ಟಾಟಾ , ಬೈ ಬೈ ಖತಂ.. ವಧುವನ್ನ ರಾಕೆಟ್‌ನಲ್ಲಿ ಹಾರಿಸ್ಕೊಂಡು ಹೋದ ವರ

By Mahmad Rafik  |  First Published Aug 27, 2024, 2:32 PM IST

ದಶಕಗಳ ಹಿಂದಿನ  ಮದುವೆ ವಿಡಿಯೋಗಳು ನೋಡಿದ್ರೆ ಸ್ವಲ್ಪ ವಿಚಿತ್ರ ಅನ್ನಿಸಬಹುದು. ಅಂದಿನ ಎಡಿಟಿಂಗ್ ಮಾಡುವ ರೀತಿಯೂ ಇಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ.


ನವದೆಹಲಿ: ಮದುವೆ ಸಂಭ್ರಮದ ಕಾರ್ಯಕ್ರಮವಾಗಿದ್ದರೂ, ವಧುವಿನ ಬೀಳ್ಕೊಡುಗೆ ವೇಳೆ ವರನ ಕಡೆಯವರನ್ನು ಹೊರತುಪಡಿಸಿ ಎಲ್ಲರೂ ಭಾವುಕರಾಗಿ ಕಣ್ಣೀರು ಹಾಕುತ್ತಾರೆ. ವಧುವಿನ ಅಪ್ಪ-ಅಮ್ಮ, ಸೋದರಿ-ಸೋದರಿ ಸೇರಿದಂತೆ ಎಲ್ಲರೂ ಭಾರವಾದ ಹೃದಯದಿಂದಲೇ ಬೀಳ್ಕೊಡುತ್ತಾರೆ. ವಧು ಸಹ ಅಳುತ್ತಲೇ ತವರು ತೊರೆದು ಗಂಡನ ಮನೆ ಸೇರುತ್ತಾಳೆ. ಇಂದು ಮದುವೆಯ ಎಲ್ಲಾ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಬಹುದು. ಕಳೆದ ನಾಲ್ಕೈದು ವರ್ಷಗಳಿಂದ ಪ್ರೀ ಮತ್ತು ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್‌ ಟ್ರೆಂಡ್‌ನಲ್ಲಿದೆ. ಮದುವೆ ಅಂದರೆ ಈ ಎರಡೂ ಶೂಟ್‌ಗಳು ಇರಲೇಬೇಕು ಎಂಬಂತಾಗಿದ. 

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಧುವಿನ ಬೀಳ್ಕೊಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದು ಅಸಲಿ ಮದುವೆಯೋ ಅಥವಾ ರೀಲ್ಸ್‌ಗಾಗಿಯೇ  ಈ ರೀತಿ ಮಾಡಲಾಗಿದೆಯಾ ಎಂಬುದರ ಸ್ಪಷ್ಟತೆ ಇಲ್ಲ. ವಿಡಿಯೋ ನೋಡಿದ ನೆಟ್ಟಿಗರು ಮಾತ್ರ ನಕ್ಕು ನಕ್ಕು ಸುಸ್ತಾಗುತ್ತಿದ್ದಾರೆ. ಈ ರೀತಿಯೂ ವಧುವನ್ನು ಕರೆದುಕೊಂಡು ಹೋಗಲಾಗುತ್ತೆ ಎಂಬುದರ ಬಗ್ಗೆ ನಮಗೆ ಗೊತ್ತಿರಲಿಲ್ಲ ಎಂದು ಸೋಶಿಯಲ್ ಮೀಡಿಯಾ ಬಳಕೆದಾರರು ಕಮೆಂಟ್ ಮಾಡುತ್ತಿದ್ದಾರೆ. 

