ಇವು ಕೆರೆಯಲ್ಲಿ ಅರಳಿದ ತಾವರೆಗಳಲ್ಲ: ಸಂಭಾರ್ ಸರೋವರದಲ್ಲಿ ಗುಲಾಬಿ ಚಿತ್ತಾರ ಬಿಡಿಸಿದ ಸಾವಿರಾರು ಫ್ಲೇಮಿಂಗೋಗಳು

Anusha Kb   | ANI
Published : Dec 14, 2025, 04:10 PM IST
Flamingos Paint Rajasthan's Sambhar Salt Lake Pink

ಸಾರಾಂಶ

ಕಾಲಕ್ಕೆ ತಕ್ಕಂತೆ ತನ್ನಲ್ಲಿ ಅಮೋಘ ಜೀವಕಳೆಯನ್ನು ತುಂಬುವ ಪ್ರಕೃತಿಯ ಸೌಂದರ್ಯ ವರ್ಣನಾತೀತ. ಹಾಗೆಯೇ ಪ್ರಕೃತಿಯ ಅಮೋಘ ಸೃಷ್ಟಿಗೆ ಉದಾಹರಣೆಯಾಗಿದೆ ಈಗ ರಾಜಸ್ಥಾನದ ಸಾಂಭಾರ್ ಸರೋವರ. ಹೌದು ಫ್ಲೇಮಿಂಗೋ ಹಕ್ಕಿಗಳ ವಲಸೆಯಿಂದಾಗಿ ಈ ಕೆರೆ ಗುಲಾಬಿ ಬಣ್ಣಕ್ಕೆ ತಿರುಗಿದೆ. 

ಪ್ರಾಕೃತಿಯ ಸೃಷ್ಟಿಯ ಮುಂದೆ ಮನುಷ್ಯನ ಸೃಷ್ಟಿಯೆಲ್ಲವೂ ಶೂನ್ಯ, ಪ್ರಕೃತಿ ಸೃಷ್ಟಿಸಿದಂತೆ ಮನುಷ್ಯನೆಂದು ಸೃಷ್ಟಿಸಲಾಗದು ಮನುಷ್ಯ ಏನೇ ಸೃಷ್ಟಿಸಿದರು ಅದು ಕೃತಕ ಅದಕ್ಕೆ ಜೀವಕಳೆ ತುಂಬುವುದು ಆತನಿಂದ ಸಾಧ್ಯವೇ ಇಲ್ಲ. ಆದರೆ ಪ್ರಕೃತಿ ಹಾಗಲ್ಲ, ಅದರ ಪ್ರತಿ ಸೃಷ್ಟಿಗೂ ಜೀವಕಳೆ ಇದೆ. ಪ್ರಕೃತಿಯ ಸೃಷ್ಟಿಸುವ ದೃಶ್ಯಕಾವ್ಯವನ್ನು ಪದಗಳಲ್ಲಿ ಬಣ್ಣಿಸಲಾಗದು. ಕಾಲಕ್ಕೆ ತಕ್ಕಂತೆ ತನ್ನಲ್ಲಿ ಅಮೋಘ ಜೀವಕಳೆಯನ್ನು ತುಂಬುವ ಪ್ರಕೃತಿಯ ಸೌಂದರ್ಯ ವರ್ಣನಾತೀತ. ಹಾಗೆಯೇ ಪ್ರಕೃತಿಯ ಅಮೋಘ ಸೃಷ್ಟಿಗೆ ಉದಾಹರಣೆಯಾಗಿದೆ ಈಗ ರಾಜಸ್ಥಾನದ ಸಾಂಭಾರ್ ಸರೋವರ. ಹೌದು ಫ್ಲೇಮಿಂಗೋ ಹಕ್ಕಿಗಳ ವಲಸೆಯಿಂದಾಗಿ ಈ ಕೆರೆ ಗುಲಾಬಿ ಬಣ್ಣದ ಜೀವಂತ ನಕ್ಷತ್ರಗಳು ಬಿದ್ದಂತೆ ಕಾಣುತ್ತಿದೆ. ಈ ಅಮೋಘ ದೃಶ್ಯದ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಚಳಿಗಾಲಕ್ಕಾಗಿ ಈ ಸಾಂಭಾರ್ ಸರೋವರಕ್ಕೆ ಸಾವಿರಾರು ಫ್ಲೇಮಿಂಗೋ ವಲಸೆ ಹಕ್ಕಿಗಳು ಹಿಂತಿರುಗಿರುವುದರಿಂದ ರಾಜಸ್ಥಾನದ ಸಾಂಭಾರ್ ಸರೋವರವು ಈಗ ಗುಲಾಬಿ ಬಣ್ಣದಿಂದ ಆವೃತವಾಗಿದೆ. ಈ ವರ್ಷ ನೀರಿನ ಮಟ್ಟ ಮತ್ತು ಆಹಾರದ ಪರಿಸ್ಥಿತಿ ಸರಿಯಾಗಿದ್ದು, ಸರೋವರಕ್ಕೆ ಫ್ಲೇಮಿಂಗೋಗಳ ದೊಡ್ಡ ದೊಡ್ಡ ಹಿಂಡುಗಳು ಇಲ್ಲಿಗೆ ಬರುತ್ತಿವೆ. ಇದು ಪ್ರವಾಸಿಗರಿಗೆ ನೋಡುವುದಕ್ಕೆ ಒಂದು ಅದ್ಭುತ ದೃಶ್ಯವಾಗಿ ಮಾರ್ಪಟ್ಟಿದೆ.

