ಇಂಡಿಗೋ ವಿಮಾನ ಪ್ರಯಾಣದಲ್ಲಿ ಯುವತಿ ತನ್ನ ಪ್ರೀತಿಯ ಗೆಳೆಯನಿಗೆ ಪ್ರಪೋಸ್ ಮಾಡಿದ್ದಾಳೆ. ಮಂಡಿಯೂರಿ ಪ್ರೇಮ ನಿವೇದನೆ ಮಾಡಿದ ಯುವತಿಗೆ ಗೆಳೆಯ ಹೇಳಿದ್ದೇನು? ಹಲವು ಅಚ್ಚರಿಗಳ ವಿಡಿಯೋ ಇಲ್ಲಿದೆ.
ಲವ್ ಪ್ರಪೋಸಲ್ ಯಾವತ್ತೂ ಸ್ಪೆಷಲ್. ಇದಕ್ಕಾಗಿ ಹಲವರು ಭಿನ್ನ, ವಿಶೇಷವಾಗಿ, ತಮ್ಮ ನಿವೇದನೆ ಶೈಲಿಯಲ್ಲೇ ಮೋಡಿ ಮಾಡಿ ಬಿಡುತ್ತಾರೆ. ಅಲ್ಲೀವರೆಗೆ ಪ್ರೀತಿ ಅನ್ನೋ ಪದ ತಲೆಯಲ್ಲಿ ಹೊಳೆಯದಿದ್ದರೂ ಪ್ರಪೋಸ್ ಮಾಡಿದ ರೀತಿಯಲ್ಲಿ ಪ್ರೀತಿ ಹುಟ್ಟುವಂತೆ ಮಾಡುತ್ತಾರೆ. ಹೀಗೆ ಇಲ್ಲೊಬ್ಬ ಯುವತಿ ತನ್ನ ಗೆಳಯನಿಗೆ ಆಗಸದಲ್ಲಿ ಪ್ರಪೋಸ್ ಮಾಡಿದ್ದಾಳೆ. ಇಂಡಿಗೋ ವಿಮಾನ ಪ್ರಯಾಣದ ನಡುವೆ ವಿಮಾನದ ಕ್ಯಾಪ್ಟನ್ ಸಣ್ಣ ಅನೌನ್ಸ್‌ಮೆಂಟ್ ಇದೇ ಎಂದು ಅಚ್ಚರಿ ನೀಡಿದ್ದಾರೆ. ಬಳಿಕ ಯುವತಿ ನೇರವಾಗಿ ಗೆಳೆಯನ ಬಳಿ ತೆರಳಿ ಮಂಡಿಯೂರಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾಳೆ. ಈ ಪ್ರಪೋಸಲ್‌ಗೆ ಯುವತಿ ಮಾತ್ರವಲ್ಲ, ಇಂಡಿಗೋ ವಿಮಾನ ಸಂಸ್ಥೆ ಕೂಡ ಸಾಕಷ್ಟು ತಯಾರಿ ಮಾಡಿಕೊಂಡಿತ್ತು. ಹರಸಾಹಸದ ಪ್ರೇಮ ನಿವೇದನೆಯಿಂದ ಗೆಳೆಯ ಫುಲ್ ಖುಷ್ ಆಗಿ, ಅದೇ ಕ್ಷಣದಲ್ಲೇ ಯೆಸ್ ಎಂದಿದ್ದಾನೆ. ಈ ಪ್ರಣಯ ಹಕ್ಕಿಗಳ ವಿಡಿಯೋ ಇದೀಗ ಸದ್ದು ಮಾಡುತ್ತಿದೆ.
ಗೆಳತಿ ಎಲ್ಲಾ ತಯಾರಿ ಮಾಡಿಕೊಂಡು ಇಂಡಿಗೋ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿದ್ದಾಳೆ. ಪ್ರೀತಿಯ ಗೆಳೆಯನ ಜೊತೆ ಪ್ರವಾಸ ಹೊರಟಿದ್ದಾಳೆ. ಗೆಳೆಯನಿಗೆ ಪ್ರವಾಸದ ಮಾಹಿತಿ ಮಾತ್ರ ನೀಡಿದ್ದಾಳೆ. ಆದರೆ ಟಿಕೆಟ್ ಬುಕಿಂಗ್ ವೇಳೆ, ಯುವತಿ ಇಂಡಿಗೋ ವಿಮಾನ ಸಂಸ್ಥೆಗೆ ವಿಶೇಷ ಮನವಿ ಮಾಡಿದ್ದಾಳೆ. ಇಂಡಿಗೋ ಪ್ರಯಾಣದಲ್ಲಿ ಗೆಳೆಯನಿಗೆ ಪ್ರೇಮ ನಿವೇದನೆ ಕುರಿತು ಮಾಹಿತಿ ನೀಡಿದ್ದಾಳೆ.
