ವ್ಯವಹಾರದ ಬಗ್ಗೆ ಮಾತನಾಡುತ್ತಿದ್ದಾಗಲೇ ಉದ್ಯಮಿಗೆ ಹಠಾತ್ ಹೃದಯಾಘಾತ: ಸಿಪಿಆರ್ ಮಾಡಿ ಜೀವ ಉಳಿಸಿದ ಯುವಕ

Published : Dec 14, 2025, 05:02 PM IST
Businessman suffers sudden heart attack

ಸಾರಾಂಶ

ಇತ್ತೀಚೆಗೆ ಹಠಾತ್ ಹೃದಯ ಸ್ತಂಭನಕ್ಕೀಡಾಗಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗ್ತಿದೆ. ಕುಳಿತಲ್ಲೇ ನಿಂತಲ್ಲೇ ಡಾನ್ಸ್ ಮಾಡುತ್ತಲೇ, ನಿದ್ದೆಯಲ್ಲೇ ಅನೇಕರು ಕುಸಿದು ಬಿದ್ದು ಚಿರನಿದ್ರೆಗೆ ಜಾರಿದ್ದಾರೆ. ಅದೇ ರೀತಿಯ ಮತ್ತೊಂದು ಘಟನೆ ನಡೆದಿದೆ. ಆದರೆ ಜೊತೆಗಿದ್ದವರ ಸಮಯಪ್ರಜ್ಞೆಯಿಂದಾಗಿ ಅವರ ಜೀವ ಉಳಿದಿದೆ.

ಇತ್ತೀಚೆಗೆ ಹಠಾತ್ ಹೃದಯ ಸ್ತಂಭನಕ್ಕೀಡಾಗಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗ್ತಿದೆ. ಕುಳಿತಲ್ಲೇ ನಿಂತಲ್ಲೇ ಡಾನ್ಸ್ ಮಾಡುತ್ತಲೇ, ನಿದ್ದೆಯಲ್ಲೇ ಅನೇಕರು ಕುಸಿದು ಬಿದ್ದು ಚಿರನಿದ್ರೆಗೆ ಜಾರಿದ್ದಾರೆ. ಅದೇ ರೀತಿಯ ಮತ್ತೊಂದು ಘಟನೆ ಈಗ ನಡೆದಿದೆ. ಆದರೆ ಜೊತೆಗಿದ್ದವರ ಸಮಯಪ್ರಜ್ಞೆಯಿಂದಾಗಿ ಅವರ ಜೀವ ಉಳಿದಿದೆ. ಅಂದಹಾಗೆ ಈ ಘಟನೆ ನಡೆದಿರುವುದು ರಾಜಸ್ಥಾನದ ಕೋಟಾದಲ್ಲಿ. ಈ ಘಟನೆಯ ಸಂಪೂರ್ಣ ದೃಶ್ಯವೀಗ ಜ್ಯುವೆಲ್ಲರಿ ಶಾಪ್‌ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕೋಟಾದ ರಾಂಪುರ ಬಜಾರ್‌ನಲ್ಲಿರುವ ವರ್ಧಮಾನ್ ಜ್ಯುವೆಲ್ಲರ್ಸ್‌ನಲ್ಲಿ ಗುರುವಾರ ಡಿಸೆಂಬರ್ 11ರ ಮಧ್ಯಾಹ್ನ 1:58 ರ ಸುಮಾರಿಗೆ ಜೈಪುರದ ಉದ್ಯಮಿ ರಾಜ್‌ಕುಮಾರ್ ಸೋನಿ (60) ಅವರು ಆಭರಣಗಳನ್ನು ವೀಕ್ಷಿಸುತ್ತಿದ್ದಾಗ ಅವರಿಗೆ ಹಠಾತ್ ಹೃದಯಾಘಾತವಾಗಿದೆ. ಕೌಂಟರ್‌ನಲ್ಲಿ ವ್ಯವಹಾರದ ಬಗ್ಗೆ ಚರ್ಚಿಸುತ್ತಿದ್ದಾಗಲೇ ಅವರು ಇದ್ದಕ್ಕಿದ್ದಂತೆ ಉಸಿರುಗಟ್ಟಿ, ಮುಂದಕ್ಕೆ ಬಿದ್ದಿದ್ದಾರೆ. ಸಿಬ್ಬಂದಿ ನೋಡು ನೋಡುತ್ತಿದ್ದಂತೆ, ಪ್ರಜ್ಞಾಹೀನರಾಗಿ ಅವರು ನೆಲಕ್ಕೆ ಕುಸಿದಿದ್ದಾರೆ. ಕೂಡಲೇ ಗಾಬರಿಗೊಂಡ ಸಿಬ್ಬಂದಿ ಮತ್ತು ನೋಡುಗರು ಅವರ ಬಳಿ ಓಡಿ ಬಂದು ಅವರನ್ನು ನೆಲದ ಮೇಲೆ ಮಲಗಿಸಿದ್ದಾರೆ. ಅಲ್ಲದೇ ಆ ವರ್ಧಮಾನ್ ಜ್ಯುವೆಲ್ಲರ್ಸ್‌ನ ಮಾಲೀಕ ವಿಮಲ್ ಕುಮಾರ್ ಜೈನ್ ಅವರ ಮಗ ವರುಣ್ ಜೈನ್ (37) ಅವರು ಕೂಡಲೇ ಕಾರ್ಯಪ್ರವೃತ್ತರಾಗಿದ್ದು, ಅವರಿಗೆ ಸಿಪಿಆರ್ ಮಾಡಿದ್ದಾರೆ.