ಇದನ್ನೂ ಓದಿ: ಮಗಳ ಸುರಕ್ಷತೆಗಾಗಿ ಅಮ್ಮನೇ ಅಪ್ಪನಾದ: ಗಂಡನ ಸಾವಿನ ನಂತರ ಗಂಡಿನಂತೆ ವೇಷ ಧರಿಸಿ ಬದುಕಿದ ತಾಯಿ

ಫ್ಲೇಮಿಂಗೋ ಹಕ್ಕಿಗಳ ಈ ವಲಸೆಯೂ ರಾಜಸ್ಥಾನದ ಉಪ್ಪು ನೀರಿನ ಸರೋವರ ಆಗಿರುವ ಈ ಸಾಂಭಾರ್ ಸರೋವರವನ್ನು ಗುಲಾಬಿ ಬಣ್ಣದ ಸಮುದ್ರವಾಗಿಸಿದೆ. ಈ ಅಪರೂಪದ ದೃಶ್ಯಗಳು ಈಗ ಪಕ್ಷಿ ಪ್ರಿಯರು ಹಾಗೂ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಕೇಂದ್ರ ಏಷ್ಯಾದ ಈ ವಾರ್ಷಿಕ ವಲಸೆಯಿಂದಾಗಿ ಸಾಂಭಾರ್ ಸರೋವರಕ್ಕೆ ಸಾವಿರಾರು ಹಕ್ಕಿಗಳು ಆಗಮಿಸಿದ್ದು, ಈ ಸರೋವರಕ್ಕೆ ಜೀವಕಳೆ ತುಂಬಿದೆ. ಈ ಬಾರಿ ನೀರು ಹಾಗೂ ಆಹಾರ ಸ್ಥಿತಿ ಎರಡೂ ಚೆನ್ನಾಗಿಯೇ ಇರುವುದು ಭಾರಿ ಪ್ರಮಾಣದ ಪ್ಲೇಮಿಂಗೋ ಹಕ್ಕಿಗಳ ವಲಸೆಗೆ ಕಾರಣವಾಗಿದೆ. ರಾಜಸ್ಥಾನದ ಈ ಸಾಂಭಾರ್ ಸರೋವರವೂ ಬಹಳ ದೂರದಿಂದ ಭಾರತದ ವಲಸೆ ಬರುವ ದೊಡ್ಡ ಹಾಗೂ ಸಣ್ಣ ಫ್ಲೇಮಿಂಗೋಗಳಿಗೆ ಇದು ಪ್ರಮುಖ ನಿಲ್ದಾಣವೆನಿಸಿದೆ. ಹಾಗೂ ಚಳಿಗಾಲದ ಇಷ್ಟದ ಸ್ಥಳವೆನಿಸಿದೆ.

ಸರಿಸುಮಾರು 240 ಚದರ ಕಿಲೋಮೀಟರ್ ವಿಸ್ತೀರ್ಣದಲ್ಲಿರುವ ಈ ಸಂಭಾರ್ ಸರೋವರವು ರಷ್ಯಾ, ಸೈಬೀರಿಯಾ ಮತ್ತು ಮಂಗೋಲಿಯಾದಂತಹ ದೇಶಗಳಿಂದ ವಿಲಕ್ಷಣ ಪಕ್ಷಿಗಳನ್ನು ಆಕರ್ಷಿಸುತ್ತದೆ. ಪಕ್ಷಿ ತಜ್ಞ ಗೌರವ್ ದಧೀಚ್ ಅವರು ಸುದ್ದಿ ಸಂಸ್ತೆ ಎಎನ್‌ಐಗೆ ನೀಡಿದ ಮಾಹಿತಿಯ ಪ್ರಕಾರ, ಸಾಂಭಾರ್ ಸರೋವರಕ್ಕೆ ವಾರ್ಷಿಕ ವಲಸೆ ಸಾಮಾನ್ಯವಾಗಿ ಅಕ್ಟೋಬರ್‌ನಲ್ಲಿ ಪ್ರಾರಂಭವಾಗುತ್ತದೆ ಮತ್ತು ಮಾರ್ಚ್ ವರೆಗೆ ಇರುತ್ತದೆ. ಸಾಮಾನ್ಯವಾಗಿ ಅಕ್ಟೋಬರ್‌ನಲ್ಲಿ ಗರಿಷ್ಠ ಆಗಮನ ಕಂಡು ಬರುತ್ತದೆ. ಈ ಸಮಯದಲ್ಲಿ ಸರೋವರದಲ್ಲಿ ಸಣ್ಣ ಫ್ಲೆಮಿಂಗೊಗಳು ಮತ್ತು ದೊಡ್ಡ ಫ್ಲೆಮಿಂಗೊಗಳ ದೊಡ್ಡ ಹಿಂಡುಗಳನ್ನು, ಹಲವಾರು ಜಾತಿಯ ಬಾತುಕೋಳಿಗಳು ಮತ್ತು ಇತರ ವಲಸೆ ಪಕ್ಷಿಗಳನ್ನು ಕಾಣಬಹುದಾಗಿದೆ.