ಟ್ರಿಪ್ ರೋಡ್ ಮ್ಯಾಪ್ ಮೂಲಕವೇ ಗೆಳತಿಗೆ ವಿಲ್ ಯು ಮ್ಯಾರಿ ಮೀ ಪ್ರಪೋಸ್: ಮುಂದೇನಾಯ್ತು?
ವಿಡಿಯೋದಲ್ಲಿ ಯುವತಿ ಹಾಗೂ ಆಕೆಯ ಗೆಳೆಯ ಜೊತೆಯಾಗಿ ವಿಮಾನ ಹತ್ತುವ ದೃಶ್ಯವಿದೆ. ಬಳಿಕ ಆಗಸದಲ್ಲಿ ವಿಮಾನ ಪ್ರಯಾಣ ಮುಂದುವರಿಸುತ್ತಿದ್ದಂತೆ, ವಿಮಾನದ ಕ್ಯಾಪ್ಟನ್ ಅನೌನ್ಸ್‌ಮೆಂಟ್ ಮಾಡಿದ್ದಾರೆ. ಗೆಳೆಯನ ಬಳಿ ಬಂದ ಯುವತಿ ಮಂಡಿಯೂರಿ ಪ್ರಪೋಸ್ ಮಾಡಿದ್ದಾಳೆ. ಕೈಯಲ್ಲಿ ರಿಂಗ್ ಹಿಡಿದು ಆಗಮಿಸಿದ ಯುವತಿ ನೋಡಿ ಗೆಳೆಯನಿಗೆ ಅಚ್ಚರಿ. ಇಷ್ಟೇ ಅಲ್ಲ ವಿಮಾನ ಪ್ರಯಾಣದಲ್ಲಿದ್ದ ಇತರರ ಪ್ರಯಾಣಿಕರು ವಿಲ್ ಯು ಮ್ಯಾರಿ ಮೇ ಪ್ಲಕಾರ್ಡ್, ಪ್ರೀತಿಯ ಪ್ಲಕಾರ್ಡ್ ಹಿಡಿದಿದ್ದಾರೆ.
ಗೆಳತಿ ಮಂಡಿಯೂರಿ ಪ್ರಪೋಸ್ ಮಾಡುತ್ತಿದ್ದಂತೆ ಗೆಳೆಯ ಒಕೆ ಎಂದಿದ್ದಾನೆ. ಬಳಿಕ ರಿಂಗ್ ತೊಡಿಸಿದ ಗೆಳತಿಗೆ ಸಿಹಿ ಮುತ್ತು ನೀಡಿದ್ದಾಳೆ. ಐಶ್ವರ್ಯ ಬನ್ಸಾಲ್ ಈ ವಿಡಿಯೋ ಹಂಚಿಕೊಂಡಿದ್ದಾಳೆ. ಗೆಳಯನಿಗೆ ತನ್ನ ಪ್ರೀತಿ ಹೇಳಬೇಕು. ಆದರೆ ಸಿಂಪಲ್ ಆಗಿ ಹೇಳಿದರೆ ಕ್ಷಟನೆ ಸ್ಮರಣೀಯವಾಗುವುದಿಲ್ಲ. ಆತನಿಗೂ ನನ್ನ ಮೇಲೆ ಪ್ರೀತಿ ಇದೆ. ಹೀಗಾಗಿ ನನಗೆ ಯೆಸ್ ಅನ್ನೋ ಉತ್ತರ ಬರುವ ನಿರೀಕ್ಷೆ ಇದೆ. ವಿಮಾನದಲ್ಲಿ ಪ್ರಪೋಸ್ ಮಾಡಲು ಮುಂದಾದಾಗ, ಸಿಬ್ಬಂದಿಗಳು ಇದಕ್ಕೆಲ್ಲಾ ಅವಕಾಶ ನೀಡುತ್ತಾರೋ ಅನ್ನೋ ಅನುಮಾನ ಎದುರಾಗಿತ್ತು. ಆದರೆ ಸಿಬ್ಬಂದಿಗಳು ನನಗೆ ನೆರವು ನೀಡಿದರು. ಇದೀಗ ಪ್ರೀತಿ ಜೊತೆಯಾಗಿ ಹೆಜ್ಜೆ ಹಾಕುತ್ತಿದೆ ಎಂದು ಐಶ್ವರ್ಯ ಬನ್ಸಾಲ್ ಹೇಳಿಕೊಂಡಿದ್ದಾಳೆ.
ಮಂಡಿಯೂರಿ ಪ್ರಪೋಸ್ ಮಾಡಿದ ಗೆಳೆಯನಿಗೆ ಕಾದಿತ್ತು ಅಚ್ಚರಿ, ತಲೆ ಎತ್ತಿ ನೋಡಿದಾಗ ಗೆಳತಿ ನಾಪತ್ತೆ!