ಇದನ್ನೂ ಓದಿ: ಇವು ಕೆರೆಯಲ್ಲಿ ಅರಳಿ ನಿಂತ ತಾವರೆಗಳಲ್ಲ: ಸಂಭಾರ್ ಸರೋವರದಲ್ಲಿ ಗುಲಾಬಿ ಚಿತ್ತಾರ ಬಿಡಿಸಿದ ಸಾವಿರಾರು ಫ್ಲೇಮಿಂಗೋಗಳು

ವರುಣ್ ಜೈನ್ ಅವರಿಗೆ ಸಮುದಾಯ ಕಾರ್ಯಕ್ರಮದ ಅರಿವನ್ನು ಮೀರಿ ಯಾವುದೇ ಔಪಚಾರಿಕ ಸಿಪಿಆರ್ ತರಬೇತಿಯಿಲ್ಲದೇಹೋದರು ಅವರು ಕೂಡಲೇವ್ಯಾಪಾರಿ ರಾಜ್‌ಕುಮಾರ್ ಅವರನ್ನು ನೆಲದ ಮೇಲೆ ಮಲಗಿಸಿ, ನಿರಂತರ 2.5 ನಿಮಿಷಗಳ ಕಾಲ ಸಿಪಿಆರ್ ಮಾಡುವ ಜೊತೆಗೆ ತುರ್ತು ಇಂಜೆಕ್ಷನ್ ನೀಡಿದರು. ಅವರ ನಿರಂತರ ಪ್ರಯತ್ನ ಫಲ ನೀಡಿದ್ದು, ರಾಜ್‌ಕುಮಾರ್ ಅವರಿಗೆ ಪ್ರಜ್ಞೆ ಮರಳಿದೆ. ಸುತ್ತಮುತ್ತಲು ಇದ್ದ ಅಂಗಡಿಯ ಸಿಬ್ಬಂದಿ ಉಸಿರುಕಟ್ಟಿದಂತೆ ಮೌನವಾಗಿ ನಿಂತಿದ್ದರೆ ಅವರ ಮಧ್ಯೆ ಚೇತರಿಸಿಕೊಂಡು ರಾಜ್‌ಕುಮಾರ್ ಅವರು ಮರು ಜೀವ ಪಡೆದರು. ಶುಕ್ರವಾರ ಈ ಘಟನೆಯ ಸಿಸಿಟಿವಿ ದೃಶ್ಯ ವೈರಲ್ ಆಗಿದ್ದು, ಯುವ ಉದ್ಯಮಿ ವರುಣ್ ಅವರ ಕಾರ್ಯಕ್ಕೆ ಈಗ ಭಾರಿ ಮೆಚ್ಚುಗೆ ವ್ಯಕ್ತವಾಗ್ತಿದೆ.

