ಮೆಟ್ರೋದಲ್ಲಿ ಯುವತಿಯ ಕಸರತ್ತು: ಹ್ಯಾಂಡ್ರೈಲ್ಸ್ ಹಿಡ್ದು ನೇತಾಡಿದ ಹುಡುಗಿ

Published : Jan 08, 2023, 02:29 PM ISTUpdated : Jan 08, 2023, 02:34 PM IST
ಮೆಟ್ರೋದಲ್ಲಿ ಯುವತಿಯ ಕಸರತ್ತು:  ಹ್ಯಾಂಡ್ರೈಲ್ಸ್ ಹಿಡ್ದು ನೇತಾಡಿದ ಹುಡುಗಿ

ಸಾರಾಂಶ

ಮೆಟ್ರೋ ಚಲಿಸುವಾಗ ಬ್ಯಾಲೆನ್ಸ್ ತಪ್ಪದಂತೆ ಹಿಡಿದುಕೊಳ್ಳಲು ಇರುವಂತಹ ಹ್ಯಾಂಡ್ರೈಲ್ಸ್ ಹಿಡಿದು ಯುವತಿಯೊಬ್ಬಳು ನೇತಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ದೆಹಲಿ:  ಮೆಟ್ರೋಗಳು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡುವವರ ತಾಣವಾಗುತ್ತಿದೆ. ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬ ಸ್ನಾನದ ಟವೆಲ್ ಸುತ್ತಿಕೊಂಡು ಮೆಟ್ರೋದಲ್ಲಿ ಓಡಾಡಿ ರೀಲ್ಸ್ ಮಾಡಿದ್ದ. ಈ ರೀಲ್ಸ್ ಸಾಕಷ್ಟು ವೈರಲ್ ಆಗಿತ್ತು. ಇದಾದ ಬಳಿಕ ಈಗ ಯುವತಿಯೊಬ್ಬಳು ಮೆಟ್ರೋ ರೈಲಿನಲ್ಲಿ ಕಸರತ್ತು ಮಾಡಿದ್ದು, ಇದರ ವಿಡಿಯೋ ಈಗ ಸಾಕಷ್ಟು ವೈರಲ್ ಆಗುತ್ತಿದೆ.   ಮೆಟ್ರೋದಲ್ಲಿ ನಿಂತು ಪ್ರಯಾಣಿಸುವವರು ಮೆಟ್ರೋ ಚಲಿಸುವಾಗ ಬ್ಯಾಲೆನ್ಸ್ ತಪ್ಪದಂತೆ ಹಿಡಿದುಕೊಳ್ಳಲು ಇರುವಂತಹ ಹ್ಯಾಂಡ್ರೈಲ್ಸ್ ಹಿಡಿದು ಯುವತಿಯೊಬ್ಬಳು ನೇತಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಇಷ್ಟೇ ಅಲ್ಲದೇ ಯುವತಿ ಕುಳಿತುಕೊಳ್ಳಲು ಇರುವ ಸೀಟಿನ ಮೇಲೆ ನಿಂತು ಡಾನ್ಸ್ ಮಾಡುತ್ತಿದ್ದು, ಈ ವಿಡಿಯೋ ನೋಡಿದ ಕೆಲವರು ಮೆಚ್ಉಗೆ ವ್ಯಕ್ತಪಡಿಸಿದರೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಚಲಿಸುತ್ತಿರುವ ಮೆಟ್ರೋ ರೈಲಿನಲ್ಲಿ ಹಸಿರು ಬಣ್ಣದ  ಟೀ ಶರ್ಟ್ ಹಾಗೂ ಬೂದಿ ಬಣ್ಣದ ಪ್ಯಾಂಟ್ ಧರಿಸಿರುವ ಯುವತಿ ಎರಡು ಹ್ಯಾಂಡ್ರೈಲ್ಸ್‌ಗಳನ್ನು ಹಿಡಿದು ಅದರಲ್ಲಿ ಜೋಕಾಲಿಯಂತೆ ನೇತಾಡುತ್ತಿದ್ದಾಳೆ.  ಜೊತೆಗೆ  ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗೆ ಮೀಸಲಾಗಿರುವ ಸೀಟಿನಲ್ಲಿ ಕುಳಿತು  ಹಾಗೂ ನಿಂತು ಕೂಡ ಈಕೆ ಡಾನ್ಸ್ ಮಾಡುತ್ತಿದ್ದು,  ಕೊನೆಯಲ್ಲಿ ಅಲ್ಲಿದ್ದ ಸಿಸಿಟಿವಿಗೆ ಪ್ಲೈಯಿಂಗ್ ಕಿಸ್ ನೀಡುತ್ತಾಳೆ. ಈ ವಿಡಿಯೋ ನೋಡಿದ  ಅನೇಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸೀಟುಗಳು ಇರುವುದು ದೈಹಿಕವಾಗಿ ವೈಕಲ್ಯ ಹೊಂದಿರುವವರಿಗೆ ಮಾನಸಿಕವಾಗಿ ವೈಕಲ್ಯತೆ ಅನುಭವಿಸುವವರಿಗೆ ಅಲ್ಲ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಮೆಟ್ರೋ ರೈಲಿನಲ್ಲಿ ಚೆಲ್ಲಿದ ಆಹಾರ ಕ್ಲೀನ್‌ ಮಾಡಿದ ಯುವಕ: ನೆಟ್ಟಿಗರಿಂದ ಮೆಚ್ಚುಗೆ