ಇದನ್ನೂ ಓದಿ:  ಟ್ರಂಪ್ ನಿರ್ಧಾರಕ್ಕೆ 20 ರಾಜ್ಯಗಳ ಸೆಡ್ಡು: ಅಮೆರಿಕದಲ್ಲೇ ಶುರುವಾಯ್ತು ಸಮರ!

12 ವರ್ಷಗಳಿಗೂ ಹೆಚ್ಚು ಕಾಲ ಈ ಪ್ರದೇಶವನ್ನು ಅಧ್ಯಯನ ಮಾಡಿರುವ ಪಕ್ಷಿ ತಜ್ಞ ದಧೀಚ್ ಅವರು ಈ ಸಂಭಾರ್‌ ಸರೋವರದಲ್ಲಿ 300 ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳನ್ನು ದಾಖಲಿಸಿರುವುದಾಗಿ ಹೇಳಿದ್ದಾರೆ. ಈ ವರ್ಷ ಹೆಚ್ಚಿನ ಮಳೆಯಾಗಿರುವುದು ಪಕ್ಷಿಗಳಿಗೆ ಸೂಕ್ತ ಪರಿಸ್ಥಿತಿಗಳನ್ನು ಸೃಷ್ಟಿಸಿದೆ, ಇದು ಪಕ್ಷಿಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಗೆ ಕಾರಣವಾಗಿದೆ ಎಂದು ಅವರು ಹೇಳಿದರು. ಪ್ರಸ್ತುತ, ಸರೋವರ ಪ್ರದೇಶದಲ್ಲಿ ಸುಮಾರು 2 ರಿಂದ 2.5 ಲಕ್ಷ ಫ್ಲೆಮಿಂಗೊಗಳನ್ನು ಕಾಣಬಹುದು ಎಂದು ಅವರು ಹೇಳಿದ್ದಾರೆ.

ಇಲ್ಲಿನ ಫ್ಲೇಮಿಂಗೋ ಹಕ್ಕಿಗಳ ವಲಸೆಯಿಂದಾಗಿ ಇಲ್ಲಿ ಅದ್ಭುತ ದೃಶ್ಯ ಕಾವ್ಯ ನಿರ್ಮಾಣವಾಗಿದ್ದು, ಪ್ರವಾಸಿಗರು, ಪಕ್ಷಿ ವೀಕ್ಷಕರು, ಛಾಯಾಗ್ರಾಹಕರು ಮತ್ತು ಪ್ರಕೃತಿ ಪ್ರಿಯರಿಗೆ ಪ್ರಮುಖ ಆಕರ್ಷಣೆಯಾಗಿವೆ. ಇದು ಉಸಿರುಕಟ್ಟುವಂತಹ ವಿಹಂಗಮ ನೋಟವನ್ನು ನೀಡುತ್ತದೆ. ಫ್ಲೆಮಿಂಗೊಗಳ ಉಪಸ್ಥಿತಿ ಈ ದೃಶ್ಯಗಳಿಗೆ ಮತ್ತಷ್ಟು ಜೀವಕಳೆ ನೀಡಿದೆ ಎಂದು ಅವರು ಹೇಳಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Viral Video: ವೇದಿಕೆಯಲ್ಲೇ ಮಹಿಳಾ ವೈದ್ಯೆಯ ಹಿಜಾಬ್‌ ತೆಗೆಯಲು ಯತ್ನಿಸಿದ ಬಿಹಾರ ಸಿಎಂ ನಿತೀಶ್‌ ಕುಮಾರ್‌
ಪ್ರಧಾನಿಗೆ ಜೋರ್ಡಾನ್‌ನಲ್ಲಿ ಭವ್ಯ ಸ್ವಾಗತ: ಐಎಂಇಸಿ ಕಾರಿಡಾರ್ ಕುರಿತು ಚರ್ಚೆ ನಿರೀಕ್ಷೆ