Tap to resize

Latest Videos

ವೈರಲ್ ವಿಡಿಯೋದಲ್ಲಿ ಏನಿದೆ? 
ವಿಡಿಯೋದ ಆರಂಭದಲ್ಲಿ ಪುಟ್ಟ ಗ್ರಾಮವನ್ನು ನೋಡಬಹುದು. ಪೋಷಕರು ಅಳುತ್ತಾ ತಮ್ಮ ಮಗಳನ್ನು ಬೀಳ್ಕೊಡುತ್ತಿರುತ್ತಾರೆ. ವರ ಮುಂದೆ ದೊಡ್ಡದಾದ ರಾಕೆಟ್ ಮೇಲೆ ಕುಳಿತಿರುತ್ತಾನೆ. ಪೋಷಕರು ವಧುವನ್ನು ಅಳುತ್ತಲೇ ವರನ ಬಳಿ ಕರೆದುಕೊಂಡು ಬರುತ್ತಾರೆ. ನಂತರ ವಧು ಸಹ ವರನ ಹಿಂದೆ ರಾಕೆಟ್ ಮೇಲೆ ಕುಳಿತುಕೊಳ್ಳುತ್ತಾನೆ. ನಂತರ ಹಿಂದಿನಿಂದ ಬರುವ ವ್ಯಕ್ತಿ ರಾಕೆಟ್‌ಗೆ ಬೆಂಕಿ ಹಚ್ಚುತ್ತಾನೆ. ವರ ಮತ್ತು ವಧು ರಾಕೆಟ್‌ನಲ್ಲಿ ಹಾರಿ ಹೋಗುತ್ತಾರೆ. 

ಹೆಣ್ಮಕ್ಕಳು ಸೇಫ್ ಆಗಿರಬೇಕಾದ್ರೆ ಒಂದೇ ಒಂದು ಪರಿಹಾರ ಕೊಟ್ಟ ವಿಕಿಪೀಡಿಯಾ- ವಿಡಿಯೋ ನೋಡಿ

ಎಕ್ಸ್ ಪ್ಲಾಟ್‌ಫಾರಂನಲ್ಲಿ @Masterji_UPWale ಎಂಬವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 34 ಸೆಕೆಂಡ್ ಈ ವಿಡಿಯೋ ವೈರಲ್ ಆಗುತ್ತಿದ್ದು, 9 ಲಕ್ಷಕ್ಕೂ ಅಧಿಕ ವ್ಯೂವ್, 6 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಈ ವಿಡಿಯೋ ನೋಡಿದ್ರೆ ಹನಿಮೂನ್‌ಗೆ ವಧುವನ್ನು ನೇರವಾಗಿ ಚಂದ್ರನ ಅಂಗಳಕ್ಕೆ ಕರೆದುಕೊಂಡು ಹೋದಂತಿದೆ. ಇಬ್ಬರ ಹನಿಮೂನ್‌ಗೆ ನಾವೆಲ್ಲರೂ ಶುಭಜಕೋರಣ ಬನ್ನಿ. ಈ ರೀತಿ ಎಡಿಟಿಂಗ್ ಮಾಡಿದ ಆ ವ್ಯಕ್ತಿಗೆ ಇಲ್ಲಿಂದಲೇ ನನ್ನ ಸೆಲ್ಯೂಟ್ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. 

ದಿನದಿಂದ ದಿನಕ್ಕೆ ಬದಲಾಗುತ್ತಿರೋ ಟ್ರೆಂಡ್
ಇಂದು ದಿನಗಳು ಕಳೆದಂತೆ ಮದುವೆಯ ಕಲ್ಪನೆ ಬದಲಾಗುತ್ತಿದೆ. ದಶಕಗಳ ಹಿಂದಿನ ವಿಡಿಯೋಗಳು ನೋಡಿದ್ರೆ ನಗು ಬರುತ್ತದೆ. ಸುಮಾರು  10 ವರ್ಷಗಳ ಹಿಂದಿನ ಫೋಟೋ ತೆಗೆದುಕೊಳ್ಳುತ್ತಿದ್ದ ಸ್ಟೈಲ್ ಇಂದೂ ಸಂಪೂರ್ಣ ಬದಲಾಗಿದೆ. ಇಂದು ಅತ್ಯಾಧುನಿಕ ಎಡಿಟಿಂಗ್ ಆಫ್ಷನ್‌ಗಳು ಲಭ್ಯವಿದ್ದು, ನೈಜದಂತೆ ವಿಡಿಯೋ ಮಾಡಬಹುದು.  

ಸೀಮಂತದ ದಿನವೇ ಪತ್ನಿಯ MMS ಲೀಕ್ ಮಾಡಿ ಅತಿಥಿಗಳಿಗೆ ತೋರಿಸಿದ ಗಂಡ- ವಿಶ್ ಮಾಡೋಕೆ ಬಂದು ತಗ್ಲಾಕೊಂಡ ಗೆಳೆಯ!

India is not for beginners 😜 pic.twitter.com/9YX3Ap3yaj

— Professor (@Masterji_UPWale)
click me!