ಜೈಪುರದ ಜೋತ್ವಾರಾದಿಂದ ಆಭರಣ ವ್ಯವಹಾರಗಳಿಗಾಗಿ ತಿಂಗಳಿಗೊಮ್ಮೆ ಅಥವಾ ಎರಡು ಬಾರಿ ಕೋಟಾಗೆ ಭೇಟಿ ನೀಡುವ ಉದ್ಯಮಿ ರಾಜ್‌ಕುಮಾರ್ ಅವರು ಈ ಘಟನೆಯ ನಂತರ ಚೇತರಿಸಿಕೊಂಡಿದ್ದು, ಅಂದು ಏನಾಯ್ತು ಎಂಬುದನ್ನು ಮತ್ತೆ ಮೆಲುಕು ಹಾಕಿದ್ದಾರೆ. ನನಗೆ ಎದೆ ನೋವು ಅನಿಸಿತು, ನಂತರ ಏನೂ ಇಲ್ಲ ಎಲ್ಲವೂ ಶೂನ್ಯದಂತೆ ಭಾಸವಾಯ್ತು ಎಂದು ಅವರು ಹೇಳಿದರು.

ಇದನ್ನೂ ಓದಿ: ಮಗಳ ಸುರಕ್ಷತೆಗಾಗಿ ಅಮ್ಮನೇ ಅಪ್ಪನಾದ: ಗಂಡನ ಸಾವಿನ ನಂತರ ಗಂಡಿನಂತೆ ವೇಷ ಧರಿಸಿ ಬದುಕಿದ ತಾಯಿ

ಅಂಗಡಿ ಮಾಲೀಕ ವಿಮಲ್ ಜೈನ್ ಅವರು ತಮ್ಮ ನಿಯಮಿತ ಗ್ರಾಹಕರಾಗಿರುವ ರಾಜ್‌ಕುಮಾರ್ ಅವರು, ತಮ್ಮ ವ್ಯಾಪಾರ ಮಾತುಕತೆಯ ಸಮಯದಲ್ಲಿ ಯಾವುದೇ ಆರೋಗ್ಯ ತೊಂದರೆಯ ಲಕ್ಷಣಗಳನ್ನು ಈ ಹಿಂದೆಂದೂ ಹೇಳಿಕೊಂಡಿಲ್ಲ ಎಂದು ದೃಢಪಡಿಸಿದರು. ಆದರೆ ಅವರ ಅಂಗಡಿಯಲ್ಲಿನ ತ್ವರಿತ ವೈದ್ಯಕೀಯ ನೆರವು ಅವರನ್ನು ಆಸ್ಪತ್ರೆಗೆ ವರ್ಗಾಯಿಸುವ ಮೊದಲು ಸ್ಥಿರಗೊಳಿಸಿದ್ದು, ಸಂಭಾವ್ಯ ದುರಂತವನ್ನು ತಡೆದಿದೆ. ಹೃದಯಾಘಾತದ ನಂತರದ ಆ ಗೋಲ್ಡನ್ ಮಿನಿಟ್‌ ಬಗ್ಗೆ ಮಾತನಾಡಿದ ವರುಣ್‌, ಸಿಪಿಆರ್ ಪಾತ್ರವನ್ನು ಒತ್ತಿ ಹೇಳಿದ್ದು, ತಮಗೆ ಸಿಪಿಆರ್ ಬಗ್ಗೆ ಅರಿವು ನೀಡಿದ ಮೂಲಭೂತ ಸಮುದಾಯ ಕಾರ್ಯಾಗಾರಗಳನ್ನು ಶ್ಲಾಘಿಸಿದರು. ಅಂಗಡಿ ಮಾಲೀಕ ವಿಮಲ್ ಅವರು ಕೂಡ ತನ್ನ ಮಗನ ಬಗ್ಗೆ ಶ್ಲಾಘಿಸಿದರು.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇವು ಕೆರೆಯಲ್ಲಿ ಅರಳಿದ ತಾವರೆಗಳಲ್ಲ: ಸಂಭಾರ್ ಸರೋವರದಲ್ಲಿ ಗುಲಾಬಿ ಚಿತ್ತಾರ ಬಿಡಿಸಿದ ಸಾವಿರಾರು ಫ್ಲೇಮಿಂಗೋಗಳು
ಗೋವಾ ದುರಂತದಿಂದ ಎಚ್ಚೆತ್ತ ಪೊಲೀಸ್, ಹೊಸವರ್ಷಕ್ಕೆ ಕ್ಲಬ್, ಬಾರ್, ಪಬ್‌ಗಳಲ್ಲಿ ಪಟಾಕಿ ಆಚರಣೆ ಬ್ಯಾನ್