ರೈಲು ಟಿಕೆಟ್ ಬುಕಿಂಗ್ ಇನ್ನು ಸುಲಭ; ವೈಟಿಂಗ್ ಪಿರಿಯೆಡ್‌ ಎಂದು ಕಾಯಬೇಕಿಲ್ಲ!

Published : Aug 27, 2024, 03:19 PM IST
ರೈಲು ಟಿಕೆಟ್ ಬುಕಿಂಗ್ ಇನ್ನು ಸುಲಭ; ವೈಟಿಂಗ್ ಪಿರಿಯೆಡ್‌ ಎಂದು ಕಾಯಬೇಕಿಲ್ಲ!

ಸಾರಾಂಶ

ಭಾರತೀಯ ರೈಲ್ವೇ ಟಿಕೆಟ್ ಬುಕಿಂಗ್ ವೇಳೆ ವೈಟಿಂಗ್ ಪಿರಿಯೆಡ್ ಎಂದು ಕಾದು ಕೊನೆಗೆ ತತ್ಕಾಲದಲ್ಲಿ ಬುಕಿಗ್ ಮಾಡಬೇಕಾದ ಪರಿಸ್ಥಿತಿ ಹಲವರಿಗೆ ಎದುರಾಗಿದೆ. ಆದರೆ ಇನ್ನು ವೈಟಿಂಗ್ ಪಿರಿಯೆಡ್ ಇರುವುದಿಲ್ಲ, ಸುಲಭವಾಗಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದು.  

ನವದೆಹಲಿ(ಆ.27) ಭಾರತೀಯ ರೈಲ್ವೇ ಹಲವು ಸುಧಾರಣೆ ಮಾಡಿಕೊಂಡಿದೆ. ಪ್ರಮುಖವಾಗಿ ಆನ್‌ಲೈನ್ ಟಿಕೆಟ್ ಬುಕಿಂಗ್‌ನಲ್ಲಿ ಎದುರಾಗುವ ಕೆಲ ಸಮಸ್ಯೆಗಳು ಪ್ರಯಾಣಿಕರನ್ನು ಹೈರಾಣಾಗಿಸುತ್ತದೆ. ಈ ಪೈಕಿ ವೈಟಿಂಗ್ ಪಿರಿಯೆಡ್ ಕೂಡ ಒಂದು. ಪ್ರಯಾಣಕ್ಕಾಗಿ ರೈಲು ಟಿಕೆಟ್ ಬುಕಿಂಗ್ ಮಾಡಿದರೆ ವೈಟಿಂಗ್ ಪಿರಿಯೆಟ್ ಎಂದು ಪ್ರಯಾಣಕರು ಟಿಕೆಟ್ ಖಚಿತತೆಗಾಗಿ ಕಾಯಬೇಕು. ಇದರ ಪರಿಣಾಮ ಆರಾಮದಾಯಕ ಪ್ರಯಾಣಕ್ಕಾಗಿ ಬೇರೆ ಸಾರಿಗೆಯಲ್ಲಿ ಟಿಕೆಟ್ ಬುಕ್ ಮಾಡಬೇಕಾದ ಪರಿಸ್ಥಿತಿಗಳು ಎದುರಾಗುವುದು ಸಾಮಾನ್ಯವಾಗಿತ್ತು.ಆದರೆ ಇದೀಗ ಭಾರತೀಯ ರೈಲ್ವೇ ಹೊಸ ತಂತ್ರಜ್ಞಾನ ಹಾಗೂ ರೈಲು ಟಿಕೆಟ್ ಸಾಮರ್ಥ್ಯ ಹೆಚ್ಚಿಸಲಾಗುತ್ತಿದೆ. ಇದರಿಂದ ಟಿಕೆಟ್ ಬುಕಿಂಗ್ ಮಾಡಿದ ತಕ್ಷಣವೇ ಕನ್‌ಫರ್ಮೇಶನ್ ಬರಲಿದ್ದು, ಟಿಕೆಟ್ ಖಚಿತಗೊಳ್ಳಲಿದೆ.

ಅತ್ಯಾಧುನಿಕ ರೈಲು ಟಿಕೆಟ್ ಬುಕಿಂಗ್ ವ್ಯವಸ್ಥೆ ಈಗಾಗಲೇ ಆರಂಭಗೊಂಡಿದೆ. ಹಂತ ಹಂತವಾಗಿ ಅತ್ಯಾಧುನಿಕ ತಂತ್ರಜ್ಞಾನ ಜಾರಿಯಾಗಲಿದೆ. ಈಗಾಗಲೇ ಬ್ಯಾಕ್ಎಂಡ್ ಕೋಡಿಂಗ್ ಕೆಲಸಗಳು ನಡೆಯುತ್ತಿದೆ.  ಹೊಸ ವಿಧಾನದಿಂದ ಪ್ರಯಾಣಿಕರು ಸುಲಭವಾಗಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದು. ಅಷ್ಟೇ ವೇಗದಲ್ಲಿ ಹಣ ಪಾವತಿ ಮಾಡಿ, ಟಿಕೆಟ್ ಕನ್‌ಫರ್ಮೇಶನ್ ಪಡೆಯಲು ಸಾಧ್ಯವಿದೆ ಎಂದು IRCTC ಚೇರ್ಮೆನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಜೈನ್ ಹೇಳಿದ್ದಾರೆ.

ಭಾರತೀಯ ರೈಲ್ವೆಯಲ್ಲಿ 12 ಸಾವಿರ TTE ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನಿಸಿದ ಇಲಾಖೆ!

