ಕ್ರಿಕೆಟ್ ಆಡುತ್ತಿದ್ದ ವೇಳೆ ಯುವಕನೊಬ್ಬ ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಮುಂಬೈನ ಮೀರಾ ರೋಡ್ ಬಳಿ ನಡೆದಿದೆ. ವೈರಲ್ ಆಗಿರುವ ವೀಡಿಯೊದಲ್ಲಿ, ಯುವಕನೊಬ್ಬ ಬ್ಯಾಟಿಂಗ್ ಮಾಡಲು ಮುಂದಾಗುತ್ತಾನೆ. ಆದರೆ ಹಠಾತ್ತನೆ ಮೈದಾನದಲ್ಲಿ ಕುಸಿದು ಬೀಳುತ್ತಾನೆ.
ಕ್ರಿಕೆಟ್ ಆಡುತ್ತಿದ್ದ ವೇಳೆ ಯುವಕನೊಬ್ಬ ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಮುಂಬೈನ ಮೀರಾ ರೋಡ್ ಬಳಿ ನಡೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಯುವಕರು ಟರ್ಫ್ ಕ್ರಿಕೆಟ್ ಆಡುತ್ತಿರುವುದನ್ನು ನೋಡಬಹುದು. ಹೀಗೆ ಆಟ ಆಡುತ್ತಿರುವ ಸಂದರ್ಭದಲ್ಲಿ ಪಿಂಕ್ ಜೆರ್ಸಿ ಧರಿಸಿದ ಯುವಕನೊಬ್ಬ ಬ್ಯಾಟಿಂಗ್ ಮಾಡಲು ಮುಂದಾಗುತ್ತಾನೆ. ಆದರೆ ಹಠಾತ್ತನೆ ಮೈದಾನದಲ್ಲಿ ಕುಸಿದು ಬೀಳುತ್ತಾನೆ.
ಮೈದಾನದಲ್ಲಿರುವ ಉಳಿದ ಆಟಗಾರರು ಗಾಬರಿಗೊಂಡು ಆತನ ಬಳಿಗೆ ಧಾವಿಸುತ್ತಾರೆ. ಆಟಗಾರರು ಆತನನ್ನು ಎಬ್ಬಿಸಲು ಪ್ರಯತ್ನಿಸುವುದನ್ನು ನೋಡಬಹುದು. ಆದರೆ ಯುವಕ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸುವುದಿಲ್ಲ.
undefined
ಯೋಗ ಶಿಬಿರದಲ್ಲಿ ವ್ಯಕ್ತಿಗೆ ಹೃದಯಾಘಾತ, ಯೋಗಾಸನ ಮಾಡ್ತಿದ್ದಾರೆಂದು ತಪ್ಪು ತಿಳಿದುಕೊಂಡು ಸುಮ್ಮನಿದ್ದ ಮಂದಿ!
ವರದಿಯ ಪ್ರಕಾರ, ಮೀರಾ ರೋಡ್‌ನ ಕಾಶಿಮೀರಾ ಪ್ರದೇಶದಲ್ಲಿ ಟರ್ಫ್ ಕ್ರಿಕೆಟ್ ಆಡುತ್ತಿದ್ದಾಗ ಯುವಕನಿಗೆ ಹೃದಯಾಘಾತವಾಗಿದೆ. ಸಿಕ್ಸರ್ ಬಾರಿಸಿದ ಯುವ ಆಟಗಾರ ಮೈದಾನದಲ್ಲಿ ಕುಸಿದು ಬಿದ್ದಿದ್ದಾನೆ. ಟರ್ಫ್ ಕ್ರಿಕೆಟ್‌ನ್ನು ಕಂಪನಿಯೊಂದು ಆಯೋಜಿಸಿದ್ದು, ಇಲ್ಲಿ ಉದ್ಯೋಗಿಗಳು ಪರಸ್ಪರ ವಿರುದ್ಧ ಕ್ರಿಕೆಟ್ ಆಡುತ್ತಿದ್ದರು. ಟರ್ಫ್ ಕ್ರಿಕೆಟ್ ಪಂದ್ಯದಲ್ಲಿ ಸಿಕ್ಸರ್ ಬಾರಿಸಿದ ನಂತರ ಮೈದಾನದಲ್ಲಿ ಕುಸಿದುಬಿದ್ದ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಘಟನೆಯ ಕುರಿತು ಕಾಶಿಗೋವಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಯುವಕರಲ್ಲಿ ಹೆಚ್ಚುತ್ತಿದೆ ಹೃದಯಾಘಾತದ ಪ್ರಕರಣ
ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕ್ರಿಕೆಟ್ ಆಡುವಾಗ ಜನರು ಸಾವನ್ನಪ್ಪಿದ ಹಲವಾರು ಪ್ರಕರಣಗಳಿವೆ. ಜನವರಿಯಲ್ಲಿ ನೋಯ್ಡಾದಲ್ಲಿ ಟೆಕ್ಕಿಯೊಬ್ಬರು ಮೈದಾನದಲ್ಲಿ ಆಟವಾಡುತ್ತಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ ಆಘಾತಕಾರಿ ಘಟನೆ ನಡೆದಿತ್ತು. ಈ ವ್ಯಕ್ತಿ ರನ್‌ಗಾಗಿ ಓಡುತ್ತಿದ್ದಾಗ ಕ್ರೀಸ್‌ನ ಮಧ್ಯದಲ್ಲಿ ಇದ್ದಕ್ಕಿದ್ದಂತೆ ನೆಲಕ್ಕೆ ಕುಸಿದು ಮೃತಪಟ್ಟರು. ಇತ್ತೀಚಿಗೆ ಅನೇಕ ಯುವಕರು ಎದೆ ನೋವು ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ.
ಚಿಲ್ಡ್ ಬಿಯರ್, ಕೋಲ್ಡ್ ನೀರು... ಬೇಸಿಗೆಯಲ್ಲಿ ಹೃದಯಾಘಾತಕ್ಕೆ ಇವೂ ಆಗಬಹುದು ಕಾರಣ