ಮನೆ ಪಕ್ಕದಲ್ಲಿಯೇ ಆಡ್ತಿದ್ದ 4 ವರ್ಷದ ಮಗುವಿನ ಸಾವು, ಸಿಸಿಟಿವಿಯಲ್ಲಿ ಸೆರೆಯಾಯ್ತು ಕಂದಮ್ಮನ ಕೊನೆ ಕ್ಷಣ!

Published : Aug 05, 2024, 03:12 PM IST
ಮನೆ  ಪಕ್ಕದಲ್ಲಿಯೇ ಆಡ್ತಿದ್ದ 4 ವರ್ಷದ ಮಗುವಿನ ಸಾವು, ಸಿಸಿಟಿವಿಯಲ್ಲಿ ಸೆರೆಯಾಯ್ತು ಕಂದಮ್ಮನ ಕೊನೆ ಕ್ಷಣ!

ಸಾರಾಂಶ

ಆ ಸಮಯದಲ್ಲಿ ಯಾರೂ ಇಲ್ಲದ ಕಾರಣ ಮಗು ಉಸಿರು ಚೆಲ್ಲಿದೆ. ಈ ಎಲ್ಲಾ ದೃಶ್ಯಗಳು ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 

ಅಹಮದ್‌ನಗರ: ಮಹಾರಾಷ್ಟ್ರದ ಅಹಮದ್‌ನಗರದ ಮುಕುಂದ ನಗರದ ವ್ಯಾಪ್ತಿಯಯಲ್ಲಿ ಬಾಲಕನೋರ್ವ ಮ್ಯಾನ್‌ಹೋಲ್‌ನಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ಬಾಲಕ ಮನೆಯ ಮುಂದೆಯೇ ಆಟವಾಡುತ್ತಿದ್ದನು. ಆಟವಾಡುತ್ತಾ ಮ್ಯಾನ್‌ಹೋಲ್ ಮೇಲೆ ಕಾಲಿಡುತ್ತಿದ್ದಂತೆ ಮುಚ್ಚಳ ತೆರದಿದ್ದರಿಂದ ಬಾಲಕ ಒಳಚರಂಡಿಯ ಪಾಲಾಗಿದ್ದಾನೆ. ಆ ಸಮಯದಲ್ಲಿ ಯಾರೂ ಇಲ್ಲದ ಕಾರಣ ಮಗು ಉಸಿರು ಚೆಲ್ಲಿದೆ. ಈ ಎಲ್ಲಾ ದೃಶ್ಯಗಳು ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 

ಮಗು ಮನೆಯ ಗೋಡೆಯ ಪಕ್ಕದಲ್ಲಿಯೇ ಆಟವಾಡುತ್ತಿತ್ತು. ಆಟವಾಡುತ್ತಾ ಮಗು ಮ್ಯಾನ್‌ಹೋಲ್ ಬಳಿ ಹೋಗುತ್ತದೆ. ಮ್ಯಾನ್‌ಹೋಲ್ ಮೇಲೆ ಮುಚ್ಚಲಾಗಿತ್ತು. ಆದರೆ ಮಗು ಮುಚ್ಚಳದ ಮೇಲೆ ಕಾಲಿಡುತ್ತಿದ್ದಂತೆ ಅದು ತೆರೆದುಕೊಂಡು ಒಳಗೆ ಬಿದ್ದಿದೆ. ಮುಚ್ಚಳದ ಜೊತೆ ಮಗು ಸಹ ಒಳಚರಂಡಿಯಲ್ಲಿ ಬಿದ್ದಿದೆ. ಒಳಚರಂಡಿಯಲ್ಲಿ ಮಗು ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ಜನರು ಜಮಾಯಿಸಿ ಬಾಲಕನನ್ನು ಮೇಲಕ್ಕೆತ್ತಲಾಗಿದೆ. ಆದರೆ ಅಷ್ಟರಲ್ಲಿ ಮಗು ಮೃತಪಟ್ಟಿತ್ತು. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾರ್ವಜನಿಕರು ಸ್ಥಳೀಯಾಡಳಿತ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡುಮ ತನಿಖೆ ನಡೆಸಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಮಮ್ಮಿ… 10 ನಿಮಿಷದಲ್ಲಿ ಬಂದೆ ಅಂತ ಮುಂದೆ ಹೋಗ್ತಿದ್ದಂತೆ ಸಾವು, ಒಣಹುಲ್ಲಿನಂತೆ ಮಳೆ ನೀರಿನಲ್ಲಿ ಮುಳುಗಿದ ಬಾಲಕ!