ಹಾಲಿ ವ್ಯವಸ್ಥೆಯಲ್ಲಿ ಟಿಕೆಟ್ ಬುಕಿಂಗ್ ವೇಳೆ ಹಣ ಪಾವತಿಸಿದ ಬಳಿಕ ವೈಟಿಂಗ್ ಪಿರಿಯೆಡ್ ಸ್ಟೇಟಸ್ ಇದ್ದರೆ, ಅತ್ತ ಹಣವೂ ಕಡಿತಗೊಂಡಿರುತ್ತದೆ, ಇತ್ತ ಟಿಕೆಟ್ ಖಚಿತವಾಗಿರುವುದಿಲ್ಲ. ಇದು ಪ್ರಯಾಣಿಕರಿಗೆ ತೀವ್ರ ಸಮಸ್ಸೆ ತಂದೊಡ್ಡುತ್ತಿತ್ತು. ಈ ಕುರಿತು ದಶಕಗಳಿಂದ ದೂರುಗಳು ಸಲ್ಲಿಕೆಯಾಗಿದೆ. ಇದೀಗ ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಹೊಸ ವಿಧಾನದ ಬುಕಿಂಗ್ ವ್ಯವಸ್ಥೆಯನ್ನು ರೈಲ್ವೇ ಇಲಾಖೆ ಜಾರಿಗೆ ತರುತ್ತಿದೆ.

ಆನ್‌ಲೈನ್ ಟಿಕೆಟ್ ಸಾಮರ್ಥ್ಯ ಕಡಿಮೆಯಾಗಿರುವ ಕಾರಣ ಈ ಸಮಸ್ಯೆಯಾಗಿದೆ. ಆದರೆ ಹೊಸ ವ್ಯವಸ್ಥೆಯಲ್ಲಿ ಆನ್‌ಲೈನ್ ಟಿಕೆಟ್ ಬುಕಿಂಗ್ ಸಾಮರ್ಥ್ಯ ಹೆಚ್ಚಿಸಲಾಗುತ್ತಿದೆ. ಜೊತೆಗೆ ತಂತ್ರಜ್ಞಾನವನ್ನು ಆಧುನೀಕರಣಗೊಳಿಸಲಾಗುತ್ತಿದೆ. ಇದರಿಂದ ಟಿಕೆಟ್ ಬುಕ್ ಮಾಡುವ ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಸಂಜಯ್ ಜೈನ್ ಹೇಳಿದ್ದಾರೆ.

ಸದ್ಯದ ಮಾಹಿತಿ ಪ್ರಕರಾ ಭಾರತೀಯ ರೈಲ್ವೇಯಲ್ಲಿ ಪ್ರತಿ ದಿನ 9 ಲಕ್ಷ ಮಂದಿ ಆನ್‌ಲೈನ್ ಮೂಲಕ ಟಿಕೆಟ್ ಬುಕಿಂಗ್ ಮಾಡಿ ಪ್ರಯಾಣ ಮಾಡುತ್ತಿದ್ದಾರೆ. ಇನ್ನು ರೈಲು ನಿಲ್ದಾಣಗಳಲ್ಲಿನ ಬುಕಿಂಗ್, ಎಜೆಂಟ್ ಮೂಲಕ ಬುಕಿಂಗ್ ಮೂಲಕ ಒಟ್ಟು 2 ಕೋಟಿಗೂ ಅಧಿಕ ಮಂದಿ ಪ್ರತಿ ದಿನ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. 

ಬೆಂಗಳೂರು ಕೋಲ್ಕತಾ ರೈಲು ಟಿಕೆಟ್ ದರ 10 ಸಾವಿರ ರೂ, ಬೆಚ್ಚಿದ ಪ್ರಯಾಣಿಕನಿಗೆ ನೆಟ್ಟಿಗರ ಅದ್ಭುತ ಸಲಹೆ!

2023ರಲ್ಲಿ ರೈಲು ಟಿಕೆಟ್ ಬುಕಿಂಗ್ ಸಾಮರ್ಥ್ಯ ಹೆಚ್ಚಿಸುವ ಮಹತ್ವದ ಯೋಜನೆ ಘೋಷಣೆ ಮಾಡಲಾಗಿದೆ. ಹಂತ ಹಂತವಾಗಿಯೋಜನೆ ಕಾರ್ಯಗತಗೊಳ್ಳುತ್ತಿದೆ. ಪ್ರತಿ ನಿಮಿಷಕ್ಕೆ 25,000 ಟಿಕೆಟ್ ಬುಕಿಂಗ್ ಸಾಮರ್ಥ್ಯವನ್ನು ಇದೀಗ 2.5 ಲಕ್ಷಕ್ಕೆ ಏರಿಕೆ ಮಾಡಲಾಗುತ್ತಿದೆ. ಈಗಾಗಲೇ ಯೋಜನೆ ಜಾರಿಗೆ ಕೆಲಸಗಳು ಆರಂಭಗೊಂಡಿದೆ. ಮಾರ್ಚ್ 2025ರ ವೇಳೆ ಸಂಪೂರ್ಣವಾಗಲಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಕೆಎಸ್‌ಸಿಎ ಚುನಾವಣೆ - ಅಸ್ತಿತ್ವದಲ್ಲೇ ಇಲ್ಲದ ಕ್ಲಬ್‌ಗಳ ಹೆಸರು ಮತದಾನ ಪಟ್ಟಿಯಲ್ಲಿ ಪತ್ತೆ!
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