
ನವದೆಹಲಿ: ಕಡಿಮೆ ಸಮಯದಲ್ಲಿ ಸ್ಥಳ ತಲುಪಬಹುದು ಎಂಬ ಕಾರಣಕ್ಕೆ ಬಹುತೇಕ ಎಲ್ಲರೂ ಮೆಟ್ರೋ ಬಳಕೆ ಮಾಡುತ್ತಿರುತ್ತಾರೆ.ಸಾಮಾನ್ಯವಾಗಿ ಪೀಕ್ ಅವರ್‌ನಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ಅಧಿಕವಾಗಿರುತ್ತದೆ.ಈ ಸಮಯದಲ್ಲಿ ತಳ್ಳಾಟ, ನೂಕಾಟ ಸೇರಿದಂತೆ ಆಸನಕ್ಕಾಗಿ ಜಗಳ ನಡೆಯುತ್ತಿರುತ್ತದೆ. ದೂರ ಪ್ರಯಾಣ ಮಾಡುವ ಪ್ರಯಾಣಿಕರು ಆಸನಕ್ಕಾಗಿ ಫೈಟ್ ಮಾಡುತ್ತಾರೆ. ಈ ಸಂದರ್ಭದಲ್ಲಿ ಸಹ ಪ್ರಯಾಣಿಕರೊಂದಿಗೆ ಜಗಳಗಳು ನಡೆಯುತ್ತವೆ ಮತ್ತು ಇಂತಹ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ದೆಹಲಿ ಮೆಟ್ರೋ ಇಂತಹ ಘಟನೆಗಳಿಗೆ ಸಾಕ್ಷಿಯಾಗಿರುತ್ತಿರುತ್ತದೆ.
ದೆಹಲಿ ಮೆಟ್ರೋ ಒಂದು ರೀತಿ ಮನರಂಜನೆ ಕೇಂದ್ರವಾಗಿದ್ದು, ಇಲ್ಲಿ ನಿಮಗೆ ಎಲ್ಲಾ ರೀತಿಯ ಜನರು ಕಾಣಸಿಗುತ್ತಾರೆ. ಆಸನಕ್ಕಾಗಿ ಜಗಳ, ಯುವ ಜೋಡಿಗಳ ರೊಮ್ಯಾನ್ಸ್, ತಮ್ಮಷಕ್ಕೆ ತಾವು ಮಧುರವಾಗಿ ಹಾಡು ಹೇಳುವ ಕಲಾವಿದರು, ಜನಸಂದಣಿಯಲ್ಲಿ ಜೋಡಿಗಳ ಕಣ್ ಕಣ್ಣಸಲುಗೆ, ಡ್ಯಾನ್ಸ್ ಮಾಡೋರು ಸಹ ನಿಮಗೆ ಮೆಟ್ರೋದಲ್ಲಿ ಸಿಗುತ್ತಾರೆ. ಇದೀಗ ಮಧ್ಯವಯಸ್ಕ ಪುರುಷನೊಂದಿಗೆ ಯುವತಿಯೋರ್ವಳು ಗಲಾಟೆ ಮಾಡಿಕೊಂಡಿದ್ದಾಳೆ. ಯುವತಿಯ ಕೂಗಾಟ ಮತ್ತು ಚೀರಾಟ ಕೇಳಿ ಒಂದು ಕ್ಷಣ ಇನ್ನುಳಿದ ಪ್ರಯಾಣಿಕರು ಬೆಕ್ಕಸ ಬೆರಗಾಗಿ ನೋಡಿದ್ದಾರೆ.
ಅಂಕಲ್ ಮತ್ತು ಯುವತಿ ನಡುವೆ ಜಗಳ
ವ್ಯಕ್ತಿ ಮತ್ತು ಯುವತಿ ನಡುವೆ ಯಾವುದೋ ಒಂದು ಕಾರಣಕ್ಕೆ ಜಗಳ ನಡೆದಿದೆ. ಮಾಸ್ಕ್ ಮತ್ತು ಕನ್ನಡಕ ಧರಿಸಿದ ಯುವತಿ ಬಾಗಿಲ ಬಳಿ ನಿಂತ್ಕೊಂಡಿದ್ದಾಳೆ.ಅಲ್ಲಿಂದಲೇ ವ್ಯಕ್ತಿಯ ವಿರುದ್ಧ ಮಾತಿನ ಬಾಣಗಳನ್ನು ಬಿಡುತ್ತಿದ್ದಾಳೆ. ಯುವತಿ ಪಕ್ಕದಲ್ಲಿದ್ದ ಮಹಿಳೆ, ಆಕೆಯನ್ನು ಸಮಾಧಾನ ಮಾಡಲು ಪ್ರಯತ್ನಿಸುತ್ತಿರುತ್ತಾಳೆ. ಆದ್ರೂ ಯುವತಿಯ ಕೋಪ ಮಾತ್ರ ಯಾವುದೇ ಕಾರಣಕ್ಕೂ ಕಡಿಮೆಯಾಗಿಲ್ಲ. ಈ ಎಲ್ಲಾ ದೃಶ್ಯಗಳನ್ನು ಸಹ ಪ್ರಯಾಣಿಕರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ಘರ್ ಕಾ ಕಲೇಶ್ (@gharkekalesh) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು,ವೈರಲ್ ಆಗುತ್ತಿದೆ.
