ಮಧ್ಯಪ್ರದೇಶದಲ್ಲಿ ಕ್ವೀನ್‌ ಸ್ವೀಪ್‌ನತ್ತ ಬಿಜೆಪಿ? ಎಲ್ಲಾ 29 ಕ್ಷೇತ್ರಗಳಲ್ಲಿ ಕಮಲ ಕಲಿಗಳ ಮುನ್ನಡೆ 

By Mahmad RafikFirst Published Jun 4, 2024, 10:33 AM IST
Highlights

ಮಧ್ಯಪ್ರದೇಶದ ಅಂಚೆ ಮತಗಳ ಎಣಿಕೆಯಲ್ಲಿ (Postal Votes) ಎಲ್ಲಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಮುನ್ನಡೆಯಲ್ಲಿದೆ ಎಂದು ವರದಿಯಾಗುತ್ತಿದೆ. ಮತ್ತೊಂದೆಡೆ ಬಿಜೆಪಿ ನಾಯಕರ ಮತಗಳ ಅಂತರ ಇಳಿಕೆಯತ್ತ ಸಾಗುತ್ತಿರೋದನ್ನು ಸಹ ಗಮನಿಸಬಹುದು. 

ಭೋಪಾಲ್: ಸದ್ಯದ ಟ್ರೆಂಡ್ ಪ್ರಕಾರ ಮಧ್ಯಪ್ರದೇಶದ (Madhya Pradesh Loksabha Election Results) ಎಲ್ಲಾ 29 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ (BJP Candidate) ಮನ್ನಡೆ ಕಾಯ್ದುಕೊಳ್ಳುತ್ತಿದ್ದಾರೆ. ಬೆಳಗ್ಗೆಯ 10.30ರ ಅಂಕಿ ಅಂಶಗಳ ಪ್ರಕಾರ ಮಧ್ಯಪ್ರದೇಶದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡುವತ್ತ ಹೆಜ್ಜೆ ಇರಿಸುತ್ತಿದೆ. ಮಧ್ಯಪ್ರದೇಶದ ಅಂಚೆ ಮತಗಳ ಎಣಿಕೆಯಲ್ಲಿ (Postal Votes) ಎಲ್ಲಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಮುನ್ನಡೆಯಲ್ಲಿದೆ ಎಂದು ವರದಿಯಾಗುತ್ತಿದೆ. ಭೋಪಾಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅರುಣ್ ಶ್ರೀವಾಸ್ತವ ಅವರಿಗಿಂತ ಬಿಜೆಪಿಯ ಅಲೋಕ್ ಶರ್ಮಾ ಮುನ್ನಡೆ ಕಾಯ್ದುಕೊಳ್ಳುತ್ತಿದ್ದಾರೆ. ಶಾಹದೋಲ್‌ನಲ್ಲಿ ಬಿಜೆಪಿಯ ಹಿಮಾದ್ರಿ ಸಿಂಗ್ ಅಂಚೆ ಮತ ಹಾಗೂ ಮೊದಲ ಸುತ್ತಿನಲ್ಲಿಯೂ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮತ್ತೊಂದೆಡೆ ಬಿಜೆಪಿ ನಾಯಕರ ಮತಗಳ ಅಂತರ ಇಳಿಕೆಯತ್ತ ಸಾಗುತ್ತಿರೋದನ್ನು ಸಹ ಗಮನಿಸಬಹುದು. 

ನಾಲ್ಕು ಕ್ಷೇತ್ರಗಳ ಮೇಲೆ ಎಲ್ಲರ ಕಣ್ಣು

Latest Videos

ಗುಣಾ, ವಿದಿಶಾ , ಛಿಂದ್ವಾರಾ  ಮತ್ತು ರಾಜ್‌ಗಢ್‌ನಂತಹ ಕ್ಷೇತ್ರಗಳ ಮೇಲೆ ಎಲ್ಲರ ಕಣ್ಣಿದೆ. ಮಧ್ಯಪ್ರದೇಶದ ಗುಣಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಜ್ಯೋತಿರಾದಿತ್ಯಾ ಸಿಂಧಿಯಾ ಮತ್ತು ಕಾಂಗ್ರೆಸ್‌ನಿಂದ ಯಾದವೇಂದ್ರ ಸಿಂಗ್ ಕಣದಲ್ಲಿದ್ದಾರೆ. 

ವಿಧಿಶಾದಲ್ಲಿ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ ಸ್ಪರ್ಧೆ ಮಾಡಿದ್ದರೆ ಎದುರಾಳಿಯಾಗಿ ಕಾಂಗ್ರೆಸ್‌ ಪ್ರತಾಪ್ ಭಾನು ಶರ್ಮಾ ಇದ್ದಾರೆ. ಛಿಂದ್ವಾಡದಲ್ಲಿ ಬಿಜೆಪಿಯಿಂದ ವಿವೇಕ್ ಬಂಠಿ ಸಾಹೂ, ಕಾಂಗ್ರೆಸ್‌ನಿಂದ ನಕುಲನಾಥ್ ಸ್ಪರ್ಧೆಯಲ್ಲಿದ್ದಾರೆ. ಇನ್ನು ರಾಜಗಢನಲ್ಲಿ ಬಿಜೆಪಿಯ ರೋಡ್ಮಲ್ ನಾಗರ್ ಮತ್ತು ಕಾಂಗ್ರೆಸ್‌ನ ದಿಗ್ವಿಜಯ್ ಸಿಂಗ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.

