
ಕುಡಿದ ಮತ್ತಿನಲ್ಲಿ ಮಹಿಳೆಯೊಬ್ಬಳು ಸಿಕ್ಕಸಿಕ್ಕ ವಾಹನಗಳನ್ನು ಅಡ್ಡಗಟ್ಟಿ ವಾಹನ ಸವಾರರಿಗೆ ಕಿರುಕುಳ ನೀಡಿದ್ದಾಳೆ. ಉತ್ತರಾಖಂಡ್‌ನ ಹರಿದ್ವಾರದತ್ತ ತೆರಳುವ ಹೈವೇಯಲ್ಲಿ ಈ ಘಟನೆ ನಡೆದಿದೆ. ಘಟನೆ ವೀಡಿಯೋ ಅಲ್ಲಿದ್ದ ಜನರ ಮೊಬೈಲ್ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆದ ವೀಡಿಯೋದಲ್ಲಿ ಏನಿದೆ?
ಪಿಂಕ್ ಬಣ್ಣದ ಚೂಡಿಧಾರ್ ಧರಿಸಿರುವ ಮಹಿಳೆಯೊಬ್ಬಳು ಕಂಠಪೂರ್ತಿ ಕುಡಿದು ಮೈಲೇಲೆ ಪ್ರಜ್ಞೆ ಕಳೆದುಕೊಂಡು ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಾಡುತ್ತಿದ್ದಾಳೆ. ರಸ್ತೆಯಲ್ಲಿ ಬರುವ ಹಲವು ಕಾರುಗಳನ್ನು ಆಕೆ ಅಡ್ಡಗಟ್ಟಿ ಬೋನೇಟ್ ಮೇಲೆ ಬಿದ್ದುಕೊಂಡಿದ್ದಾಳೆ. ಒಂದಾದ ಮೇಲೊಂದರಂತೆ ಹಲವು ಕಾರುಗಳಿಗೆ ಈಕೆ ಹೀಗೆ ಮಾಡಿ ವಾಹನ ಸವಾರರನ್ನು ಸತಾಯಿಸಿದ್ದಾಳೆ. ಕಾರು ಚಾಲಕರು ಬಹಳ ತಾಳ್ಮೆಯಿಂದ ವರ್ತಿಸಿದ್ದು, ಇವಳು ಪಕ್ಕಕ್ಕೆ ಸರಿದ ನಂತರೇ ಮುಂದೆ ಸಾಗಿದ್ದಾರೆ. ಟ್ರಾಫಿಕ್ ಪೊಲೀಸರಂತೆ ಈಕೆ ಹಲವು ವಾಹನಗಳನ್ನು ಹೀಗೆ ಅಡ್ಡಹಾಕಿ ನಿಲ್ಲಿಸಿದ್ದಾಳೆ. ಅಲ್ಲದೇ ಒಂದು ದೃಶ್ಯಾವಳಿಯಲ್ಲಿ ಆಕೆ ಆಟೋ ಚಾಲಕ ಕೂತಿರುವ ಕ್ಯಾಬಿನ್‌ಗೂ ಏರುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು. ನಂತರ ಆಟೋದಿಂದ ಇಳಿದು ರಸ್ತೆಯಲ್ಲಿ ಉದ್ದಕ್ಕೆ ನಡೆದುಕೊಂಡು ಹೋಗುತ್ತಿರುವುದನ್ನು ಕೂಡ ಕಾಣಬಹುದು. ಕೊನೆಗೂ ಆಕೆ ಟ್ರಾಫಿಕ್ ಪೊಲೀಸೊಬ್ಬರ ಸ್ಕೂಟಿಯನ್ನು ಅಡ್ಡಹಾಕಿದ್ದು, ಹಿಂಬದಿ ಕುಳಿತುಕೊಂಡು ಹೋಗಿದ್ದಾಳೆ. ಟ್ರಾಫಿಕ್ ಪೊಲೀಸ್ ಆಕೆಯನ್ನು ಸೀದಾ ಸಮೀಪದ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ನಿಲ್ಲಿಸಿದ್ದಾರೆ.
ಇದನ್ನೂ ಓದಿ: ಮಾಜಿ ಡಿಜಿ-ಐಜಿಪಿ ಹತ್ಯೆ: ಕೊಲೆ ಬಳಿಕ ಬಾರ್ ನಲ್ಲಿ ಕುಡಿತಾ ಕುಳಿತಿದ್ದ ಮಗಳು!
ನೆಟ್ಟಿಗರ ಕಾಮೆಂಟ್ ಹೇಗಿದೆ ನೋಡಿ?
ಆದರೆ ಈಗ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಈಕೆ ಕುಡಿದು ರಸ್ತೆಯಲ್ಲಿ ದಾಂಧಲೆ ನಡೆಸಿದ ವೀಡಿಯೋ ವೈರಲ್ ಆಗುತ್ತಿದ್ದು, ಅನೇಕರು ಹಲವರು ರೀತಿಯ ಕಾಮೆಂಟ್ ಮಾಡಿದ್ದಾರೆ. ಹರಿದ್ವಾರದ ರೋಡಿಬೆಲ್ವಾಲ ಚೌಕಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಇನ್ನು ವೀಡಿಯೋಗೆ ನೊಡುಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ನೀರು ಹಾಕದೇ ಕುಡಿದ್ರೆ ಹೀಗೆ ಆಗೋದು. ನೀವು ಬಾರ್‌ಗೆ ಹೋಗುವುದಿಲ್ಲ, ನಡುರಸ್ತೆಯ ಆಕರ್ಷಣೆ ಆಗುವಿರಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಒಂದು ವೇಳೆ ಹುಡುಗರು ಹೀಗೆ ಮಾಡ್ತಿದ್ರೆ ಆತನನ್ನು ಗುದ್ದಿ ಮುಂದೆ ಹೋಗುತ್ತಿದ್ದರು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಪ್ರಸ್ತುತ ಸರಿ ಸಮಾಜಕ್ಕೆ ಸ್ಪರ್ಧೆ ನೀಡುವಂತೆ ಕೆಲ ಮಹಿಳೆಯರು ಹುಡುಗರಿಗಿಂತ ನಾವು ಯಾವುದರಲ್ಲೂ ಕಡಿಮೆ ಇಲ್ಲ ಎಂದು ತೋರಿಸಿಕೊಡುತ್ತಿದ್ದಾರೆ ಎಂದು ಮತ್ತೊಬ್ಬರು ವ್ಯಂಗ್ಯ ಮಾಡಿದ್ದಾರೆ. ಒಟ್ಟಿನಲ್ಲಿ ಈ ಮಹಿಳೆಯ ವರ್ತನೆ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ...
