ದೇಶಕಿ ಎಂದು ಘೋಷಣೆ ಮಾಡಿದ್ದರು. 

217 ಬಿಲಿಯನ್ ಡಾಲರ್‌ ಮೌಲ್ಯದ ರಿಲಯನ್ಸ್‌ ಇಂಡಸ್ಟ್ರೀಸ್‌ (Reliance Industries) ಸಂಸ್ಥೆಯ ಅಂಗ ಸಂಸ್ಥೆಯಾಗಿರುವ ರಿಲಯನ್ಸ್‌ ರೀಟೇಲ್‌ (Reliance Retail) ಕಂಪನಿಯ ಮುಖ್ಯಸ್ಥೆಯನ್ನಾಗಿ (Chairperson) ಇಶಾ ಅಂಬಾನಿಯನ್ನು ತಂದೆ ಮುಖೇಶ್‌ ಅಂಬಾನಿ ಘೋಷಣೆ ಮಾಡಿದ್ದರು.. ರಿಲಯನ್ಸ್ ಇಂಡಸ್ಟ್ರೀಸ್‌ನ 45 ನೇ ಎಜಿಎಂ (ವಾರ್ಷಿಕ ಸಾಮಾನ್ಯ ಸಭೆ) ನಲ್ಲಿ ಮಾತನಾಡಿದ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಖೇಶ್‌ ಅಂಬಾನಿ ಈ ನೇಮಕವನ್ನು ಖಚಿತಪಡಿಸಿದ್ದರು. ಜೂನ್‌ ತಿಂಗಳಲ್ಲಿ ರಿಲಯನ್ಸ್ ಜಿಯೋ ಇನ್ಫೋಕಾಮ್‌ನ ಟೆಲಿಕಾಂ ಘಟಕದ ಮುಖ್ಯಸ್ಥರಾಗಿ ಆಕಾಶ್‌ ಅಂಬಾನಿ ಅವರ ನೇಮಕದ ಬಳಿಕ ಈಗ ಪುತ್ರಿ ಇಶಾ ಅಂಬಾನಿಯನ್ನು ರಿಲಯನ್ಸ್ ರೀಟೇಲ್‌ ಮುಖ್ಯಸ್ಥೆಯಾಗಿ ಪರಿಚಯಿಸಲಾಗಿದೆ. 

ಇದನ್ನೂ ಓದಿ: ಅಮ್ಮನನ್ನೂ ಮೀರಿಸುವಂತಿದೆ ಇಶಾ ಅಂಬಾನಿ ಲೈಫ್‌ಸ್ಟೈಲ್‌, ಅಬ್ಬಬ್ಬಾ ಸೀರೆ ಕಲೆಕ್ಷನ್ ಹೆಂಗಿದೆ ನೋಡಿ

ಇನ್ನು, ರಿಲಯನ್ಸ್ ಇಂಡಸ್ಟ್ರೀಸ್‌ನ 45 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ್ದ ಇಶಾ ಅಂಬಾನಿ, ರಿಲಯನ್ಸ್ ರಿಟೇಲ್ ಎಫ್‌ಎಂಸಿಜಿ (ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್) ವ್ಯವಹಾರವನ್ನು ಪ್ರಾರಂಭಿಸುತ್ತದೆ ಎಂದು ಘೋಷಿಸಿದ್ದರು. ಹಾಗೂ, ಈ ಸಭೆಯಲ್ಲಿ 30ರ ಹರೆಯದ ಇಶಾ, ವಾಟ್ಸಾಪ್ ಬಳಸಿ ಆನ್‌ಲೈನ್‌ನಲ್ಲಿ ದಿನಸಿ ಆರ್ಡರ್‌ಗಳನ್ನು ನೀಡುವುದು ಮತ್ತು ಪಾವತಿ ಮಾಡುವ ಕುರಿತು ಪ್ರಸ್ತುತಿಯನ್ನು ಸಹ ನೀಡಿದ್ದರು. 

ಇಶಾ ಅಂಬಾನಿ, ಅಮೆರಿಕದ ಯೇಲ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದಾರೆ. 65 ವರ್ಷ ಹರೆಯದ ಮುಖೇಶ್‌ ಅಂಬಾನಿ ಅವರಿಗೆ 30 ವರ್ಷದ ಆಕಾಶ್‌ ಅಂಬಾನಿ ಹಾಗೂ ಇಶಾ ಅಂಬಾನಿ ಎಂಬ ಅವಳಿ ಮಕ್ಕಳಿದ್ದು, ಇವರಿಬ್ಬರಿಗೆ 27 ವರ್ಷದ ಅನಂತ್ ಎಂಬ ಕಿರಿಯ ಸಹೋದರನಿದ್ದಾನೆ. ಅನಂತ್ ಅಂಬಾನಿ ದುಬೈನಲ್ಲಿ ಅತ್ಯಂತ ಹೆಚ್ಚು ದುಬಾರಿಯ ಬೀಚ್‌ ಸೈಡ್‌ ವಿಲ್ಲಾ ಖರೀದಿಸಿದ್ದಾರೆ ಎಂಬ ವರದಿಯ ಬಳಿಕ ಇಶಾ ಅಂಬಾನಿಗೆ ಉನ್ನತ ಸ್ಥಾನ ನೀಡಿರುವುದನ್ನು ಖಚಿತಪಡಿಸಲಾಗಿದೆ. 

ಇದನ್ನೂ ಓದಿ: Succession Plan: ಮಕ್ಕಳಿಗೆ ಉತ್ತರಾಧಿಕಾರ ಹಂಚುತ್ತಿರುವ Mukesh Ambani, ಯಾರಿಗೆ ಏನೆಲ್ಲಾ ಹಂಚಿಕೆ?

click me!