ಇಂದೋರ್‌ನಲ್ಲಿ ನೋಟಾಗೆ ಅತ್ಯಧಿಕ ಮತಗಳು 

ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಇಂದೋರ್‌ನಲ್ಲಿ ನೋಟಾಗೆ 5 ಸಾವಿರ ವೋಟ್ ಬಂದಿದ್ದವು. ಆದ್ರೆ ಈ ಬಾರಿ ಅಂಚೆ ಮತ ಹಾಗೂ ಮೊದಲ ಎರಡು ಸುತ್ತಿನಲ್ಲಿಯೇ ನೋಟಾಗೆ 10,168 ಮತಗಳು ಬಂದಿವೆ.  

Live Blog: ದೇಶದೆಲ್ಲೆಡೆ ಎನ್‌ಡಿಎಗೆ 290, ಇಂಡಿ ಒಕ್ಕೂಟಕ್ಕೆ 207 ಕ್ಷೇತ್ರಗಳಲ್ಲಿ ಮುನ್ನಡೆ

 

ಇಂದು ಫಲಿತಾಂಶ ಪ್ರಕಟ

ಏಪ್ರಿಲ್‌ 19 ರಿಂದ ಆರಂಭವಾಗಿದ್ದ 18ನೇ ಲೋಕಸಭೆ ಚುನಾವಣೆ ಏಳು ಹಂತಗಳಲ್ಲಿ ನಡೆದು ಜೂನ್‌ 1 ರಂದು ಮುಕ್ತಾಯವಾಗಿತ್ತು. ಇಂದು ಲೋಕಕದನದ ಮಹಾತೀರ್ಪು ಇಂದು ಹೊರಬೀಳಲಿದೆ. ಜಿದ್ದಾಜಿದ್ದಿಯ ಚುನಾವಣೆಯ ಫಲಿತಾಂಶ ದೇಶದ ಕುತೂಹಲ ಕೆರಳಿಸಿದೆ. ಬಿಜೆಪಿಯ ಚಾರ್‌ ಸೌ ಪಾರ್‌ ಎನ್ನುವ ಟಾರ್ಗೆಟ್‌ ನಿಜವಾಗಲಿದೆಯೇ? ಅಥವಾ ಇಂಡಿಯಾ ಮೈತ್ರಿಯ ಅಧಿಕಾರದ ಆಸೆ ಈಡರೇಲಿದೆಯೇ ಅನ್ನೋದು  ತಿಳಿಯಲಿದೆ. ದೇಶದ 543 ಲೋಕಸಭಾ ಕ್ಷೇತ್ರಕ್ಕೆ ಶೇ. 66.33 ರಷ್ಟು ಮತದಾನವಾಗಿದೆ. ಬಿಜೆಪಿ ಒಟ್ಟು 441 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರೆ, ಕಾಂಗ್ರೆಸ್‌ 328 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದೆ. ಚುನಾವಣಾ ಆರಂಭಕ್ಕೂ ಮುನ್ನವೇ ಸೂರತ್‌ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. 

Live Blog: ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಬಿಜೆಪಿಗೆ ಮುನ್ನಡೆ

ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ವಯನಾಡ್‌, ರಾಯ್‌ಬರೇಲಿ ಕ್ಷೇತ್ರದಲ್ಲಿ ರಾಹುಲ್‌ ಗಾಂಧಿ, ಗುಜರಾತ್‌ನ ಗಾಂಧಿನಗರದಲ್ಲಿ ಅಮಿತ್‌ ಶಾ, ತಮಿಳುನಾಡಿನ ಕೊಯಮತ್ತೂರಿನಲ್ಲಿ ಅಣ್ಣಾಮಲೈ ಅವರ ರಿಸಲ್ಟ್‌ ಬಗ್ಗೆ ಹೆಚ್ಚಿನ ನಿರೀಕ್ಷ ಗರಿಗೆದರಿದೆ.  ದಕ್ಷಿಣ ಭಾರತದಲ್ಲಿ ಬಿಜೆಪಿ ಪ್ರಾಬಲ್ಯ ಹೇಗಿರಲಿದೆ, ಉತ್ತರ ಭಾರತದ ಮತದಾರರನ್ನು ಸೆಳೆಯಲು ಇಂಡಿಯಾ ಮೈತ್ರಿ ಯಶಸ್ವಿಯಾಗಿದ್ಯಾ ಅನ್ನೋದು ಇಂದು ತೀರ್ಮಾನವಾಗಲಿದೆ.

click me!