ಮೆಟ್ರೋ ನಿಮ್ಮ ಖಾಸಗಿ  ಆಸ್ತಿ ಅಲ್ಲ. ಸಾರ್ವಜನಿಕ ಆಸ್ತಿ ಈ ರೀತಿ ಮಾಡಬೇಡಿ. ನಿಮ್ಮನ್ನು ನೋಡಿ ಅನೇಕರು ಪ್ರೇರಣೆ ಪಡೆಯುತ್ತಾರೆ ಎಂದು ಮತ್ತೊಬ್ಬರು  ಕಾಮೆಂಟ್ ಮಾಡಿದ್ದಾರೆ.  ಡಿಸೆಂಬರ್ 25 ರಂದು ಇನ್ಸ್ಟಾಗ್ರಾಮ್ ಬಳಕೆದಾರ ಅಪರ್ಣಾ ದೇವ್ಯಾಲ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.  ಸಾರ್ವಜನಿಕ ಸಾರಿಗೆಯಾದ ಮೆಟ್ರೊ ಹಾಗೂ ಸಿಟಿಬಸ್‌ಗಳು ಇತ್ತೀಚೆಗೆ ಜನಸಾಮಾನ್ಯರ ಕೈಗೆಟುವಂತಹ ಅತ್ಯಂತ ಉಪಯುಕ್ತ ಸಾರಿಗೆಯಾಗಿದೆ. ಆದರೆ ಜನ ಅದನ್ನು ವಿಡಿಯೋ ಮಾಡುತ್ತಾ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನ ಇದನ್ನು ಟ್ರೆಂಡ್ ಎಂದು ಭಾವಿಸಿ ವಿಡಿಯೋ ಮಾಡಲು ಶುರು ಮಾಡಿದರೆ ಮೆಟ್ರೋ ಸ್ಥಿತಿ ಏನಾಗಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಕೋಲ್ಕತ್ತಾ ಮೆಟ್ರೋದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡ ವೃದ್ಧ ದಂಪತಿ

ಆಂಡ್ರಾಯ್ಡ್ ಫೋನ್‌ಗಳು ಬಂದಾಗಿನಿಂದ ಜನರು ತಮ್ಮ ಜೀವನದ (Life) ಸುಂದರ ಕ್ಷಣಗಳನ್ನು ಸೆರೆಹಿಡಿದು ಇಟ್ಟುಕೊಳ್ಳುತ್ತಿದ್ದಾರೆ.  ಹಿರಿಯರು (Elders) ಸಹ ಇತ್ತೀಚಿನ ಟ್ರೆಂಡ್‌ಗಳನ್ನು ಫಾಲೋ ಮಾಡೋಕೆ ಇಷ್ಟಪಡುತ್ತಾರೆ. ಯುವಜನತೆಯಂತೆ ಸೆಲ್ಫಿ ಕ್ಲಿಕ್ಕಿಸೋಕೆ ಪ್ರಯತ್ನಿಸ್ತಾರೆ. ಹೀಗೆ ವೃದ್ಧ ದಂಪತಿ (Couple)ಯೊಂದು ಮೆಟ್ರೋದಲ್ಲಿ ಸೆಲ್ಫಿ ಕ್ಲಿಕ್ಕಿಸಲು ಯತ್ನಿಸಿದ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.  ಕೋಲ್ಕತ್ತಾ ಮೂಲದ ಕಲ್ಪಕ್ ಎಂಬ ಛಾಯಾಗ್ರಾಹಕ ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ದಂಪತಿಯನ್ನು ಮೆಟ್ರೋ ರೈಲಿನ ಕಾರ್ನರ್ ಸೀಟ್‌ಗಳಲ್ಲಿ ಕೂರಿಸಿ, ವ್ಯಕ್ತಿ ತನ್ನ ಪತ್ನಿ (Wife)ಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಪತ್ನಿಯೂ ಕೂದಲನ್ನು (Hair) ಸರಿಪಡಿಸಿಕೊಳ್ಳುವ ಮೂಲಕ ಫೋಟೋಗೆ ಫೋಸ್ ಕೊಡಲು ಸಜ್ಜಾಗುತ್ತಾರೆ. ಹೀಗಿದ್ದೂ ಅವರಿಗೆ ಸರಿಯಾಗಿ ಸೆಲ್ಫಿ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. 

ಮೆಟ್ರೋ ಮಾದರಿಯಲ್ಲಿ ಬಿಎಂಟಿಸಿ ಬಸ್‌ ಪ್ರಯಾಣಕ್ಕೆ ಸ್ಮಾರ್ಟ್ ಟಿಕೆಟ್‌.!

ಕೆಲವು ವಿಫಲ ಪ್ರಯತ್ನಗಳ ನಂತರ, ವ್ಯಕ್ತಿ ತಮ್ಮ ಪತ್ನಿಗೆ ಉತ್ತಮ ಫೋಟೋ ಸಿಗುತ್ತದೆ ಎಂಬ ಭರವಸೆ ನೀಡುತ್ತಾರೆ. ಅಂತಿಮವಾಗಿ, ಮೆಟ್ರೋ ರೈಲಿನಿಂದ ಇಳಿಯುವ ಮೊದಲು ದಂಪತಿ ಸುಂದರವಾದ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಇನ್‌ಸ್ಟಾಗ್ರಾಂನಲ್ಲಿ ನವೆಂಬರ್ 21ರಂದು ಪೋಸ್ಟ್ ಮಾಡಲಾದ ಕ್ಲಿಪ್ 4.6 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಇನ್‌ಸ್ಟಾಗ್ರಾಂನಲ್ಲಿ  'ಒಳ್ಳೆಯ ಚಿತ್ರಕ್ಕಾಗಿ ನಿರೀಕ್ಷಿಸಿ. ಸರಿಯಾದ ವ್ಯಕ್ತಿಯೊಂದಿಗೆ ಜೀವನವು ಸ್ವಲ್ಪ ಉತ್ತಮಗೊಳ್ಳುತ್ತದೆ, ಅಲ್ಲವೇ?' ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!