ನನ್ನ ಕಾರಿನಲ್ಲಿ ಕೂರುವ ಯೋಗ್ಯತೆ ನಿನಗಿಲ್ಲ: ನಡು ರಸ್ತೆಯಲ್ಲಿ ಪತ್ನಿ ಇಳಿಸಿ ಹೊರಟ ಗಂಡ!

By Chethan Kumar  |  First Published Aug 5, 2024, 4:14 PM IST

ಅನಾರೋಗ್ಯದ ಕಾರಣ ಮಗುವನ್ನು ಕರೆದುಕೊಂಡು ಪತಿ ಹಾಗೂ ಪತ್ನಿ ಇಬ್ಬರು ಕಾರಿನಲ್ಲಿ ಹೊರಟಿದ್ದಾರೆ.  ಆದರೆ ನಡು ರಸ್ತೆಯಲ್ಲೇ ನಿನಗೆ ನನ್ನ ಕಾರಿನಲ್ಲಿ ಕೂರುವ ಅರ್ಹತೆ ಇಲ್ಲ ಎಂದು ಪತ್ನಿಯನ್ನು ಕಾರಿನಲ್ಲಿ ಇಳಿಸಿ ಹೊರಟಿದ್ದಾನೆ. ಕಾರಣ ಕೇಳಿದರೆ ಅಚ್ಚರಿಯಾಗುವುದು ಖಚಿತ.
 


ಫಿರೋಜಾಬಾದ್(ಆ.05) ನಡು ರಸ್ತೆಯಲ್ಲಿ ಪತ್ನಿಯನ್ನು ಕಾರಿನಿಂದ ಇಳಿಸಿದ ಪತಿ, ನಿನಗೆ ನನ್ನ ಕಾರಿನಲ್ಲಿ ಕುಳಿತುವ ಕೊಳ್ಳುವ ಯೋಗ್ಯತೆ ಇಲ್ಲ ಎಂದು ಹೇಳಿ ವೇಗವಾಗಿ ಹೊರಟ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ನಡೆದಿದೆ. ಮಗುವಿಗೆ ಅನಾರೋಗ್ಯದ ಕಾರಣ ಪತಿ ಹಾಗೂ ಪತ್ನಿ ವೈದ್ಯರ ಬಳಿ ತೆರಳುವಾಗ ಈ ಘಟನೆ ನಡೆದಿದೆ. ಪತಿಯ ಮನೆಗೆ ಮರಳಿದ ಪತ್ನಿಯನ್ನು ಮನೆಗೆ ಸೇರಿಸಿಲ್ಲ. ಇದರ ಪರಿಣಾಮ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಸಂಧಾನದ ವೇಳೆ ಪತಿ ಕಾರಿನಿಂದ ಇಳಿಸಿದ ಕಾರಣ ಕೇಳಿ ಪೊಲೀಸರು ಅಚ್ಚರಿಗೊಂಡಿದ್ದಾರೆ.

ನಡು ರಸ್ತೆಯಲ್ಲಿ ಪತ್ನಿಯನ್ನು ಇಳಿಸಿ, ನನ್ನ ಕಾರಿನಲ್ಲಿ ಕೂರಬೇಡ, ಆ ಅರ್ಹತೆ ನಿನಗಿಲ್ಲ ಎಂದಿದ್ದಾನೆ. ಇದಕ್ಕೆ ಕಾರಣ ಪತ್ನಿಯ ಮನೆಯಿಂದ ವರದಕ್ಷಿಣೆ ರೂಪದಲ್ಲಿ ಕಾರು ಕೊಡಿಸಿಲ್ಲ. ತಾನು ತೆಗೆದುಕೊಂಡ ಕಾರಿನಲ್ಲಿ ನಿನಗೆ ಕುಳಿತುಕೊಳ್ಳುವ ಅರ್ಹತೆ ಇಲ್ಲ ಎಂದಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾಳೆ. ನಿನ್ನ ತಂದೆ ಕಾರು ಕೊಟ್ಟಿಲ್ಲ, ದುಡ್ಡು ಕೊಟ್ಟಿಲ್ಲ. ಆದರೂ ಇಷ್ಟು ದಿನ ನಿನ್ನನ್ನು ಸಾಕಿದ್ದೇ ನನ್ನ ದೊಡ್ಡತನ. ಇದು ನಾನು ಸ್ವಂತ ಹಣದಿಂದ ಖರೀದಿಸಿದ ಕಾರು. ಹೀಗಾಗಿ ಇಳಿ ಕೆಳಗೆ ಎಂದು ಪತ್ನಿಯನ್ನು ಇಳಿಸಿ, ಮಗುವನ್ನು ಕರೆದುಕೊಂಡು ಪತ್ನಿ ಸಾಗಿದ್ದಾನೆ ಎಂದು ಆರೋಪಿಸಿದ್ದಾಳೆ.

Tap to resize

Latest Videos

undefined

ಮಹಿಳಾ ಪೊಲೀಸ್ ಜೊತೆ ಇನ್ಸ್‌ಪೆಕ್ಟರ್ ಪತಿಯ ರಾಸಲೀಲೆ ರೆಡ್‌ಹ್ಯಾಂಡ್ ಆಗಿ ಹಿಡಿದ ಪತ್ನಿ, ದೃಶ್ಯ ಸೆರೆ!

2020ರಲ್ಲಿ ಈ ಮಹಿಳೆ ನೋಯ್ಡಾದ ವಿಕಾಸ್ ಸೋಂಕಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾಳೆ. ಮಹಿಳೆ ಪೋಷಕರು 12 ಲಕ್ಷ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿದ್ದಾರೆ. ಮದುವೆ ವೇಳೆ ವರದಕ್ಷಿಣೆ ರೂಪದಲ್ಲೂ ಹಣ ನೀಡಿದ್ದಾರೆ. ಆದರೆ ಮದುವೆಯಾದ ದಿನದಿಂದ ಪತಿ ವರದಕ್ಷಿಣೆ ನೀಡುವಂತೆ ಕಿರುಕುಳ ನೀಡಿದ್ದಾನೆ. ಇದರ ನಡುವೆ ಮಗುವಿನ ಜನನವಾದರೂ ಕಿರುಕುಳ ಮಾತ್ರ ತಪ್ಪಿಲ್ಲ. ಪತಿಯ ಪೋಷಕರು ಕಿರುಕುಳ ನೀಡಿದ್ದಾರೆ ಎಂದು ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಪತಿಯ ತಂದೆ ಮುಕೇಶ್ , ತಾಯಿ ಸೀಮಾ ದೇವಿ ಹಾಗೂ ಪತಿಯ ಸಹೋದರಿ ಶೀತಲ್ ಭಾಟಿ ಇದೇ ವರದಕ್ಷಿಣೆ ವಿಚಾರವಾಗಿ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ. ಪೊಲೀಸರು ಸಂಧಾನದ ಪ್ರಯತ್ನ ಮಾಡಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಹೀಗಾಗಿ ಮಹಿಳೆ ಪತಿ ಹಾಗೂ ಪತ್ನಿ ಕುಟುಂಬಸ್ಥರ ವಿರುದ್ದ ವರದಕ್ಷಿಣೆ ಹಾಗೂ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ.

ಇವನೆಂತಾ ಗಂಡ? ಪತ್ನಿಗೆ ಪೊರ್ನ್ ವಿಡಿಯೋ ತೋರಿಸಿ ಆಫ್ರಿಕಾ ಪುರುಷನ ಜೊತೆ ಸೆಕ್ಸ್‌ಗೆ ಒತ್ತಾಯ!
 

click me!