ಇದೇ ರೀತಿಯ ಘಟನೆಯೊಂದು ಪುಣೆ ಬಳಿಯ ಪಿಂಪರಿ ಚಿಂಚ್ವಾಡದಲ್ಲಿ ನಡೆದಿತ್ತು, ಕೆಲ ಮಕ್ಕಳು ಕಟ್ಟಡ ಮುಂಭಾಗದ ಗೇಟ್ ಬಳಿ ಆಟವಾಡುತ್ತಿದ್ದವು. ದಿಢೀರ್ ಅಂತ ಬೃಹತ್ ಗೇಟ್ ಬಿದ್ದಿದ್ದರಿಂದ ಮೂರು ವರ್ಷದ ಮಗು ಸಾವನ್ನಪ್ಪಿತ್ತು. ಗೇಟ್ ಮಕ್ಕಳ ಮೇಲೆ ಬಿದ್ದ ಕಾರಣ ಮಗುವಿನ ಸಾವು ಆಗಿತ್ತು. ಕೆಲವರು ಗಾಯಗೊಂಡಿದ್ದರು. ಈ ಘಟನೆ ಸಂಬಂಧ ಕಟ್ಟಡ ಮಾಲೀಕನ ವಿರುದ್ದ ಪ್ರಕರಣ ದಾಖಲಾಗಿತ್ತು. ಗೇಟ್ ದುರಸ್ತಿಗೆ ಒಳಗಾಗಿದ್ದರೂ, ಮಾಲೀಕ ಅದರ ರಿಪೇರಿ ಮಾಡಿಸಿರಲಿಲ್ಲ.

ಮಳೆ ನೀರಿನಲ್ಲಿ ಆಡುತ್ತಿದ್ದ ಬಾಲಕನ ಸಾವು

ಜೈಪುರದಲ್ಲಿಯೂ ಸುಮಾರು 14 ವರ್ಷದ ಬಾಲಕ ಮ್ಯಾನ್‌ಹೋಲ್‌ ನಲ್ಲಿ ಬಿದ್ದು, ಮೃತನಾಗಿದ್ದನು. ಮಳೆ ಬಂದಿದ್ದರಿಂದ ಮನೆ ಮುಂದಿನ ರಸ್ತೆಯಲ್ಲಿ ನೀರು ನಿಂತಿತ್ತು. ಹತ್ತೇ ನಿಮಿಷದಲ್ಲಿ ಬರೋದಾಗಿ ಹೊರಡಿದ್ದ ಬಾಲಕ ತೆರೆದ ಮ್ಯಾನ್‌ಹೋಲ್‌ನಲ್ಲಿ ಬಿದ್ದಿದ್ದನು. ನೀರು ತುಂಬಿದ್ದರಿಂದ ಬಾಲಕನಿಗೆ ಮ್ಯಾನ್‌ಹೋಲ್ ಕಾಣಿಸಿರಲಿಲ್ಲ. ಮನೆಯಿಂದ ಒಂದೂವರೆ ಕಿಲೋ ಮೀಟರ್ ದೂರದಲ್ಲಿ ಬಾಲಕನ ಶವ ಪತ್ತೆಯಾಗಿತ್ತು.

ಖುಷಿಯಿಂದ ಕುಣಿಯುತ್ತಿದ್ದಾಗಲೇ ಹೊರಟೋಯ್ತು ಶಿಕ್ಷಕನ ಜೀವ: ವೀಡಿಯೋ ವೈರಲ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?