ಇದನ್ನೂ ಓದಿ: ಅಪ್ಪ-ಅಮ್ಮನ ಮದ್ವೆಗೆ ಕರೆದಿಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತ ಮಗಳು: ತಪ್ಪು ಮಾಡಿಬಿಟ್ರಿ ಅಂತಿರೋ ನೆಟ್ಟಿಗರು
ವೈರಲ್ ವಿಡಿಯೋದಲ್ಲಿ ಏನಿದೆ?
ಮೆಟ್ರೋ ರೈಲಿನ ಬಾಗಿಲ ಬಳಿ ನಿಂತಿರುವ ಯುವತಿ, ಆ ವ್ಯಕ್ತಿಯನ್ನು ನಾಯಿ, ಚರಂಡಿಯಲ್ಲಿರುವ ಹೊಲಸು ಹುಳು ಎಂದು ಬೈಯ್ಯುತ್ತಾಳೆ. ಮೆಟ್ರೋದಲ್ಲಿ ನಿಮ್ಮಂತಹ ನಾಯಿಗಳು ಪ್ರಯಾಣಿಸುತ್ತಿವೆ. ನೀನೊಬ್ಬ ಮುದುಕ. ಸುಮ್ಮನಿರದಿದ್ರೆ ನಿನ್ನ ಕಪಾಳಕ್ಕ ಹೊಡೆಯುವೆ. ಯಾವುದೇ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದಾಗ ಇದನ್ನು ನೆನಪಿಸಿಕೊಳ್ಳಿ ಎಂದು ಯುವತಿ ಆ ವ್ಯಕ್ತಿಯ ಮೇಲೆ ಗಂಭೀರ ಆರೋಪವನ್ನು ಮಾಡುತ್ತಾಳೆ. ಇದಕ್ಕೆ ಪ್ರತಿಕ್ರಿಯಿಸಿದ ವ್ಯಕ್ತಿ, ಇದುವೇ ನಿಮ್ಮ ಸಂಸ್ಕಾರ ಎಂದು ಕಿಡಿಕಾರುತ್ತಾನೆ. ಇದಕ್ಕೆ ಇಂತಹ ಸಂಸ್ಕಾರ ಹೊಂದಿದವರಿಗೆ ಇದೇ ರೀತಿಯಾಗಿ ಮಾತನಾಡೋದು. ಮೊದಲು ಬಾಯಿ ಮುಚ್ಚಿಕೊಳ್ಳಿ ಎಂದು ಯುವತಿ ಎಚ್ಚರಿಕೆ ನೀಡಿದ್ದಾಳೆ.
ಯುವತಿ ಅವಾಜ್‌ಗೆ ನೆಟ್ಟಿಗರು ಹೇಳಿದ್ದೇನು?
ಜನಸಂದಣಿ ಸಮಯದಲ್ಲಿ ತಳ್ಳಾಟ ಇದ್ದೇ ಇರುತ್ತದೆ. ಅದನ್ನೇ ಇಷ್ಟು ದೊಡ್ಡ ವಿಷಯ ಮಾಡೋದು ಬೇಕಿರಲಿಲ್ಲ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಒಂದಿಷ್ಟು ಮಂದಿ ಯುವತಿಯನ್ನು ಛಪ್ರಿ ಗರ್ಲ್ ಎಂದು ಟೀಕಿಸಿದ್ದಾರೆ. ದೆಹಲಿ ಮೆಟ್ರೋದಲ್ಲಿ ಇಂತಹ ಜಗಳು ಸಾಮಾನ್ಯ. ಇಂತಹ ಘಟನೆಗಳಿಗೆ ಪ್ರಾಮುಖ್ಯತೆ ನೀಡಬೇಕಿಲ್ಲ. ಅವರ ನಿಲ್ದಾಣದ ಬಂದಾಗ ಅವರೇ ಇಳಿದು ಹೋಗ್ತಾರೆ. ಅಲ್ಲಿಯವರೆಗೂ ಇತರೆ ಪ್ರಯಾಣಿಕರಿಗೆ ಮನರಂಜನೆಯಾಗಿರುತ್ತದೆ ಎಂದಿದ್ದಾರೆ.
ಈ ವಿಡಿಯೋವನ್ನು ಏಪ್ರಿಲ್ 18ರಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಳ್ಳಲಾಗಿದೆ. ಇದುವರೆಗೂ 2.81 ಲಕ್ಷಕ್ಕೂ ಅಧಿಕ ವ್ಯೂವ್ ಬಂದಿದ್ದು, 200ಕ್ಕೂ ಅಧಿಕ ಕಮೆಂಟ್‌ಗಳು ಬಂದಿವೆ.
ಇದನ್ನೂ ಓದಿ: Woman Caught Red-Handed: ಚಡ್ಡಿ ಕದ್ದು, ಒಂದರ ಮೇಲೆ ಒಂದು ಹಾಕೊಂಡ್ಳು, ಕದ್ದಿದ್ದು ಹೇಗೆ ಗೊತ್ತಾಯ್ತು ಅನ್ನೋದೇ ಪ್ರಶ್ನೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