ಇದನ್ನೂ ಓದಿ: ಬೆಂಗಳೂರು ಹೆಬ್ಬಾಳ ಜಂಕ್ಷನ್ ಟ್ರಾಫಿಕ್ ಜಾಮ್ ಕಾರಣ ಬಿಚ್ಚಿಟ್ಟ ಪೊಲೀಸ್ ಕಮಿಷನರ್!
ಮಹಿಳೆಯ ರಿವರ್ ರಾಫ್ಟಿಂಗ್ ವೀಡಿಯೋ ಕೂಡಲೇ ಡಿಲೀಟ್ ಮಾಡಿ: ಹೈಕೋರ್ಟ್ ಆದೇಶ
ದೆಹಲಿ: ಮಹಿಳೆಯೊಬ್ಬರು ರಿವರ್ ರಾಫ್ಟಿಂಗ್ ಮಾಡುತ್ತಿರುವ ವೀಡಿಯೊವನ್ನು ಅವರ ಒಪ್ಪಿಗೆ ಇಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಟ್ರೋಲಿಂಗ್ ಮಾಡುತ್ತಿದ್ದಾರೆ. ಈ ಮೂಲಕ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಲಯ ಕೂಡಲೇ ಈ ಮಹಿಳೆ ರಿವರ್ ರಾಫ್ಟಿಂಗ್ ಮಾಡುತ್ತಿರುವ ವೀಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡುವಂತೆ ಗೂಗಲ್, ಫೇಸ್‌ಬುಕ್ ಹಾಗೂ ಎಕ್ಸ್‌ಗಳಿಗೆ ಆದೇಶಿಸಿದೆ. ಋಷಿಕೇಶದಲ್ಲಿ ರಾಫ್ಟಿಂಗ್ ಬೋಧಕರಾಗಿ ಕೆಲಸ ಮಾಡುವ ವ್ಯಕ್ತಿ ಮತ್ತು ಅವರು ಕೆಲಸ ಮಾಡುವ ಟ್ರಾವೆಲ್ ಏಜೆನ್ಸಿ ಅಪ್‌ಲೋಡ್ ಮಾಡಿದ ವೀಡಿಯೊ ಕ್ಲಿಪ್‌ಗಳ ಪ್ರಸಾರವನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಗೂಗಲ್, ಫೇಸ್‌ಬುಕ್ ಮತ್ತು ಎಕ್ಸ್ ಸೇರಿದಂತೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗೆ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಸಚಿನ್ ದತ್ತ ನಿರ್ದೇಶನ ನೀಡಿದ್ದಾರೆ.
ಮಹಿಳೆಯ ಮನವಿಗೆ ಪ್ರತಿಕ್ರಿಯೆ ನೀಡುವಂತೆ ನ್ಯಾಯಾಲಯವು ಏಪ್ರಿಲ್ 16 ರಂದು ಕೇಂದ್ರ ಸರ್ಕಾರ, ಆನ್‌ಲೈನ್ ಪ್ಲಾಟ್‌ಪಾರ್ಮ್‌ಗಳು ಹಾಗೂ ರಿವರ್ ರಾಫ್ಟಿಂಗ್ ಬೋಧಕರು ಮತ್ತು ಟ್ರಾವೆಲ್ ಏಜೆನ್ಸಿಗೆ ನೋಟಿಸ್ ಜಾರಿ ಮಾಡಿತು. ಅಲ್ಲದೇ ಈ ವಿಚಾರಕ್ಕೆ ಸಂಬಂಧಿಸಿದಂತೆ, ಸಂಬಂಧಿತ ನಿಯಮಗಳು ಮತ್ತು ನಿಬಂಧನೆಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿದ ದೆಹಲಿ ಹೈಕೋರ್ಟ್ ವಿಚಾರಣೆಯನ್ನು ಜುಲೈ 22ಕ್ಕೆ ಮುಂದೂಡಿದೆ. ಮಹಿಳೆಯ ವೀಡಿಯೋವನ್ನು ಪ್ರಸಾರ ಮಾಡುತ್ತಿರುವ ಎರಡರಿಂದ ಐದು ಯುಆರ್‌ಎಲ್ ಲಿಂಕ್‌ಗಳನ್ನು ಇಂಟರ್‌ನೆಟ್‌ನಿಂದ ತೆಗೆಯುವಂತೆ ಕೋರ್ಟ್ ನಿರ್ದೇಶಿಸಿದೆ. ಜೊತೆಗೆ ವೀಡಿಯೊ ಕ್ಲಿಪ್ ಪ್ರಕಟಣೆಯನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆಯೂ ಅವರಿಗೆ ಕೋರ್ಟ್ ನಿರ್ದೇಶಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